ಗೋಣಿಕೊಪ್ಪ ವರದಿ, ಫೆ. ೧: ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ತಾ. ೭ ರಂದು ಟ್ರಾö್ಯಕ್ ಅಂಡ್ ಫೀಲ್ಡ್, ಹಾಕಿ ಕ್ರೀಡೆಗೆ ಬಾಲಕರ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿದೆ.

ಗೋಣಿಕೊಪ್ಪ ಕಾಲ್ಸ್ ಆವರಣದಲ್ಲಿ ಆಯ್ಕೆ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ. ೧೨, ೧೪, ೧೬ ವಯೋಮಿತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ವಯಸ್ಸಿನ ಪ್ರಮಾಣ ಪತ್ರದೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಆಯ್ಕೆಯಾದ ಕ್ರೀಡಾಪಟುಗಳಿಗೆ ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ೦೮೨೭೪೨೭೯೪೫೬ ಸಂಪರ್ಕಿಸಬಹುದಾಗಿದೆ ಎಂದು ಶಾಲೆ ಪ್ರಕಟಣೆ ತಿಳಿಸಿದೆ.