ಮಡಿಕೇರಿ, ಜ. ೩೧: ಕರ್ನಾಟಕ ಸರಕಾರ, ರಾಜ್ಯ ಪತ್ರಾಗಾರ ಇಲಾಖೆ, ವಿಭಾಗೀಯ ಪತ್ರಾಗಾರ ಕಚೇರಿ ಮೈಸೂರು ಹಾಗೂ ಫೀ.ಮಾ. ಕಾರ್ಯಪ್ಪ ಕಾಲೇಜು ಇತಿಹಾಸ ವಿಭಾಗದ ಸಹಯೋಗದಲ್ಲಿ ಫೆ. ೧ (ಇಂದು) ಹಾಗೂ ೨ ರಂದು ಎರಡು ದಿನಗಳ ನಗರದ ಕಾರ್ಯಪ್ಪ ಕಾಲೇಜಿನಲ್ಲಿ ರಾಷ್ಟçಮಟ್ಟದ ವಿಚಾರ ಸಂಕಿರಣ ನಡೆಯಲಿದೆ.

ಚಾರಿತ್ರಿಕ ದಾಖಲೆಗಳಲ್ಲಿ ಕೊಡಗು ಜಿಲ್ಲೆಯ ಇತಿಹಾಸ ವಿಷಯದಲ್ಲಿ ವಿಚಾರ ಸಂಕಿರಣ ಜರುಗಲಿದೆ. ತಾ. ೧ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಶಾಸಕ ಅಪ್ಪಚ್ಚು ರಂಜನ್ ಅವರು ಕಾರ್ಯಕ್ರಮ ಉದ್ಘಾಟಿಸಲಿ ದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಪತ್ರಾಗಾರ ಇಲಾಖೆ ನಿರ್ದೇಶಕ ಡಾ|| ಗವಿಸಿದ್ದಯ್ಯ ಮೈಸೂರಿನ ಸಹಾಯಕ ನಿರ್ದೇಶಕ ಮಂಜುನಾಥ ಹೆಚ್.ಎನ್., ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ, ಉದ್ಯಮಿ ಶಂಕರಪೂಜಾರಿ, ನಿವೃತ್ತ ಪ್ರಾಧ್ಯಾಪಕಿ ಡಾ. ವೀಣಾ ಪೂಣಚ್ಚ ಪಾಲ್ಗೊಳ್ಳಲಿ ದ್ದಾರೆ. ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ರಾಘವ ಬಿ. ಅಧ್ಯಕ್ಷತೆ ವಹಿಸಲಿದ್ದಾರೆ.

ತಾ. ೧ ರಂದು ವಿಚಾರ ಸಂಕಿರಣ ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ವೀಣಾ ಪೂಣಚ್ಚ, ಮಂಜುನಾಥ್ ಹೆಚ್ ಎಲ್., ಡಾ. ಪುರುಷೋತ್ತಮ್, ತಾ. ೨ ರಂದು ಜಿ. ಚಿದ್ವಿಲಾಸ್, ಡಾ. ಅವಿನಾಶ್ ಬಿ., ಡಾ. ಕೋರನ ಸರಸ್ವತಿ ಅವರು ವಿವಿಧ ಅಂಶಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ತಾ. ೨ರ ಅಪರಾಹ್ನ ೨.೩೦ರಿಂದ ಪ್ರಬಂಧ ಮಂಡನೆ, ಸಮಾರೋಪ ಸಮಾರಂಭ ಜರುಗಲಿದೆ.

ಸಮಾರೋಪದಲ್ಲಿ ಅತಿಥಿಗಳಾಗಿ ಮಂಜುನಾಥ್ ಹೆಚ್.ಎಲ್., ಕಸಾಪ ಅಧ್ಯಕ್ಷ ಕೇಶವ ಕಾಮತ್, ಕಾಲೇಜಿನ ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಡಾ. ಈ ತಿಪ್ಪೇಸ್ವಾಮಿ, ಇತಿಹಾಸ ಉಪನ್ಯಾಸಕ ಸತೀಶ್‌ಕುಮಾರ್ ಎ.ಎನ್., ಬೆಂಗಳೂರಿನ ವಕೀಲ ಚರಣ್‌ಕುಮಾರ್ ಪಾಲ್ಗೊಳ್ಳಲಿದ್ದಾರೆ. ವಿಚಾರ ಸಂಕಿರಣದ ಸಂದರ್ಭ ವೀರಾಜಪೇಟೆಯ ಅಜಯ್‌ರಾವ್ ಅವರಿಂದ ನಾಣ್ಯ - ನೋಟು ಪ್ರದರ್ಶನ ಏರ್ಪಡಿಸಲಾಗಿದೆ.