ಮಡಿಕೇರಿ, ಫೆ. ೧: ಕೊಡಗು ಜಿಲ್ಲೆಗೆ ಎಲ್ಲೆಡೆ ತನ್ನದೇ ಆದ ಗೌರವವಿದ್ದು, ಅದನ್ನು ಕಾಪಾಡಿಕೊಳ್ಳುವಂತಾಗಬೇಕು ಎಂದು ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಇಂಗಿತ ವ್ಯಕ್ತಪಡಿಸಿದರು.

ಕರ್ನಾಟಕ ಸರಕಾರ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ವಿಭಾಗೀಯ ಪತ್ರಾಗಾರ ಕಚೇರಿ ಮೈಸೂರು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಇತಿಹಾಸ ವಿಭಾಗದ ಸಹಯೋಗದಲ್ಲಿ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ‘ಚಾರಿತ್ರಿಕ ದಾಖಲೆಗಳಲ್ಲಿ ಕೊಡಗು ಜಿಲ್ಲೆಯ ಇತಿಹಾಸ’ ವಿಷಯದಡಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ರಾಷ್ಟçಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗು ಪವಿತ್ರವಾದ ಸ್ಥಳವಾಗಿದ್ದು,

(ಮೊದಲ ಪುಟದಿಂದ) ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ-ಬೆಳೆಸುವಂತಾಗಬೇಕು. ಹೆಣ್ಣುಮಕ್ಕಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಅವಕಾಶಗಳಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ರಾಣಿ ಮಾಚಯ್ಯ ಸಲಹೆ ನೀಡಿದರು.

ಕೊಡಗಿನ ದಾಖಲೆ ಡಿಜಿಟಲೀಕರಣ

ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಹೆಚ್.ಎಲ್. ಮಂಜುನಾಥ್ ಮಾತನಾಡಿ, ಚಾರಿತ್ರಿಕ ದಾಖಲೆಗಳೇ ಆಡಳಿತದ ಬೆನ್ನೆಲುಬಾಗಿದ್ದು, ಅವುಗಳನ್ನು ಸಂರಕ್ಷಿಸಬೇಕಾದ ಅಗತ್ಯತೆ ಇದೆ. ಕೊಡಗಿನ ಬಗ್ಗೆ ದಾಖಲೆಗಳು ಸಿಗುವುದು ವಿರಳವಾಗಿದ್ದು, ಕೊಡಗಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚೀಫ್ ಕಮಿಷನರ್ ಆಫ್ ಕೂರ್ಗ್ ಎಂಬ ೧೯೩೬ರಿಂದ ೧೯೫೬ರ ವರೆಗೆ ದಾಖಲೆಗಳಿದ್ದು, ಅವುಗಳನ್ನು ಒದಗಿಸುವಂತೆ ಇಲಾಖೆಯಿಂದ ಮನವಿ ಮಾಡಲಾಗಿತ್ತಾದರೂ, ಅದು ಸಿಕ್ಕಿರಲಿಲ್ಲ. ಬಳಿಕ ಆ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಸಂರಕ್ಷಿಸು ವಂತೆ ತಿಳಿಸಿದ ಬಳಿಕ ಆ ದಾಖಲೆ ಗಳನ್ನು ಜಿಲ್ಲಾಡಳಿತ ಡಿಜಿಟಲೀಕರಣ ಗೊಳಿಸಿದೆ. ಸಾರ್ವಜನಿಕರು ಅವುಗಳನ್ನು ಮುಕ್ತವಾಗಿ ನೋಡ ಬಹುದಾಗಿದೆ. ಈ ಡಿಜಿಟಲೀಕರಣ ಕಾರ್ಯಕ್ಕಾಗಿ ರೂ. ೫೦ ಲಕ್ಷವನ್ನು ನೀಡಿದ್ದೆವು ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಫೀ.ಮಾ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ಬಿ. ರಾಘವ ಅವರು ಮಾತನಾಡಿ, ಯುವ ಜನಾಂಗಕ್ಕೆ ಕೊಡಗಿನ ಇತಿಹಾಸ ಹಾಗೂ ಪರಂಪರೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯುವ ಜನಾಂಗದಲ್ಲಿ ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮುAಬೈನ ಎಸ್‌ಎನ್‌ಡಿಟಿ ಮಹಿಳಾ ವಿವಿಯ ಮಹಿಳಾ ಅಧ್ಯಯನ ಸಂಶೋಧನಾ ಕೇಂದ್ರದ ನಿವೃತ್ತ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಡಾ. ವೀಣಾ ಪೂಣಚ್ಚ, ಹೊಟೇಲ್ ಉದ್ಯಮಿ ಶಂಕರ ಪೂಜಾರಿ, ಫೀ.ಮಾ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಕಾರ್ಯಕ್ರಮದ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥಾದ ಡಾ. ಮಹಾದೇವಯ್ಯ ಉಪಸ್ಥಿತರಿದ್ದರು. ಇದೇ ವೇಳೆ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕನ್ನಡ ಉಪನ್ಯಾಸಕ ಡಾ. ಕರುಣಾಕರ ನಿರೂಪಿಸಿ, ವಿದ್ಯಾರ್ಥಿ ಸಜನ್ ಮತ್ತು ತಂಡದವರು ಲಾವಣಿ ಹಾಡಿದರು. ಡಾ. ಮಹಾದೇವಯ್ಯ ವಂದಿಸಿದರು. ವಿಚಾರ ಸಂಕಿರಣ ಕಾರ್ಯಕ್ರಮ ತಾ. ೨ ರಂದು (ಇಂದು) ಮುಂದುವರಿಯಲಿದ್ದು, ವಿವಿಧ ವಿಚಾರಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಲಿದ್ದಾರೆ. ಈ ಸಂದರ್ಭ ವೀರಾಜಪೇಟೆಯ ಅಜಯ್ ರಾವ್ ಅವರಿಂದ ೧೯೫ ರಾಷ್ಟçಗಳ ನೋಟು ನಾಣ್ಯಗಳ ಪ್ರದರ್ಶನ ಮುಂದುವರಿಯಲಿದ್ದು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಪ್ರಾಂಶುಪಾಲ ಮೇಜರ್ ಡಾ. ರಾಘವ ಅವರು ತಿಳಿಸಿದ್ದಾರೆ.