ಕುಶಾಲನಗರ, ಜ. ೩೦: ಕುಶಾಲನಗರ ತಾಲೂಕು ಆಡಳಿತದಿಂದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ನಡೆದ ರಾಷ್ಟಿçÃಯ ಮತದಾನ ದಿನಾಚರಣೆ ಕಾರ್ಯಕ್ರಮವನ್ನು ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಅವರು ಉದ್ಘಾಟಿಸಿದರು.

ಯುವ ಸಮೂಹ ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಜ್ಞಾನವನ್ನು ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ಪ್ರಜೆಗಳಿಂದ ಮಾತ್ರ ರಾಷ್ಟçವನ್ನು ಮುನ್ನಡೆಸಲು ಸಾಧ್ಯವಾಗಿದ್ದು, ಮತದಾನದ ಅವಕಾಶವನ್ನು ಕಳೆದುಕೊಳ್ಳದಂತೆ ಪ್ರಮುಖರು ಕರೆ ನೀಡಿದರು. ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್, ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಮತ್ತು ಕಾಲೇಜಿನ ವಿಭಾಗಗಳ ಮುಖ್ಯಸ್ಥರು ಇದ್ದರು. ಇದೇ ವೇಳೆ ಕಾಲೇಜಿನ ವತಿಯಿಂದ ಡಿವೈಎಸ್‌ಪಿ ಗಂಗಾಧರಪ್ಪ ಮತ್ತು ತಹಶೀಲ್ದಾರ್ ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.*ಗೋಣಿಕೊಪ್ಪ, ಜ. ೩೦: ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ರಾಷ್ಟಿçÃಯ ಮತದಾನ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲೆ ಗೀತಾನಾಯ್ಡು ವಿದ್ಯಾರ್ಥಿಗಳಿಗೆ ಮತದಾನ ದಿನಾಚರಣೆಯ ಮಹತ್ವ ಮತ್ತು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ರಾಜಕೀಯ ಪಕ್ಷಗಳ ಮತಯಾಚನೆ, ಪ್ರಜೆಯು ಮತದಾನದ ಸಂದರ್ಭ ಎಸಗುವ ಸಾಮಾನ್ಯ ತಪ್ಪುಗಳು, ಕಡ್ಡಾಯ ನಿಯಮಗಳು, ಮತದಾರನ ಪ್ರಕ್ರಿಯೆಗಳನ್ನು ಒಳಗೊಂಡ ಅಣಕುಗಳನ್ನು ತೋರಿಸಿ ಮತದಾನದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಉಪನ್ಯಾಸಕ ನೀಲಂ, ಸ್ಮಿಷಿತ, ಲೀಲಾವತಿ, ದಿವ್ಯ, ಸಬಿಯ, ಚಂದ್ರಿಕಾ, ಕುಶ ಇದ್ದರು.

*ಗೋಣಿಕೊಪ್ಪ, ಜ. ೩೦: ರಾಷ್ಟಿçÃಯ ಮತದಾನ ದಿನಾಚರಣೆ ಯನ್ನು ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ಆಚರಿಸ ಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಗಾಯತ್ರಿ. ವ್ಯವಸ್ಥಾಪಕ ದಿನೇಶ್ ಬಂಡರ್ಕರ್, ಶಿಕ್ಷಣ ಸಂಯೋಜಕಿ ವಿಶಾಲಾಕ್ಷಮ್ಮ, ಬಿಆರ್‌ಪಿ ಗೀತಾಂಜಲಿ, ಪುಷ್ಪ ಹಾಗೂ ಶಿಕ್ಷಕರು ಹಾಜರಿದ್ದರು.