ಸಿದ್ದರಾಮಯ್ಯ, ಡಿಕೆಶಿ, ರಾಬರ್ಟ್ ವಾದ್ರಾ ಸೇರಿ ‘ಕೈ' ನಾಯಕರ ವಿರುದ್ಧ ಲೋಕಾಯುಕ್ತಕ್ಕೆ ದೂರು!
ಬೆಂಗಳೂರು, ಫೆ. ೨: ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಬಟ್ ವಾದ್ರಾ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಹಾಗೂ ಹಲವಾರು ಅಧಿಕಾರಿಗಳ ವಿರುದ್ಧ ವಿರುದ್ಧ ಲೋಕಾಯುಕ್ತಕ್ಕೆ ೩೭೨೮ ಪುಟಗಳ ದಾಖಲೆ ಸಮೇತ ದೂರುಗಳ ಸರಮಾಲೆಯನ್ನೇ ಸಲ್ಲಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರು, ಕಾಂಗ್ರೆಸ್ ಮುಖಂಡರ ೧೦ ಬೃಹತ್ ಹಗರಣಗಳಿಗೆ ಸಂಬAಧಿಸಿದAತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಬರ್ಟ್ ವಾದ್ರಾ, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ. ಖಾದರ್, ಎಂ.ಬಿ. ಪಾಟೀಲ್, ಜಮೀರ್ ಅಹಮದ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಎನ್.ಎ. ಹ್ಯಾರೀಸ್ ಹಾಗೂ ಪ್ರಿಯಾ ಕೃಷ್ಣ ಅವರುಗಳ ವಿರುದ್ಧ ೧೦ ದೂರುಗಳನ್ನು ದಾಖಲಿಸಿದ್ದಾರೆ. ಅದೇ ರೀತಿ ೯ ಹಿರಿಯ ಐಎಎಸ್ ಅಧಿಕಾರಿಗಳು, ಐದು ಕೆಎಎಸ್ ಅಧಿಕಾರಿಗಳು ಸೇರಿದಂತೆ ೨೧ ಮಂದಿ ಅಧಿಕಾರಿಗಳ ವಿರುದ್ಧವೂ ಅವರು ದೂರು ದಾಖಲಿಸಿದ್ದಾರೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ೧೦ ವಿವಿಧ ಬೃಹತ್ ಹಗರಣಗಳಿಗೆ ಸಂಬAಧಿಸಿದAತೆ, ಪ್ರತ್ಯೇಕವಾದ ೧೦ ದೂರುಗಳನ್ನು ಒಂದೇ ಬಾರಿಗೆ ಲೋಕಾಯುಕ್ತದಲ್ಲಿ ದಾಖಲಿಸಲಾಗಿದೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ. ನಗರದಲ್ಲಿಂದು ಈ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ. ಖಾದರ್, ಎಂ.ಬಿ. ಪಾಟೀಲ್, ಜಮೀರ್ ಅಹಮದ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ ಹಾಗೂ ಶಾಸಕರಾದ ಎನ್.ಎ. ಹ್ಯಾರೀಸ್, ಮಾಜಿ ಶಾಸಕ ಪ್ರಿಯಾ ಕೃಷ್ಣ ದೂರು ನೀಡಲಾಗಿದೆ. ಅದೇ ರೀತಿ, ಹಿರಿಯ ಐಎಎಸ್ ಅಧಿಕಾರಿಗಳಾದ ಪಾಂಡುರAಗ ಬಿ. ನಾಯಕ್, ಜಿ. ಸತೀಶ್, ಅತುಲ್ ಕುಮಾರ್ ತಿವಾರಿ, ವಸ್ತçದ್, ವಿ. ಶಂಕರ್, ಮನೋಜ್ ರಾಜನ್, ಡಾ. ಪಿ. ಬೋರೇಗೌಡ, ಡಾ. ಲೀಲಾ ಸಂಪಿಗೆ, ಚಲುವರಾಜು ಮತ್ತು ಕೃಷ್ಣಮೂರ್ತಿ ಅವರ ವಿರುದ್ಧವೂ ದೂರುಗಳು ದಾಖಲಾಗಿವೆ ಎಂದರು. ಇದಲ್ಲದೇ ಸೋನಿಯಾ ಗಾಂಧಿ ಅಳಿಯ ಮತ್ತು ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ರವರ ವಿರುದ್ಧವೂ ಸಹ ಸರ್ಕಾರಿ ಭೂ ಕಬಳಿಕೆ ಪ್ರಕರಣದ ದೂರು ದಾಖಲಾಗಿದ್ದು, ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್‌ಎಫ್ ಸಂಸ್ಥೆಯು ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಗಂಗೇನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ ೧ ರಿಂದ ೯೯, ವರ್ತೂರು ಗ್ರಾಮದ ಸರ್ವೆ ನಂಬರ್ ೭, ೮, ೯, ೧೦, ವರ್ತೂರು ನರಸೀಪುರ ಗ್ರಾಮದ ಸರ್ವೆ ನಂಬರ್ ೧ ರಿಂದ ೩೫ ಪೆದ್ದನಪಾಳ್ಯ ಗ್ರಾಮದ ಸರ್ವೆ ನಂಬರ್ ೧೭, ೧೮, ೧೯, ೨೦ ರಲ್ಲಿರುವ ಸುಮಾರು ೯,೬೦೦ ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆಬಾಳುವ ೧,೧೦೦ ಎಕರೆ ಸರ್ಕಾರಿ ಸ್ವತ್ತುಗಳನ್ನು ಕಬಳಿಸಿರುವ ಬೆಂಗಳೂರಿನ ಬೃಹತ್ ಭೂ ಕಬಳಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಅದಾನಿ ಸಮೂಹದ ಬಿಕ್ಕಟ್ಟು: ತನಿಖೆಗೆ ಕಾಂಗ್ರೆಸ್-ವಿಪಕ್ಷಗಳ ಒತ್ತಾಯ
ನವದೆಹಲಿ, ಫೆ. ೨: ಅದಾನಿ ಸಮೂಹ ಸಂಸ್ಥೆಯ ಬಿಕ್ಕಟ್ಟನ್ನು ಸಂಸತ್ತಿಸ ಜಂಟಿ ಸದನ ಸಮಿತಿ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಗುರುವಾರ ಒತ್ತಾಯಿ ಸಿವೆ. ಸಾರ್ವಜನಿಕರ ಹಣಕ್ಕೆ ಸಂಬAಧಿಸಿದ ವಿಷಯದ ಕುರಿತು ಜಂಟಿ ಸದನ ಸಮಿತಿ (ಜೆಪಿಸಿ) ಅಥವಾ ಸುಪ್ರೀಂ ಮೇಲ್ವಿಚಾರಣೆಯ ತನಿಖೆಯ ದೈನಂದಿನ ವರದಿಗೂ ವಿರೋಧ ಪಕ್ಷಗಳು ಕರೆ ನೀಡಿವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸಾರ್ವಜನಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಅದಾನಿ ಸಮೂಹ ಸಂಸ್ಥೆಯ ಬಿಕ್ಕಟ್ಟಿನ ಬಗ್ಗೆ ಜಂಟಿ ಸದನ ಸಮಿತಿ (ಜೆಪಿಸಿ) ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯಾಗಬೇಕೆಂದು ನಾವು ಬಯಸುತ್ತೇವೆ. ಈ ವಿಷಯದ ತನಿಖೆ ಕುರಿತು ದೈನಂದಿನ ವರದಿ ಯಾಗಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಕೋಟ್ಯಂತರ ಭಾರತೀಯರ ಉಳಿತಾಯಕ್ಕೆ ಅಪಾಯ ತಂದೊಡ್ಡಿರುವ ಎಲ್‌ಐಸಿ, ಎಸ್‌ಬಿಐ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳ ಬಲವಂತದ ಹೂಡಿಕೆಗಳ ತನಿಖೆಗೆ ಸರ್ಕಾರವು ಒಪ್ಪದ ಕಾರಣ ಸಂಸತ್ತಿನ ಉಭಯ ಸದನಗಳನ್ನು ಇಂದು ಮಧ್ಯಾಹ್ನ ೨ ಗಂಟೆಗೆ ಮುಂದೂಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸಂಸದರಿಗೆ ವಿತ್ತ ಸಚಿವರಿಂದ ಬಜೆಟ್ ಕೋಚಿಂಗ್ ಕ್ಲಾಸ್!
ನವದೆಹಲಿ, ಫೆ. ೨: ೨೦೨೪ ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ಅನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆ ಮತ್ತು ರಾಜ್ಯಸಭೆಯ ಬಿಜೆಪಿ ಸಂಸದರಿಗೆ ಬಜೆಟ್ ಕುರಿತು ಬ್ರೀಫಿಂಗ್ (ಸಂಕ್ಷಿಪ್ತ ವಿವರ) ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಸಂಸದರಿಗೆ ಬಜೆಟ್ ಕುರಿತು ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಲಿದ್ದು, ರಾಷ್ಟç ರಾಜಧಾನಿಯ ಸಂಸತ್ ಲೈಬ್ರರಿ ಕಟ್ಟಡದಲ್ಲಿರುವ ಬಾಲಯೋಗಿ ಆಡಿಟೋರಿಯಂನಲ್ಲಿ ತಾ. ೩ ರಂದು ಬೆಳಿಗ್ಗೆ ೯ ಗಂಟೆಗೆ ಬ್ರೀಫಿಂಗ್ ನಡೆಯಲಿದೆ ಎಂದು ಎಲ್ಲಾ ಸಂಸದರಿಗೆ ತಿಳಿಸಲಾಗಿದೆ. ಸಮಾಜದ ಪ್ರತಿಯೊಂದು ಸ್ತರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಎಂದರೆ ಏನು ಮತ್ತು ಅದನ್ನು ಹೇಗೆ ಹೊರತರಲಾಗಿದೆ ಎಂಬುದನ್ನು ಆಯಾ ಕ್ಷೇತ್ರಗಳಿಗೆ ಹೋಗಿ ಸಾಮಾನ್ಯ ಜನರಿಗೆ ತಿಳಿಸಿ ಎಂದು ಬಿಜೆಪಿ ಪಕ್ಷವು ತನ್ನ ಎಲ್ಲಾ ಸಂಸತ್ ಸದಸ್ಯರನ್ನು ಕೇಳಿರುವ ಸಮಯದಲ್ಲಿ ಈ ಬ್ರೀಫಿಂಗ್ ಸಭೆ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ಗೆ ೭ ನ್ಯಾಯಾಧೀಶರ ಹೆಸರು ಶಿಫಾರಸು
ನವದೆಹಲಿ, ಫೆ. ೨: ಸುಪ್ರೀಂ ಕೋರ್ಟ್ನಲ್ಲಿ ಖಾಲಿ ಇರುವ ಎಲ್ಲಾ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ (ಎಸ್‌ಸಿಸಿ) ಇತ್ತೀಚೆಗೆ ಏಳು ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಗುರುವಾರ ಸಂಸತ್ತಿಗೆ ತಿಳಿಸಿದ್ದಾರೆ. ಇಂದು ಸಂಸದ ಜಾನ್ ಬ್ರಿಟ್ಟಾಸ್ ಕೇಳಿದ ಪ್ರಶ್ನೆ ಉತ್ತರಿಸಿದ ಕಿರಣ್ ರಿಜಿಜು ಅವರು, ಪ್ರಸ್ತುತ ಸುಪ್ರೀಂ ಕೋರ್ಟ್ನಲ್ಲಿ ೨೭ ನ್ಯಾಯಾಧೀಶರ ಕಾರ್ಯನಿರ್ವಹಿಸುತ್ತಿದ್ದು, ಏಳು ಹುದ್ದೆಗಳು ಖಾಲಿ ಉಳಿದಿವೆ ಎಂದು ಹೇಳಿದರು. ಜನವರಿ ೩೦ ರವರೆಗೆ ವಿವಿಧ ಹೈಕೋರ್ಟ್ಗಳಲ್ಲಿ ಒಟ್ಟು ೧,೧೦೮ ನ್ಯಾಯಾಧೀಶರ ಪೈಕಿ ೭೭೫ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. ಹೈಕೋರ್ಟ್ಗಳಲ್ಲಿ ೩೩೩ ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ ಎಂದು ರಿಜಿಜು ಸಂಸತ್ತಿಗೆ ಮಾಹಿತಿ ನೀಡಿದರು. ಹೈಕೋರ್ಟ್ ಕೊಲಿಜಿಯಂಗಳು ಶಿಫಾರಸು ಮಾಡಿರುವ ೧೪೨ ಪ್ರಸ್ತಾವನೆಗಳು ಪ್ರಕ್ರಿಯೆಯ ವಿವಿಧ ಹಂತಗಳಲ್ಲಿವೆ. ಈ ೧೪೨ ರಲ್ಲಿ ೪ ಪ್ರಸ್ತಾವನೆಗಳು ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ಬಾಕಿ ಉಳಿದಿವೆ ಮತ್ತು ೧೩೮ ಸರ್ಕಾರದಲ್ಲಿ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿವೆ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಗಳವಾರ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಿದೆ.
ಅಮೆರಿಕ ವಲಸೆ ಉಪ ಸಮಿತಿಗೆ ಪ್ರಮೀಳಾ ಜಯಪಾಲ್ ನೇಮಕ
ವಾಷಿಂಗ್ಟನ್, ಫೆ. ೨: ಭಾರತೀಯ ಮೂಲದ ಅಮೆರಿಕನ್ ಕಾಂಗ್ರೆಸ್ ಮಹಿಳೆ ಪ್ರಮೀಳಾ ಜಯಪಾಲ್ ಅವರು ಪ್ರಬಲ ಹೌಸ್ ಜುಡಿಷಿಯರಿ ಸಮಿತಿ ವಲಸೆ ಸಮಿತಿಯ ರ‍್ಯಾಂಕಿAಗ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಮೂಲಕದ ಅಮೆರಿಕ ವಲಸೆ ಉಪ ಸಮಿತಿಗೆ ನೇಮಕವಾದ ಮೊದಲ ವಲಸಿಗರಾಗಿದ್ದಾರೆ. ವಾಷಿಂಗ್ಟನ್ ರಾಜ್ಯದ ೭ನೇ ಕಾಂಗ್ರೆಷನಲ್ ಡಿಸ್ಟಿçಕ್ಟ್ ಅನ್ನು ಪ್ರತಿನಿಧಿಸುತ್ತಿರುವ ೫೭ ವರ್ಷದ ಪ್ರಮೀಳಾ ಜಯಪಾಲ್ ಅವರು, ವಲಸೆ ಸಮಗ್ರತೆ, ಭದ್ರತೆ ಮತ್ತು ಜಾರಿ ಮೇಲಿನ ಉಪ ಸಮಿತಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ. ನಾನು ೧೬ ವರ್ಷದವಳಾಗಿದ್ದಾಗ, ನನ್ನ ಜೇಬಿನಲ್ಲಿ ಏನೂ ಇಲ್ಲದೆ ಒಬ್ಬಂಟಿಯಾಗಿ ಈ ದೇಶಕ್ಕೆ ಬಂದೆ ಎಂದು ಜಯಪಾಲ್ ಅವರು ತಾವು ನಡೆದುಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ.