ಮಡಿಕೇರಿ, ಫೆ. ೧: ಪ್ರಸಕ್ತ ಸಾಲಿಗೆ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಕೊಡಗು ಜಿಲ್ಲೆಯ ವಿಶೇಷಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಸಲುವಾಗಿ ಆಧಾರ ಯೋಜನೆಯಿದ್ದು ಈ ಯೋಜನೆಯಡಿ ಬ್ಯಾಂಕ್ ಮೂಲಕ ರೂ. ೫೦ ಸಾವಿರ ಮತ್ತು ಇಲಾಖೆಯಿಂದ ಶೇ. ೫೦ ಸಬ್ಸಿಡಿ (ಸಹಾಯಧನ) ಸೇರಿ ರೂ. ೧ ಲಕ್ಷ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಹಿಂದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು, ಆದರೆ ಆನ್‌ಲೈನ್ ಮೂಲಕ ವಿಲೇ ಮಾಡಲು ತಾಂತ್ರಿಕ ತೊಂದರೆ ಹಾಗೂ ಸಮಯದ ಅಭಾವವಿರುವುದರಿಂದ ಅರ್ಜಿಗಳನ್ನು ಕಚೇರಿಗೆ ಫೆಬ್ರವರಿ ೬ ರೊಳಗೆ ಭೌತಿಕವಾಗಿ (ಆಫ್‌ಲೈನ್‌ನಲ್ಲಿ) ಸಲ್ಲಿಸಲು ತಿಳಿಸಿದೆ. ಜಿಲ್ಲೆಯ ೧೮ ರಿಂದ ೫೫ ವಯೋಮಿತಿಯೊಳಗಿನ ವಿಕಲಚೇತನರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಚೇರಿ ದೂ. ೦೮೨೭೨-೨೯೫೮೨೯ನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.