ಕೂಡಿಗೆ, ಫೆ. ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಸರ್ವೆ ನಂಬರ್ ೧೪ ರಲ್ಲಿ ೨ಎಕರೆ ೪೦ ಸೆಂಟ್ ಜಾಗದಲ್ಲಿ ಮೂರು ಗ್ರಾಮಗಳ ಕ್ರೀಡಾಪಟುಗಳಿಗೆ ಅನುಕೂಲವಾಗು ವಂತೆ ಮೈದಾನದ ನಿರ್ಮಾಣಕ್ಕೆ ಕಂದಾಯ ಇಲಾಖೆಯ ಮೂಲಕ ಜಾಗವನ್ನು ಒದಗಿಸಲು ಸಹಕಾರ ಮತ್ತು ಮೈದಾನವನ್ನು ಸಮತಟ್ಟು ಮಾಡಲು ವೈಯಕ್ತಿಕವಾಗಿ ೫೦ ಸಾವಿರ ರೂ.ಗಳನ್ನು ನೀಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಗ್ರಾಮಸ್ಥರು ಗೌರವಿಸಿದರು.

ಈ ಸಂದರ್ಭ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ.ಸಿ. ಸ್ವಾಮಿ, ಗಜೇಂದ್ರ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ್, ಗಿರೀಶ್, ಮಣಿಕಂಠ ಭಾಗ್ಯಮ್ಮ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಭಾಕರ್, ಗ್ರಾಮದ ಪ್ರಮುಖರಾದ ಕುಮಾರಸ್ವಾಮಿ, ಶಿವಾನಂದ ರೈ, ಮಾದಪ್ಪ, ಹೂನ್ನಣ್ಣ, ಕೃಷ್ಣಪ್ಪ, ಮಂಜುನಾಥ, ಮಂಜಣ್ಣ, ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.