ಮಡಿಕೇರಿ, ಫೆ. ೨: ಭಾರತ ಸರ್ಕಾರ, ನೆಹರೂ ಯುವ ಕೇಂದ್ರ ಇದರ ಆಶ್ರಯದಲ್ಲಿ ನಡೆಸಲಾದ ಭಾಷಣ ಸ್ಫರ್ಧೆಯಲ್ಲಿ ಭಾಗವಹಿಸಿ, ರಾಜ್ಯಮಟ್ಟದ ಯುವ ಸಂಸತ್ತು ಅಧಿವೇಶನಕ್ಕೆ ಮಿಥುನ್ ಹಾಗೂ ಕಾವ್ಯಶ್ರೀ ಆಯ್ಕೆಗೊಂಡು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
೧೫ರಿಂದ ೨೫ ವರ್ಷ ವಯೋಮಿತಿಯ ಯುವ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಮಡಿಕೇರಿ ತಾಲೂಕು ಕೊಟ್ಟೂರು ಗ್ರಾಮದ ನಿವಾಸಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ದ್ವಿತೀಯ ಬಿಎಸ್‌ಸಿ ವ್ಯಾಸಂಗ ಮಾಡುತ್ತಿರುವ ಮಿಥುನ್ ಬಿ.ಬಿ. ಹಾಗೂ ಅಮ್ಮತ್ತಿ ಬಿಳುಗುಂದ ನಿವಾಸಿ, ವಿದೂಷಕಿ, ಅರಮೇರಿ ಎಸ್.ಎಂ.ಎಸ್. ಶಾಲಾ ಶಿಕ್ಷಕಿ ಕಾವ್ಯಶ್ರೀ ವಿಜೇತರಾಗುವುದರ ಮೂಲಕ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವ ಸಂಸತ್ತು ಅಧಿವೇಶನಕ್ಕೆ ಆಯ್ಕೆಯಾಗಿದ್ದಾರೆ.