ಮಡಿಕೇರಿ, ಫೆ. ೨: ನಕ್ಸಲ್ ಚಟುವಟಿಕೆ ಆರೋಪದಡಿ ಬಂಧಿತ ನಾಗಿರುವ ನಕ್ಸಲ್ ನಾಯಕ ರೂಪೇಶ್ ನನ್ನು ಇಂದು ಕೇರಳದ ಕಾರಾಗೃಹ ದಿಂದ ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
೨೦೦೮ರಲ್ಲಿ ಕೊಡಗಿನ ಭಾಗಮಂಡಲದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಆರೋಪದಡಿಯಲ್ಲಿ ಈತನ ವಿರುದ್ಧ ಪ್ರಕರಣವಿದ್ದು, ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರುಪಡಿಸಲಾಯಿತು. ಕೇರಳ ಹಾಗೂ ಕೊಡಗಿನ ಪೊಲೀಸರ ಬಿಗಿಭದ್ರತೆಯಲ್ಲಿ ಆತನನ್ನು ಜಿಲ್ಲೆಗೆ ಕರೆತರಲಾಗಿತ್ತು.
ಈ ಹಿಂದೆ ನಡೆದಿದ್ದ ವಿಚಾರಣೆ ಸಂದರ್ಭ ನಡೆದುಕೊಂಡಿದ್ದ ರೀತಿಯಲ್ಲೇ ನ್ಯಾಯಾಲಯಕ್ಕೆ ಹಾಜರಾದ ರೂಪೇಸ್ ತನ್ನ ಪರವಾಗಿ ತಾನೇ ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ತಾ. ೨೨ಕ್ಕೆ ವಿಚಾರಣೆ ಮುಂದೂಡಿದೆ. ಬಳಿಕ ರೂಪೇಶ್ನನ್ನು ಕೇರಳಕ್ಕೆ ಕರೆದೊಯ್ಯಲಾಯಿತು.