ಮಡಿಕೇರಿ, ಜ. ೨೮: ಅತ್ತ., ಇತ್ತ., ಸುತ್ತ- ಮುತ್ತ ಎತ್ತಲೂ ಕಣ್ಣಾಯಿಸಿದರೂ ಕಾಣುವದು ಹಸಿರು ವರ್ಣದಿಂದ ಕೂಡಿರುವ ಬೆಟ್ಟ-ಗುಡ್ಡಗಳ ಸಾಲು.., ಜೊತೆ ಜೊತೆಯಲಿ ಅನ್ನದ ಅಗುಳಿನ ಭತ್ತದ ಗದ್ದೆಗಳು., ನಡುವಲ್ಲಿ ತಂಪನ್ನೆರೆಯುತ ಹರಿಯುವ ನದಿ-ತೊರೆಗಳು.., ಸೊಂಪಾದ ಪರಿಸರದ ನಡುವೆ ಎಲ್ಲೆಡೆ ಕನ್ನಡದ ಕಹಳೆ ಮೊಳಗಿತು. ಹಾದಿ, ಬೀದಿ ಸೇರಿದಂತೆ ಮಾರ್ಗಗಳು ಹಳದಿ-ಕೆಂಪು ಬಣ್ಣಗಳಿಂದ ಕಂಗೊಳಿಸುತ್ತಿತ್ತು. ಕನ್ನಡಮ್ಮನ ತೇರನ್ನು ಎಳೆಯುವ ಕಾಯಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಪಾಲ್ಗೊಂಡು ಸಂಭ್ರಮಿಸಿದರು. ಪೂರ್ಣಕುಂಬ ಕಳಸ ಹೊತ್ತ ಮಹಿಳೆಯರು ಮುನ್ನಡೆಸಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿಸಿತ್ತು. ಊರಿಗೇ ಊರೇ ಸಂಭ್ರಮದಲ್ಲಿತ್ತು..

ಇAತಹ ಸಂಭ್ರಮದ ವಾತಾವರಣಕ್ಕೆ ಸಾಕ್ಷಿಯಾಗಿದ್ದು ಮಡಿಕೇರಿಯಿಂದ ಪುಣ್ಯಕ್ಷೇತ್ರ ತಲಕಾವೇರಿಗೆ ತೆರಳುವ ಮಾರ್ಗ ಮಧ್ಯೆ ಸಿಗುವ ಬೆಟ್ಟಗೇರಿ ಗ್ರಾಮದಲ್ಲಿ ನಡೆದ ಮಡಿಕೇರಿ ತಾಲೂಕು ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನ. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ

(ಮೊದಲ ಪುಟದಿಂದ) ಏರ್ಪಡಿಸಲಾಗಿದ್ದ ಸಾಹಿತ್ಯ ಸಮ್ಮೇಳನ ಸಂಭ್ರಮದಿAದ ಜರುಗಿತು.

ಆಕರ್ಷಕ ಮೆರವಣಿಗೆ

ಸಮ್ಮೇಳನದ ಅಂಗವಾಗಿ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆಕರ್ಷಣೀಯವಾಗಿತ್ತು. ಭಾಗಮಂಡಲ, ಬೆಟ್ಟಗೇರಿ, ನಾಪೋಕ್ಲು ರಸ್ತೆ ಜಂಕ್ಷನ್‌ನಿAದ ಆರಂಭಗೊAಡ ಮೆರವಣಿಗೆಗೆ ಮಂಗಳ ವಾದ್ಯ, ಕಳಸ, ಸ್ಥಬ್ಧ ಚಿತ್ರಗಳು, ಗೊಂಬೆ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕೊಡಗಿನ ವಾಲಗ, ಬ್ಯಾಂಡ್ ಸೆಟ್ ಸೇರಿದಂತೆ ಕೊಡಗಿನ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಪುರುಷ, ಮಹಿಳೆಯರು, ಹಸಿರು-ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಮಹಿಳೆಯರು ಮೆರವಣಿಗೆಗೆ ಮೆರುಗು ತಂದರು. ಶಾಲಾ ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟ, ಧರ್ಮಸ್ಥಳ ಒಕ್ಕೂಟ, ಸಂಘ ಸಂಸ್ಥೆಯವರು ಜೊತೆಗೂಡಿದರು. ಸಮ್ಮೇಳನಾಧ್ಯಕ್ಷಾಗಿದ್ದ ಡಾ. ವಿಜಯ್ ಪೂಣಚ್ಚ ತಂಬAಡ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಮ್ಮೇಳನ ನಡೆಯುವ ಉದಯ ವಿದ್ಯಾಸಂಸ್ಥೆ ಆವರಣಕ್ಕೆ ಕರೆ ತರಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ ನವೀನ್ ಸಾಥ್ ನೀಡಿದರು.

ಸಾಂಸ್ಕೃತಿಕ ಸಂಭ್ರಮ

ನAತರ ಡಾ. ಕೋಡಿ ಕುಶಾಲಪ್ಪ ಗೌಡ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭದೊAದಿಗೆ ಸಾಹಿತ್ಯ ಗೋಷ್ಠಿ, ಕವಿ ಗೋಷ್ಠಿ, ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಭೋಜನದ ವಿರಾಮದಲ್ಲಿ ವಿವಿಧ ಗಾಯಕರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ಗಳು ಮೂಡಿ ಬಂದವು. ಸಮಾರೋಪದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳು, ವಿವಿಧ ಕಲಾ ತಂಡಗಳು ಹಾಗೂ ಸಾರ್ವಜನಿಕ ರಿಂದ ಮೂಡಿ ಬಂದ ಕಾರ್ಯಕ್ರಮಗಳು ಕನ್ನಡ ನಾಡು ನುಡಿ, ಸಂಸ್ಕೃತಿಯನ್ನು ಬಿಂಬಿಸಿದವು.

ಧ್ವಜಾರೋಹಣ

ಸಮ್ಮೇಳನದ ಅಂಗವಾಗಿ ರಾಷ್ಟç ಧ್ವಜಾರೋಹಣವನ್ನು ಬೆಟ್ಟಗೇರಿ ಗ್ರಾ.ಪಂ. ಅಧ್ಯಕ್ಷ ನಾಪಂಡ ರ‍್ಯಾಲಿ ಮಾದಯ್ಯ ನೆರವೇರಿಸಿದರೆ, ಸಾಹಿತ್ಯ ಪರಿಷತ್ತು ಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಕನ್ನಡ ಧ್ವಜವನ್ನು ತಾಲೂಕು ಅಧ್ಯಕ್ಷ ಅಂಬೆಕಲ್ ನವೀನ್ ನೆರವೇರಿಸಿದರು.

ದ್ವಾರಗಳ ಉದ್ಘಾಟನೆ: ಸಮ್ಮೇಳನ ಪ್ರಯುಕ್ತ ವಿವಿಧ ರಸ್ತೆಗಳಲ್ಲಿ ನಿರ್ಮಿಸಲಾಗಿದ್ದ ಗಣ್ಯರ ನೆನಪಿನ ದ್ವಾರಗಳನ್ನು ಉದ್ಘಾಟನೆ ಮಾಡಲಾಯಿತು. ಹೊಸೂರು ಜೋಯಪ್ಪ ನೆನಪಿನ ದ್ವಾರವನ್ನು ಡಿಸಿಸಿ ಬ್ಯಾಂಕ್ ನಿವೃತ್ತ ಸಹಾಯಕ ವ್ಯವಸ್ಥಾಪಕ ತೋರೇರ ಎಂ. ಮುದ್ದಯ್ಯ, ಕೆ.ಸಿ. ರಾಮಮೂರ್ತಿ ಮತ್ತು ಚೌರೀರ ಎಂ. ಪೆಮ್ಮಯ್ಯ ನೆನಪಿನ ದ್ವಾರವನ್ನು ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ವಾತಂತ್ರö್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ನೆನಪಿನ ದ್ವಾರವನ್ನು ಉದಯ ವಿದ್ಯಾಸಂಸ್ಥೆ ಮಾಜಿ ಅಧ್ಯಕ್ಷ ಕೊಡಪಾಲು ಗಣಪತಿ ಉದ್ಘಾಟಿಸಿದರು. ಕಲಾ ತಂಡವನ್ನು ಬೆಟ್ಟಗೇರಿ ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಸದಸ್ಯರಾದ ಚಳಿಯಂಡ ಕಮಲಾ ಉತ್ತಯ್ಯ, ಬಿ.ಎ. ಗೋಪಾಲ, ಎನ್.ಪಿ.ಗಂಗಮ್ಮ, ಎಂ.ಸಿ.ಲಿಖಿತ, ಕೆ.ಆರ್.ಜಲಜಾಕ್ಷಿ, ಎಂ.ಆರ್. ಮಣಿಕಂಠ, ಅಯ್ಯಗಡಿರ ಜಿ.ಮುತ್ತಪ್ಪ, ಬೈತಡ್ಕ ದೇವಯ್ಯ, ಪೊದುವಾಡ ಮೀನಾಕ್ಷಿ, ಬಿಲ್ಲವರ ಸುಶೀಲ, ಎಂ.ಕೆ. ಜಯಂತಿ, ಗೋಪಾಲ ಪೂಜಾರಿ, ಬಾಡನ ಲಿಖಿತ, ವರ್ತಕ ಪಿ.ಎ. ಹಮೀದ್, ಬೆಳೆಗಾರ ಸಿ.ಕೆ. ಸೋಮಣ್ಣ ಅವರುಗಳು ಉದ್ಘಾಟಿಸಿದರು.

ಫೀ.ಮಾ.ಕೆ.ಎಂ. ಕಾರ್ಯಪ್ಪ ನೆನಪಿನ ಮುಖ್ಯ ದ್ವಾರವನ್ನು ಮಡಿಕೇರಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ ಉದ್ಘಾಟಿಸಿದರು. ಮಳಿಗೆಗಳನ್ನು ಮಡಿಕೇರಿ ತಾಲೂಕು ತಹಶೀಲ್ದಾರ್ ಪಿ.ಎಸ್. ಮಹೇಶ್ ಉದ್ಘಾಟಿಸಿದರೆ, ನೀರ್ಕಜೆ ಮಹಾಬಲೇಶ್ವರ ಭಟ್ ಸಭಾಂಗಣವನ್ನು ಮಾಜಿ ಸೈನಿಕ ಬೊಳ್ಳಿಯಂಡ ಪ್ರಕಾಶ್ ಉದ್ಘಾಟಿಸಿ ದರು. ಕೋಡಿ ಕುಶಾಲಪ್ಪ ಗೌಡ ವೇದಿಕೆಯನ್ನು ಕನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಕೆ. ಅಪ್ಪಣ್ಣ ಉದ್ಘಾಟಿಸಿದರು.

ಬಂದೋಬಸ್ತ್

ಸಮ್ಮೇಳನದಲ್ಲಿ ಯಾವದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಸಂದರ್ಭ ಮೂರು ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನ ದಟ್ಟಣೆಯನ್ನು ಪೊಲೀಸರು ಯಶಸ್ವಿಯಾಗಿ ನಿಭಾಯಿಸಿದರು. ಸಮ್ಮೇಳನದ ಸ್ಥಳದಲ್ಲಿ ವಾಹನ ನಿಲುಗಡೆಗೆ ಪ್ರತ್ಯೆಕ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಆವರಣದಲ್ಲಿ ಪುಸ್ತಕ ಮಳಿಗೆ ಹಾಗೂ ವಿವಿಧ ಮಾಡಲಾಗಿತ್ತು. ಮೆರವಣಿಗೆ ಸಂದರ್ಭ ಮೂರು ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನ ದಟ್ಟಣೆಯನ್ನು ಪೊಲೀಸರು ಯಶಸ್ವಿಯಾಗಿ ನಿಭಾಯಿಸಿದರು. ಸಮ್ಮೇಳನದ ಸ್ಥಳದಲ್ಲಿ ವಾಹನ ನಿಲುಗಡೆಗೆ ಪ್ರತ್ಯೆಕ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಆವರಣದಲ್ಲಿ ಪುಸ್ತಕ ಮಳಿಗೆ ಹಾಗೂ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ಸಮ್ಮೇಳನಕ್ಕೆ ಆಗಮಿಸಿದ್ದ ಎಲ್ಲ ಕನ್ನಡಭಿಮಾನಿಗಳಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಹಾಗೂ ವಿವಿಧ ಉಪ ಸಮಿತಿಗಳ ಪರಿಶ್ರಮ ಸಮ್ಮೇಳನದ ಯಶಸ್ಸಿನಲ್ಲಿ ಎದ್ದು ಕಾಣುತ್ತಿತ್ತು.

-ಕುಡೆಕಲ್ ಸಂತೋಷ್

ಚಿತ್ರಗಳು; ದುಗ್ಗಳ ಸದಾನಂದ