ಕೂಡಿಗೆ, ಫೆ. ೨: ರಾಜ್ಯದಲ್ಲಿಯೇ ಪ್ರಪ್ರಥಮ ಕ್ರೀಡಾ ಪ್ರೌಢಶಾಲೆಯಾಗಿದ್ದ ಕೂಡಿಗೆ ಕ್ರೀಡಾಶಾಲೆಯ ಅಭಿವೃದ್ಧಿಗೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ ನಿಲಯದ ಕಟ್ಟಡದ ಕಾಮಗಾರಿಗಳಿಗೆ ಮತ್ತು ಇತರ ದುರಸ್ತಿಗೆ ಸಂಬAಧಿಸಿದAತೆ ರೂ. ೨ ಕೋಟಿ ಹಣವು ಇಲಾಖೆಯ ಮುಖೇನ ಬಿಡುಗಡೆಗೊಳಿಸಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಕಳೆದ ಎರಡು ತಿಂಗಳುಗಳ ಹಿಂದೆ ಶಾಸಕರ ಸಮ್ಮುಖದಲ್ಲಿ ಕ್ರೀಡಾಶಾಲೆಗೆ ತುರ್ತಾಗಿ ಆಗಬೇಕಾಗಿರುವ ಕಾಮಗಾರಿಗಳನ್ನು ಶಾಸಕರೇ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಶಾಲೆಯ ಹಳೆಯ ಬಾಲಕರ ಮತ್ತು ಬಾಲಕಿಯರು ವಸತಿ ನಿಲಯದ ದುರಸ್ತಿ ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ನೀರಿನ ಟ್ಯಾಂಕ್, ಕ್ರೀಡಾ ಶಾಲೆಯ ಪದವಿಪೂರ್ವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ವಸತಿ ಗೃಹ ನಿರ್ಮಾಣಕ್ಕೆ ಸಂಬAಧಿಸಿದAತೆ ಹೊಸ ಕಟ್ಟಡದ ನಿರ್ಮಾಣ ಸೇರಿದಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯಮಟ್ಟದ ಇಂಜಿನಿಯರ್ ಮತ್ತು ಅವರ ತಂಡದ ಜೊತೆಗೆ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ರೂ. ೨ ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಆರಂಭ ಮಾಡಲು

(ಮೊದಲ ಪುಟದಿಂದ) ಹಣಕಾಸು ಇಲಾಖೆಯ ಮೂಲಕ ಹಣ ಬಿಡುಗಡೆ ಗೊಂಡು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಟೆಂಡರ್ ಪ್ರಕ್ರಿಯೆಯು ಅಂತ್ಯಗೊAಡಿದ್ದು, ಕಾಮಗಾರಿಗಳು ಸದ್ಯದಲ್ಲಿ ಆರಂಭವಾಗಲಿವೆ ಎಂದು ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಕೂಡುಮಂಗಳೂರು ಶಕ್ತಿ ಕೇಂದ್ರ ಪ್ರಮುಖ್‌ರಾದ ಮಂಜುನಾಥ, ಪ್ರವೀಣ್, ಜಿಲ್ಲಾ ಕುರುಬರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಭಾಕರ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಮಾಡ್ಲಿಗೌಡ, ದಿನೇಶ್, ಗಿರೀಶ್, ಮಣಿಕಂಠ, ವಿಜಯ ಸಂಕಲ್ಪದ ಪ್ರಮುಖರಾದ ಕೆ. ವರದ ಬಿಜೆಪಿ ಘಟಕದ ಪ್ರಮುಖರು ಹಾಜರಿದ್ದರು.