ಮಡಿಕೇರಿ, ಫೆ. ೨: ಮಣ್ಣು ಸಾಗಾಟ ಮಾಡುತ್ತಿದ್ದ ವಾಹನ ಚಾಲಕನಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸ್ ಸಿಬ್ಬಂದಿಯನ್ನು ಲೋಕಾಯುಕ್ತ ಸಿಬ್ಬಂದಿಗಳು ಬಂಧಿಸಿರುವ ಘಟನೆ ನಡೆದಿದೆ.
ಬಿಳಿಗೇರಿ ಗ್ರಾಮ ನಿವಾಸಿ, ಬಿ.ಎನ್. ಕಿರಣ್ ಎಂಬಾತ ತನ್ನ ಪಿಕ್ಅಪ್ ವಾಹನ (ಕೆಎ-೧೨ ಬಿ-೧೭೨೫)ದಲ್ಲಿ ಅದೇ ಗ್ರಾಮದ ಬಡ್ಡನ ಸಚ್ಚಿ ಎಂಬವರ ಬಾಣೆಯಿಂದ ಮಣ್ಣು ತುಂಬಿಸಿಕೊAಡು ಹೋಗುತ್ತಿದ್ದ ಸಂದರ್ಭ ಮಾರುತಿ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ಅಡ್ಡತಡೆದು ತಾನು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯಾಗಿದ್ದು, ಮರಳು ಕಳ್ಳ ಸಾಗಾಟ ಮಾಡುತ್ತಿರುವುದಾಗಿ ಆರೋಪಿಸಿ, ನಿಂದಿಸಿ ರೂ. ೩೦ ಸಾವಿರ ಹಣ ನೀಡದಿದ್ದಲ್ಲಿ ವಾಹನ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಿರಣ್ ತನ್ನ ಬಳಿ ಇದ್ದ ರೂ. ೭,೫೦೦ ನೀಡಿದ್ದು, ಉಳಿದ ಹಣವನ್ನು ಮಡಿಕೇರಿಗೆ ತಂದು ಕೊಡುವುದಾಗಿ ಹೇಳಿ ಕಳುಹಿಸಿದ್ದಾರೆ. ಈ ಬಗ್ಗೆ ಕಿರಣ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಒಡಂಬಡಿಕೆಯAತೆ ಇಂದು ಸಜ್ಜನ್ ತಿಳಿಸಿದಂತೆ ಮಡಿಕೇರಿಯ ಹಮೀದ್ ಬೀಡಾ ಅಂಗಡಿಯ ಮಾಲೀಕ ಅಬ್ದುಲ್ ಹಮೀದ್ ಎಂಬವರಲ್ಲಿ ರೂ. ೧೦ ಸಾವಿರ ಹಣ ನೀಡುತ್ತಿದ್ದ ಸಂದರ್ಭ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಸಜ್ಜನ್ನನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಮಹಾನಿರೀಕ್ಷಕ ಡಾ. ಎ. ಸುಬ್ರಮಣೇಶ್ವರ ರಾವ್, ಅಧೀಕ್ಷಕ ಸುರೇಶ್ ಬಾಬು, ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕ ಲೋಕೇಶ್, ಜಯರತ್ನ, ನೇತೃತ್ವದ ತಂಡÀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.