ಮಡಿಕೇರಿ, ಫೆ. ೧: ಭಾರತೀಯ ಸೇನೆ/ ಇತರ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಕ್ಕೆ ಸೇರಿದ ಪ್ರವರ್ಗ-೧, ೨ಎ, ೩ಎ ಹಾಗೂ ೩ಬಿ ಅಭ್ಯರ್ಥಿಗಳಿಗೆ ೨೦೨೨-೨೩ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. (ಬಾಲಕರಿಗೆ ಮಾತ್ರ).
ಆಸಕ್ತ ಅಭ್ಯರ್ಥಿಗಳು ಫೆಬ್ರವರಿ ೧೫ ರೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ ಪ್ರವರ್ಗ-೧ಕ್ಕೆ ರೂ. ೨.೫೦ ಲಕ್ಷ ಹಾಗೂ ಪ್ರವರ್ಗ-೨(ಎ), ೩(ಎ) ಮತ್ತು ೩(ಬಿ)ಗಳಿಗೆ ರೂ.೧ ಲಕ್ಷ. ಅಭ್ಯರ್ಥಿಯು ೧೦ನೇ ತರಗತಿಯಲ್ಲಿ ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಟ ೩೩ ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಸಮಾನವಾದ ಗ್ರೇಡ್ ಪಡೆದಿರಬೇಕು.
ಅಕ್ಟೋಬರ್ ೩೧, ೨೦೨೩ ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ವಯಸ್ಸು ೧೭ ರಿಂದ ೨೦ ವರ್ಷಗಳ ವಯಸ್ಸಿನ ಒಳಗಿರಬೇಕು. (ಅಭ್ಯರ್ಥಿಯು ೧ ಡಿಸೆಂಬರ್ ೨೦೦೩ ದಿಂದ ೧ ಜುಲೈ ೨೦೦೬ ರ ದಿನಾಂಕಗಳ ನಡುವೆ ಜನಿಸಿರಬೇಕು).
ತರಬೇತಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಮಾತ್ರ ನೀಡಲಾಗುವುದು. ಅಭ್ಯರ್ಥಿಗಳು ಈ ಮೂರು ಜಿಲ್ಲೆಗಳಲ್ಲಿ ತರಬೇತಿಗೆ ಆಯ್ಕೆ ಮಾಡಿಕೊಳ್ಳುವ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆ (ಫೆಬ್ರವರಿ ೧೬ ರೊಳಗೆ) ಮೂಲಕ ಸಲ್ಲಿಸಬಹುದು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್ hಣಣಠಿs://bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ನಿಂದ ಪಡೆಯಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.