ಮಡಿಕೇರಿ, ಫೆ. ೨: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಡಿಕೇರಿ ಪ್ರಾದೇಶಿಕ ಕೇಂದ್ರ ವತಿಯಿಂದ ೨೦೨೩ ರ ಜನವರಿ ಆವೃತ್ತಿಗೆ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ನಾತಕ ಶಿಕ್ಷಣ ಕಾರ್ಯಕ್ರಮಗಳು ಬಿ.ಎ., ಬಿ.ಕಾಂ, ಬಿ.ಲಿಬ್.ಐಎಸ್ಸಿ, ಬಿ.ಬಿ.ಎ (ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್), ಬಿ.ಎಸ್ಸಿ (ಸಂಯೋಜನೆಗಳು), ಸ್ನಾತಕೋತ್ತರ (ಪಿಜಿ) ಶಿಕ್ಷಣ ಕಾರ್ಯಕ್ರಮಗಳು ಎಂ.ಎ., ಎಂಬಿಎ, ಎಂಕಾA, ಎಂ.ಲಿಬ್, ಐಎಸ್ಸಿ, ಎಂಎಸ್ಸಿ, ಪ್ರವೇಶಾತಿ ಹಾಗೂ ಇನ್ನಿತರ ಮಾಹಿತಿಗೆ ಅರ್ಜಿದಾರರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಅಧಿಕೃತ ವೆಬ್ಸೈಟ್ ತಿತಿತಿ.ಞsoumಥಿsuಡಿu.ಚಿಛಿ.iಟಿನ್ನು ವೀಕ್ಷಿಸುವುದು. ಹೆಚ್ಚಿನ ಮಾಹಿತಿಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ದೂ. ೦೮೨೭೨-೨೦೧೧೪೭, ೮೦೭೩೩೪೨೩೧೦, ೯೧೪೧೯೩೮೮೦೩ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕಿ ಮುಕ್ಕಾಟಿರ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ.