ಮಡಿಕೇರಿ, ಫೆ. ೧: ಕಕ್ಕಬ್ಬೆಯ ಸ್ಟೆಪ್ಸ್ ಸಂಸ್ಥೆಯ ವತಿಯಿಂದ ತಾ. ೨೬ ರಂದು ರಾಜ್ಯಮಟ್ಟದ ಕ್ಯಾಟಪಲ್ಟ್ನಲ್ಲಿ ಗುರಿ ಇಡುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೮ ವರ್ಷದೊಳಗಿನ ಹಾಗೂ ೧೮ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಮಹಿಳೆ ಹಾಗೂ ಪುರುಷರು ಮುಕ್ತವಾಗಿ ಭಾಗವಹಿಸಬಹುದಾಗಿದೆ. ಮೊದಲ ಸುತ್ತಿನಲ್ಲಿ ೫೦ ಅಡಿ ದೂರದ ಗುರಿಯೊಂದಿಗೆ ೨ ಅವಕಾಶಗಳನ್ನು ನೀಡಲಾಗುತ್ತದೆ. ಈ ಪೈಕಿ ಒಂದು ಅವಕಾಶದಲ್ಲಿ ಗುರಿ ಸಾಧಿಸಿದವರು ಮತ್ತೊಂದು ಸುತ್ತಿಗೆ ಅರ್ಹರಾಗುತ್ತಾರೆ. ಹಂತಹAತವಾಗಿ ನಡೆಯುವ ಪಂದ್ಯಾಟದಲ್ಲಿ ಕೊನೆಯದಾಗಿ ಉಳಿಯುವವರು ಗೆಲುವು ಸಾಧಿಸುತ್ತಾರೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆಯುವರಿಗೆ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೮೧೦೫೨೭೮೯೫೦ ಅಥವಾ ೯೦೧೯೫೬೧೪೫೮ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಪಂದ್ಯಾವಳಿಯಲ್ಲಿ ಲೆನ್ಸ್ ಹಾಗೂ ಲೇಸರ್ ಹೊಂದಿರುವ ಕ್ಯಾಟಪಲ್ಟ್ ಬಳಸುವಂತಿಲ್ಲ ಎಂದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕಲ್ಯಾಟಂಡ ಸಂದೇಶ್, ಸದಸ್ಯರುಗಳಾದ ನಂಬುಡಮAಡ ದಿಲನ್ ಪೊನ್ನಪ್ಪ, ಕೇಟೋಳಿರ ರಾಬಿನ್ ಬೋಪಣ್ಣ, ಕಾಂಡAಡ ಸಜನ್ ಪೂವಯ್ಯ, ಕಂಬೆಯAಡ ತರುಣ್ ತಿಮ್ಮಯ್ಯ ಹಾಜರಿದ್ದರು.