ಸೋಮವಾರಪೇಟೆ, ಫೆ. ೨: ಇಲ್ಲಿನ ಪುಷ್ಪಗಿರಿ ಸಂಸ್ಥೆಯ ಲೇಡಿ ಜೇಸಿ ವಿಭಾಗದಿಂದ ಚೌಡೇಶ್ವರಿ ಬಡಾವಣೆಯ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತು ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.
ಲೇಡಿ ಜೇಸಿ ಚೇರ್ ಪರ್ಸನ್ ಪವಿತ್ರ ಲಕ್ಷ್ಮೀಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ಅಂಗನವಾಡಿ ಶಿಕ್ಷಕಿ ಗೌರಮ್ಮ ಉದ್ಘಾಟಿಸಿದರು. ಜೇಸಿ ಸಂಸ್ಥೆಯ ಅಧ್ಯಕ್ಷೆ ರುಬೀನಾ ಎಂ.ಎ. ಮಾತನಾಡಿ, ಬದುಕಿನ ಜಂಜಾಟದ ನಡುವೆ ಒಂದಷ್ಟು ಸಮಯವನ್ನು ಮನಃಶಾಂತಿಗಾಗಿ ಮೀಸಲಿಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ನಾಗರತ್ನ, ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ವಿನುತ ಸುದೀಪ್, ವಿದ್ಯಾ ಸೋಮೇಶ್, ಕಸ್ತೂರಿ, ಜೇಸಿ ರಿಶಾ, ಚೌಡೇಶ್ವರಿ ಬಡಾವಣೆಯ ಜನತೆ ಹಾಗೂ ಸಂಗಮ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಂಗೋಲಿ ಸ್ಪರ್ಧೆಯ ತೀರ್ಪುಗಾರಿಕೆಯನ್ನು ಆಶಾ ಸತೀಶ್ ಮಾಡಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.