ಕೂಡಿಗೆ, ಫೆ. ೧: ಹಾರಂಗಿ - ಮಾವಿನಹಳ್ಳ ಮೂಲಕ ಸೋಮವಾರಪೇಟೆ ಸಂಪರ್ಕ ರಸ್ತೆಯ ಕಿರುಸೇತುವೆ ನಿರ್ಮಾಣಕ್ಕೆ ರೂ. ೨೫ ಲಕ್ಷ ಬಿಡುಗಡೆಯಾಗಿದೆ. ಅತಿಯಾದ ಮಳೆಯಿಂದಾಗಿ ಯಡವನಾಡು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ನುಗ್ಗಿದ ನೀರಿನ ರಭಸದಿಂದಾಗಿ ಮಳೆಗಾಲದಲ್ಲಿ ಕಿರುಸೇತುವೆ ಕೆಲ ಭಾಗವು ಕೊಚ್ಚಿ ಹೋಗಿತ್ತು. ಉಳಿದ ಭಾಗವು ಸಹ ಕಳೆದ ಎರಡು ತಿಂಗಳ ಹಿಂದೆ ಕುಸಿತಗೊಂಡು ಈ ಭಾಗದ ರೈತರು, ಸಾರ್ವಜನಿಕರು ತಿರುಗಾಡಲು ಬಾರಿ ತೊಂದರೆ ಆಗುತ್ತಿತ್ತು. ಅಲ್ಲದೆ ಸೋಮವಾರಪೇಟೆ ಸಂಪರ್ಕ ರಸ್ತೆಗೆ ಹೋಗಲು ೬ ಕಿಲೋಮೀಟರ್ ಬಳಸಿ ಹೋಗಬೇಕಾಗುವ ಪ್ರಸಂಗ ಎದುರಾಗುತ್ತದೆ ಎಂಬದರ "ಸೇತುವೆ ಕುಸಿತ ಸ್ಪಂದಿಸದ ಅಧಿಕಾರಿಗಳು" ಎಂಬ ವರದಿಯು ಡಿಸೆಂಬರ್ ೧೧ ರಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ವರದಿಗೆ ಸ್ಪಂದಿಸಿದ ಶಾಸಕರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಕಿರುಸೇತುವೆಯ ನಿರ್ಮಾಣಕ್ಕೆ ಅಂದಾಜುಪಟ್ಟಿಯ ಅನುಸಾರವಾಗಿ ಕ್ರಿಯಾ ಯೋಜನೆ ತಯಾರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಗೆ ತಿಳಿಸಿದರು ಅದರಂತೆಯೇ ಮಳೆ ಹಾನಿ ಪರಿಹಾರ ನಿಧಿ ಅಡಿಯಲ್ಲಿ ಕಿರುಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು. ಕ್ರಿಯಾ ಯೋಜನೆಯ ಅನುಗುಣವಾಗಿ ರೂ. ೨೫ ಲಕ್ಷ ಹಣವನ್ನು ಬಿಡುಗಡೆಗೊಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಿರುಸೇತುವೆ ಕಾಮಗಾರಿಯು ಆರಂಭಗೊಳ್ಳಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ,ಪಿ ಅಪ್ಪಚ್ಚು ರಂಜನ್ ಅವರು ತಿಳಿಸಿದ್ದಾರೆ.
ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ. ಗಿರೀಶ್ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಾಂಚೀರ ಮನು ನಂಜುAಡ, ಪ್ರಮುಖರಾದ ಕೆ. ವರದ, ಪ್ರಭಾಕರ್, ಸೀಗೆಹೊಸೂರು ಮಂಜಯ್ಯ, ಸಂತೋಷ, ಯೋಗೇಶ್, ಪ್ರಭಾ, ಆರ್.ಕೆ. ಜಯಂತ್ ಸೇರಿದಂತೆ ಬಿಜೆಪಿ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.