ಗುಡ್ಡೆಹೊಸೂರು, ಫೆ. ೨: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ವಿಭಾಗಗಳಲ್ಲಿ ಹಳೆ ವಿದ್ಯಾರ್ಥಿ ಗಳಿಗೆ, ಎಸ್.ಡಿ.ಎಂ.ಸಿ. ಸದಸ್ಯರುಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಿತು.

ಸಮಾರೋಪ ಸಮಾರಂಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್. ಪರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಉದ್ಘಾಟಿಸಿದರು. ಬಹುಮಾನ ವಿತರಣೆಯನ್ನು ಆರೋಗ್ಯ ಇಲಾಖಾ ನಿವೃತ್ತ ಅಧಿಕಾರಿ ಎ.ಎ.ಪಾರ್ವತಿ ಅವರು ನಡೆಸಿದರು. ಈ ಸಂದರ್ಭ ಮುಖ್ಯ ಭಾಷಣಕಾ ರರಾಗಿ ಉ.ರಾ. ನಾಗೇಶ್ ಹಾಜರಿದ್ದು. ಶಿಕ್ಷಣ ನೀತಿ ಮತ್ತು ವಿದ್ಯಾರ್ಥಿಗಳ ಕಲಿಕಾ ರೀತಿಯ ಬಗ್ಗೆ ವಿವರಿಸಿದರು. ಎಸ್.ಡಿ.ಎಂ.ಸಿ.ಯ ಮಾಜಿ ಅಧ್ಯಕ್ಷರುಗಳಾದ ಬಿ.ಪಿ ಗುರುಬಸಪ್ಪ, ಬಿ.ಎನ್.ಕಾಶಿ, ಬಿ.ಎಸ್.ದಿನೇಶ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೆ ಮಾಜಿ ಸದಸ್ಯರುಗಳಾದ ಶುಭಶೇಖರ್, ಬಿ.ಎಸ್.ಧನಪಾಲ್, ಎಸ್.ಎಸ್. ರಾಮಕೃಷ್ಣ ಈ ಸಂದÀರ್ಭ ಶಾಲಾ ಸಹಶಿಕ್ಷಕ ವೃಂದ ಮತ್ತು ಪೋಷಕ ವೃಂದ ಹಾಜರಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸÀ್ಕೃತಿಕ ಕಾರ್ಯಕ್ರಮ ನಡೆಯಿತು.

ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಮರಿಯಾ ಕಾರ್ಯಕ್ರಮ ನಿರೂಪಿಸಿದರು. ಸಿ.ಪಿ. ಕವಿತ ವರದಿ ವಾಚಿಸಿದರು. ಶಿಕ್ಷಕಿ ಕೆ.ಎನ್. ರುಕ್ಮಿಣಿ ದತ್ತಿನಿಧಿ ವಿತರಿಸಿದರು. ಶಿಕ್ಷಕಿ ಜಯಂತಿ ಬಹುಮಾನ ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಯಶುಮತಿ ನಡೆಸಿದರು. ಈ ಸಂದರ್ಭ ಇಲ್ಲಿನ ಗ್ರಾ.ಪಂ. ಸದಸ್ಯರುಗಳು ಭಾಗವಹಿಸಿದ್ದರು.