ಭೂಮಿಯು ೧ ಬಾರಿ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಿದರೆ ಅದನ್ನು ಒಂದು ವರ್ಷ ಎಂದು ನಾವು ಕರೆಯುತ್ತೇವೆ. ಸೂರ್ಯನ ಸುತ್ತ ಇತರ ಗ್ರಹಗಳೊಂದಿಗೆ ಧೂಮಕೇತು, ಕ್ಷÄದ್ರಗ್ರಹಗಳೂ ಚಲಿಸುತ್ತಿದ್ದು, ಈ ಪೈಕಿ ಒಂದು ಧೂಮಕೇತು ೫೦,೦೦೦ ವರ್ಷಗಳಲ್ಲಿ – ಅಂದರೆ ಭೂಮಿಯು ಸೂರ್ಯನ ಸುತ್ತ ೫೦,೦೦೦ ಪ್ರದಕ್ಷಿಣೆ ಹಾಕುವಷ್ಟರಲ್ಲಿ, ಕೇವಲ ಒಂದು ಪ್ರದಕ್ಷಿಣೆ ಪೂರೈಸುತ್ತದೆ. ಇದೀಗ ಇಂತಹದ್ದೊAದು ಧೂಮಕೇತು ಭೂಮಿಯನ್ನು ಸಮೀಪಿಸುತ್ತಿದ್ದು, ಫೆ. ೧ ರಂದು ಅತ್ಯಂತ ಸಮೀಪ ಬರಲಿದೆ. ಕಳೆದ ಒಂದು ತಿಂಗಳಿನಿAದಲೇ ಭೂಮಿಯಿಂದ ವೀಕ್ಷಿಸಬಲ್ಲ ದೂರದಲ್ಲೇ ಇರುವ ಧೂಮಕೇತು, ಫೆ. ೧ ಹಾಗೂ ೨ ರಂದು ಅತ್ಯಂತ ಸಮೀಪದಿಂದ ಗೋಚರಿಸಲಿದೆ. ಹಸಿರು ಬಣ್ಣದ ಈ ಧೂಮಕೇತುವನ್ನು ಈ ಎರಡು ದಿನಗಳಂದು ಯಾವುದೇ ಟೆಲಿಸ್ಕೋಪ್, ಬೈನಾಕ್ಯುರ‍್ಸ್ ಸಹಾಯವಿಲ್ಲದೆ ನೇರ ಕಣ್ಣಿನ ಮೂಲಕ ಕೂಡ ನೋಡಬಹುದಾಗಿದೆ ಎಂದು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ಓಂSA ಹೇಳಿಕೆ ನೀಡಿದೆ.

ಅ/೨೦೨೨ ಇ೩ (ಂಖಿಈ) ಹೆಸರಿನ ಈ ಧೂಮಕೇತು ಫೆ.೧ ರಂದು ಭೂಮಿಗೆ ೪.೨ ಕೋಟಿ ಕಿ.ಮೀ ದೂರದಿಂದ ಹಾದುಹೋಗಲಿದೆ. ಕಳೆದ ವರ್ಷ ಮಾರ್ಚ್ ತಿಂಗಳು ಅಮೇರಿಕಾದ ‘ಝ್ವಿಕ್ಕಿ ಟ್ರಾನ್ಸಿಯಂಟ್ ಫೆಸಿಲಿಟಿ’ಯಲ್ಲಿ ಅತ್ಯಾಧುನಿಕ ಟೆಲಿಸ್ಕೋಪ್ ಸಹಾಯದಿಂದ ಮೊದಲ ಬಾರಿಗೆ ವೀಕ್ಷಣೆ ಮಾಡಲಾಗಿದ್ದು, ಗುರು ಗ್ರಹದ ಕಕ್ಷೆ ಸಮೀಪ ಇದ್ದುದಾಗಿ ವಿಜ್ಞಾನಿಗಳು ಮಾಹಿತಿ ಇತ್ತಿದ್ದರು. ಈ ಧೂಮಕೇತುವಿನ ಕಕ್ಷೆ, ವೇಗ ಇತ್ಯಾದಿ ವೈಜ್ಞಾನಿಕ ಮಾಹಿತಿಗಳನ್ನು ಆಧರಿಸಿ ಅದರ ಕಕ್ಷಾವಧಿ ೫೦,೦೦೦ ವರ್ಷ – ಅಂದರೆ ಸೂರ್ಯನನ್ನು ೫೦,೦೦೦ ವರ್ಷಗಳಲ್ಲಿ ಒಂದು ಬಾರಿ ಪ್ರದಕ್ಷಿಣೆಗೈಯುವುದಾಗಿ ಅಂದಾಜಿಸಲಾಯಿತು.

೪೧,೦೦೦ ಕೋಟಿ ಕಿ.ಮೀ ನಿಂದ ಕೇವಲ ೧೬ ಕೋಟಿ ಕಿ.ಮೀ ದೂರದವರೆಗೆ ವಿಸ್ತಾರವಾಗಿರುವ ಕಕ್ಷೆ..!

ಭೂಮಿಯ ಕಕ್ಷಾಕಾರ ಸಂಪೂರ್ಣ ವೃತ್ತಾಕಾರವಲ್ಲದಿದ್ದರೂ ವರ್ಷದ ಯಾವುದೇ ದಿನ, ಭೂಮಿ ಹಾಗೂ ಸೂರ್ಯನ ನಡುವಿನ ಸರಾಸರಿ ದೂರದಲ್ಲಿ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಆದರೆ ಧೂಮಕೇತುಗಳು ಈ ರೀತಿ ಅಲ್ಲ. ಹೆಪ್ಪುಗಟ್ಟಿರುವ ಅನಿಲಗಳು, ಕಲ್ಲು-ಬಂಡೆ ಹಾಗೂ ಧೂಳಿನಿಂದ ಸೃಷ್ಟಿಸಲ್ಪಟ್ಟಿರುವ ಧೂಮಕೇತುಗಳ ಕಕ್ಷಾಕಾರಗಳು ವಿಚಿತ್ರವಾಗಿರುತ್ತವೆ.

ಉದಾಹರಣೆಗೆ ಭೂಮಿಯು ಜನವರಿ ತಿಂಗಳಿನಲ್ಲಿ ಸೂರ್ಯನ ಹತ್ತಿರವಿರುತ್ತದೆ. ಸೂರ್ಯನಿಂದ ಸುಮಾರು ೧೪.೭ ಕೋಟಿ ಕಿ.ಮೀ ದೂರದಲ್ಲಿರುತ್ತದೆ. ಜುಲೈ ತಿಂಗಳಿನಲ್ಲಿ ೧೫.೨ ಕೋಟಿ ಕಿ.ಮೀ ದೂರದಲ್ಲಿರುತ್ತದೆ. ಇಲ್ಲಿ ಅಷ್ಟೇನು ದೊಡ್ಡ ಮಟ್ಟದ ವ್ಯತ್ಯಾಸವಿಲ್ಲ. ಆದರೆ ಫೆ.೧ ರಂದು ಭೂಮಿಯನ್ನು ಸಮೀಪಿಸಲಿರುವ ಅ/೨೦೨೨ ಇ೩ (ಂಖಿಈ) ಹೆಸರಿನ ಧೂಮಕೇತುವಿನ ಕಕ್ಷೆಯ ಗರಿಷ್ಠ ದೂರ ೪೧,೦೦೦ ಕೋಟಿ ಕಿ.ಮೀ ಆಗಿದ್ದರೆ, ಕನಿಷ್ಟ ದೂರ ಕೇವಲ ೧೬ ಕೋಟಿ ಕಿ.ಮೀ..! ಎಲ್ಲಾ ಧೂಮಕೇತುಗಳು ಇಂತಹ ಅಜಗಜಾಂತರ ದೂರದ ವ್ಯತ್ಯಾಸವಿರುವ ಕಕ್ಷೆೆಗಳನ್ನೇ ಹೊಂದಿರುತ್ತವೆ. ಜನವರಿ ಮಧ್ಯಭಾಗದಲ್ಲಿ ಈ ಧೂಮಕೇತು ಸೂರ್ಯನಿಂದ ಈ ಕನಿಷ್ಟ ದೂರದ ಕಕ್ಷೆಯತ್ತ ಕ್ರಮಿಸಿ ಇದೀಗ ಮತ್ತೆ ಗರಿಷ್ಠ ದೂರದತ್ತ ತನ್ನ ಪಯಣ ಪ್ರಾರಂಭಿಸಿದ್ದು, ಈ ನಡುವೆ ಫೆ.೧ ರಂದು ಭೂಮಿಯಿಂದ ಕೇವಲ ೪.೨ ಕೋಟಿ ದೂರದಲ್ಲಿರಲಿದ್ದು, ಆಕರ್ಷಣೀಯ ಹಸಿರು ಬಣ್ಣದಿಂದ ಹೊಳೆಯಲಿದೆ. ಈ ಧೂಮಕೇತುವಿನ ಸುತ್ತಳತೆಯು ಕೇವಲ ೧.೬ ಕಿ.ಮೀ.ನಷ್ಟಿದ್ದರೂ, ಹೆÀಪ್ಪುಗಟ್ಟಿರುವ ಅನಿಲಗಳು ಕರಗಿ ಬಾಹ್ಯಾಕಾಶದಲ್ಲಿ ಲಕ್ಷಾನುಗಟ್ಟಲೆ ಕಿ.ಮೀ ವ್ಯಾಪ್ತಿಗೆ ಹರಡುವ ಕಾರಣ ಧೂಮಕೇತು ವೀಕ್ಷಣೆ ಸಾಧ್ಯವಾಗಲಿದೆ.

ಕನಿಷ್ಟ ದೂರವಿರುವ ಕಕ್ಷೆಯ ಸಮೀಪ ಧೂಮಕೇತುಗಳು ಆಗಮಿಸುವಾಗ (ಅಂದರೆ ಸೂರ್ಯನ ಹತ್ತಿರ ಬರುವಾಗ) ಅವುಗಳಲ್ಲಿನ ಹೆಪ್ಟುಗಟ್ಟಿರುವ ಅನಿಲಗಳು ಕರಗಿ ಆಕರ್ಷಣೀಯ ಬಣ್ಣಗಳನ್ನು ಬಿಂಬಿಸುತ್ತವೆ. ಈ ಕಾರಣದಿಂದಾಗಿ ಭೂಮಿಯಿಂದ ಇವುಗಳನ್ನು ನೋಡಲು ಸಾಧ್ಯವಾಗುತ್ತದೆ. ಅ/೨೦೨೨ ಇ೩ (ಂಖಿಈ) ಧೂಮಕೇತು ‘ಡೈಅಟಾಮಿಕ್ ಕಾರ್ಬನ್’ ಅನಿಲ ಹೆಚ್ಚಿರುವ ಕಾರಣ ಈ ರೀತಿಯ ಹಸಿರು ಬಣ್ಣವನ್ನು ಬಿಂಬಿಸುತ್ತದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ನೋಡುವುದು ಹೇಗೆ..?

ಭಾರತದಲ್ಲಿ ಫೆಬ್ರವರಿ ೧,೨ ಹಾಗೂ ಮೊದಲನೆಯ ವಾರದಲ್ಲಿ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ಬಳಿಕವೂ ಉತ್ತರ ದಿಕ್ಕಿನೆಡೆಗೆ ಕಣ್ಣುಹಾಯಿಸಿದರೆ ಧೂಮಕೇತು ಗೋಚರವಾಗಬಹುದು. ಕೃತಕ ಬೆಳಕು ರಹಿತ ಪ್ರದೇಶಗಳಲ್ಲಿ ನೇರ ಕಣ್ಣಿಗೆ ಕಾಣಸಿಗಬಹುದಾದರೂ ಟೆಲಿಸ್ಕೋಪ್ ಇದ್ದರೆ ಅತ್ಯುತ್ತಮ. ಪೋಲ್ ಸ್ಟಾರ್ ಮೇಲೆಯೇ ಧೂಮಕೇತು ಗೋಚರವಾಗಲಿದೆ. ಈ ೨ ದಿನಗಳಲ್ಲಿ ಧೂಮಕೇತು ಮಧ್ಯಾಹ್ನ ೧ ಗಂಟೆ ೫ ನಿಮಿಷಕ್ಕೆ ಉದಯವಾಗಿ ಬೆಳಿಗ್ಗೆ ೮.೩೪ ಗಂಟೆಗೆ ಅಸ್ತವಾಗಲಿದೆ. ಈ ನಡುವೆ ಧೂಮಕೇತು ವೀಕ್ಷಣೆ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ಬಳಿಕ ಸಾಧ್ಯವಾಗಲಿದೆ. ಆದರೆ ಬಾನಂಚಿನಲ್ಲಿಯೇ ಧೂಮಕೇತು ಗೋಚರವಾಗುವುದರಿಂದ ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ವೀಕ್ಷಣೆಗೆ ತೊಡಕುಂಟಾಗಬಹುದು. ಕೃತಕ ಬೆಳಕು ರಹಿತ ಪ್ರದೇಶಗಳಲ್ಲಿ ವೀಕ್ಷಣೆ ಸುಲಭವಾಗಲಿದೆ. -ಪಿ.ಜಿ.ಆರ್.