ಸೋಮವಾರಪೇಟೆ, ಫೆ. ೧: ತಾಲೂಕಿನ ಬಾಣಾವರ-ಹೆಬ್ಬಾಲೆ ಹೆದ್ದಾರಿಯ ಸಿದ್ಧಲಿಂಗಪುರದಲ್ಲಿ ಆಟೋ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಆಟೋ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಘಟನೆಗೆ ಆಟೋ ಚಾಲಕನ ಅಚಾತುರ್ಯ ಕಾರಣವೆಂದು ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ ಎಂದು ಆರೋಪಿಸಿ ರುವ ಸ್ಥಳೀಯರು, ಅಪಘಾತದ ದೃಶ್ಯಾವಳಿಗಳು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ಪ್ರದರ್ಶಿಸ ಬೇಕೆಂದು ಒತ್ತಾಯಿಸಿ ಮನೆಯೊಂದರ ಮುಂಭಾಗದ ರಸ್ತೆ ಬದಿಯಲ್ಲಿ ಮೃತದೇಹವನ್ನಿಟ್ಟು ಆಗ್ರಹಿಸಿದ ಘಟನೆಯೂ ನಡೆದಿದೆ.

ಬಾಣಾವರ ನಿವಾಸಿ, ಚಂದ್ರು ಹಾಗೂ ಶಿವಮ್ಮ ದಂಪತಿ ಪುತ್ರ ಆಟೋ ಚಾಲಕನಾಗಿರುವ ಭಾನುಮೂರ್ತಿ (೩೦) ಎಂಬಾತನೇ ರಸ್ತೆ ಅವಘಡದಿಂದ ಸಾವನ್ನಪ್ಪಿದ ದುರ್ದೈವಿ. ನಿನ್ನೆ ರಾತ್ರಿ ೮.೩೦ರ ಸುಮಾರಿಗೆ ಸಿದ್ಧಲಿಂಗಪುರ ಕಡೆಯಿಂದ ಬಾಣಾವರದತ್ತ ತನ್ನ ಆಟೋದಲ್ಲಿ ಬರುತ್ತಿದ್ದ ಸಂದರ್ಭ ಎದುರಿನಿಂದ ಬಂದ ಸಿದ್ಧಲಿಂಗಪುರ ನಿವಾಸಿ ವಾಸು ಅವರ ಪುತ್ರ ಪ್ರಭು ಚಾಲಿಸುತ್ತಿದ್ದ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದೆ.

ಘಟನೆಯಿAದ ಆಟೋ ಚಾಲಕ ಭಾನುಮೂರ್ತಿ ಅವರ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಅಸುನೀಗಿದ್ದಾನೆ. ಸ್ಕೂಟರ್ ಚಾಲಕ ಪ್ರಭು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಗೆ ಆಟೋ ಚಾಲಕನ ಅಚಾತುರ್ಯವೇ ಕಾರಣ ಎಂದು ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ. ಘಟನಾ ಸ್ಥಳದ ಎದುರಿರುವ ಮನೆಯಲ್ಲಿ ಸಿ.ಸಿ. ಕ್ಯಾಮರಾವಿದ್ದು, ಇದನ್ನು ಪರಿಶೀಲಿ ಸದೇ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ. ಮೃತ ಭಾನು ಮೂರ್ತಿಗೂ ಸ್ಥಳೀಯ ಕೆಲವರಿಗೆ ಸಂಜೆ ವೇಳೆ ಗಲಾಟೆಯಾಗಿದೆ. ಅಲ್ಲಿಂದ ಬರುವ ಸಂದರ್ಭ ಘಟನೆ ಸಂಭವಿಸಿದೆ. ಮೃತನ ಸಾವಿಗೆ ಸಂಬAಧಿಸಿದAತೆ ಸಂಶಯಗಳಿದ್ದು, ನಿಖರ ಕಾರಣ ತಿಳಿಯಬೇಕು ಎಂದು ಆಗ್ರಹಿಸಿ, ಮೃತನ ಸಂಬAಧಿಕರು ಮತ್ತು ಸ್ಥಳೀಯರು ಮನೆ ಮುಂಭಾಗದ ರಸ್ತೆಯ ಪಕ್ಕದಲ್ಲಿ ಮೃತದೇಹವನ್ನಿಟ್ಟು ಕೊಂಡು ಕೆಲಕಾಲ ಒತ್ತಾಯಿಸಿದ ಘಟನೆಯೂ ನಡೆಯಿತು.

ನಂತರ ಸಿ.ಸಿ. ಕ್ಯಾಮೆರಾದ ಫೂಟೇಜ್‌ಗಳನ್ನು ತೆಗೆಯಲು ಡಿವಿಆರ್‌ನ್ನು ಕುಶಾಲನಗರಕ್ಕೆ ಕೊಂಡೊಯ್ಯಲಾಯಿತು. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್, ಠಾಣಾಧಿಕಾರಿ ಪುನೀತ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದರು.

ಹಿಂತೆಗೆತ: ಠಾಣಾಧಿಕಾರಿ ಮಹೇಶ್ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗಳನ್ನು ಗಮನಿಸಿ ಅದರ ಆಧಾರದ ಮೇಲೆ ಮೊಕದ್ದಮೆ ದಾಖಲು ಮಾಡಿ ಮುಂದಿನ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಮೇರೆಗೆ ಸ್ಥಳೀಯರು ಪ್ರತಿಭಟನೆ ಹಿಂತೆಗೆದುಕೊAಡರು.