ಮಡಿಕೇರಿ, ಫೆ. ೨: ಕುಶಲ ಕರ್ಮಿಗಳಿಗೆ ಸಾಲ ಸಹಾಯಧನ ಕಾರ್ಯಕ್ರಮವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾ ವತಿಯಿಂದ ಅನುಷ್ಠಾನ ಗೊಳಿಸಲಾಗುತ್ತಿದೆ. ಕುಶಲಕರ್ಮಿಗಳು ತಮ್ಮ ವೃತ್ತಿಯನ್ನು ಮುಂದು ವರೆಸಿಕೊಂಡು ಹೋಗಲು ಬ್ಯಾಂಕ್‌ನಿAದ ಸಾಲ ಪಡೆದಲ್ಲಿ, ಇಲಾಖಾ ವತಿಯಿಂದ ಶೇ.೩೦ ರಷ್ಟು ಹಾಗೂ ಗರಿಷ್ಠ ರೂ. ೧೫ ಸಾವಿರಗಳ ವರೆಗೆ ಸಹಾಯಧನ ನೀಡಲಾಗುತ್ತದೆ.

ಕುಶಲ ಕರ್ಮಿಯು ೧೮ ವರ್ಷ ವಯಸ್ಸಾಗಿರಬೇಕು ಹಾಗೂ ಇಲಾಖೆ ನಿಗದಿಪಡಿಸಿದ ಯಾವುದಾದರೂ ಒಂದು ವೃತ್ತಿಯಲ್ಲಿ ತೊಡಗಿಸಿ ಕೊಂಡಿರಬೇಕು. ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್, ಪ್ರಾದೇಶಿಕ ಬ್ಯಾಂಕ್ ವತಿಯಿಂದ ಸಾಲ (ಅವಧಿ ಹಾಗೂ ದುಡಿಮೆ ಬಂಡವಾಳ) ಪಡೆಯಬೇಕು. ಅಭ್ಯರ್ಥಿಯು ನಿಗದಿಪಡಿಸಿದ ಅರ್ಜಿಯ ಜೊತೆಗೆ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಕುಶಲಕರ್ಮಿ ವೃತ್ತಿಯ ಬಗ್ಗೆ ದೃಢೀಕರಣ ಪತ್ರಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ತಾ. ೧೦ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಕಚೇರಿಯನ್ನು (೦೮೨೭೨-೨೨೮೪೩೧ / ೨೨೮೭೪೬) ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.