ಕುಶಾಲನಗರ, ಫೆ. ೧: ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಬಿ.ಆರ್ ನಾರಾಯಣ ಅವರನ್ನು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಹ್ವಾನ ಪತ್ರ ನೀಡಿ ಆಹ್ವಾನಿಸಲಾಯಿತು.
ತಾಲೂಕು ಘಟಕ ಅಧ್ಯಕ್ಷ ಕೆ.ಎಸ್ ಮೂರ್ತಿ ನೇತೃತ್ವದಲ್ಲಿ ಪರಿಷತ್ ಪ್ರಮುಖರು ಆಹ್ವಾನ ಪತ್ರಿಕೆ ನೀಡಿದರು.
ಈ ಸಂದರ್ಭ ಕಸಾಪ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮ್‌ಕುಮಾರ್, ಗೌರವ ಕಾರ್ಯದರ್ಶಿಗಳಾದ ಎಸ್. ನಾಗರಾಜ್, ಟಿ.ವಿ. ಶೈಲ, ಕೋಶಾಧಿಕಾರಿ ಉಮೇಶ್ ಮತ್ತು ಪದಾಧಿಕಾರಿಗಳಿದ್ದರು.