ಮಡಿಕೇರಿ, ಜ. ೩೦: ಓಯಸಿಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಹೊದವಾಡ ಕೊಟ್ಟಮುಡಿ ವತಿಯಿಂದ ಮಾ. ೪ ರಿಂದ ೧೨ ರವರೆಗೆ ನಡೆಯುವ ಕೊಡಗು ಮುಸ್ಲಿಂ ಕ್ರಿಕೆಟ್ ಕಪ್ - ೨೦೨೩ ಪಂದ್ಯಾವಳಿಯ ಲೋಗೋವನ್ನು ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್, ಚಾಮರಾಜಪೇಟೆಯ ತಮ್ಮ ಕಚೇರಿಯಲ್ಲಿ ಲೋಗೋ ಬಿಡುಗಡೆಗೊಳಿಸಿದರು. ಈ ಸಂದರ್ಭ ಪ್ರಮುಖರಾದ ಅಯುಬ್ ಖಾನ್, ಓಯಸಿಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಾಫಿ ಕೊಟ್ಟಮುಡಿ, ಕಾರ್ಯದರ್ಶಿ ಶಿಯಾಬುದ್ದೀನ್ ಕೆ.ಯು, ಪದಾಧಿಕಾರಿಗಳಾದ ಅಶ್ರಫ್ ಟಿ.ಎಚ್. ತಕ್ಕಪಳ್ಳಿ, ರೆಹಮಾನ್ ಅಂದಾಯಿ, ಸುಹೈಲ್ ಎಂ.ಎ. ಮತ್ತಿತರರು ಉಪಸ್ಥಿತರಿದ್ದರು. ಕೊಡಗು ಮುಸ್ಲಿಂ ಕ್ರಿಕೆಟ್ ಕಪ್ ಪಂದ್ಯಾವಳಿ ನಾಪೋಕ್ಲುವಿನ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಶಾಫಿ ಕೊಟ್ಟಮುಡಿ ತಿಳಿಸಿದರು.