ಭಾಷೆಯೆಂದರೆ ಅದು ಸಂವÀಹನ ಮಾಧ್ಯಮಕ್ಕೆ ಇಂದು ಮೀಸಲಾಗಿಲ್ಲ. ಭಾಷೆಯನ್ನು ಭಾವನಾತ್ಮಕ ವಿಷಯಕ್ಕೆ ಮಾತ್ರ ಮೀಸಲಿಡುವದು ಉಚಿತವಲ್ಲ. ಭಾಷೆ ಬದುಕಿನ ಮೂಲ ಸೆಲೆಯಾಗಬೇಕು, ಜೀವನವನ್ನು ಕಟ್ಟಿಕೊಡುವ ಶಕ್ತಿಯಾಗಬೇಕೆಂದು ಸಮ್ಮೇಳನಾಧ್ಯಕ್ಷ ಡಾ.ವಿಜಯ್ ಪೂಣಚ್ಚ ತಂಬAಡ ಹೇಳಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಮ್ಮ ನಾಡಿನ ಚರಿತ್ರೆ, ಭಾಷೆ, ಸಂಸ್ಕೃತಿಯ ಅರಿವಿನಲ್ಲಿ ನಮ್ಮ ನಾಗರಿಕತೆಯ ಉಳಿವಿದೆ. ಇದು ಸರಕಾರ ಅಥವಾ ಸರಕಾರೇತರ ಸಂಸ್ಥೆಗಳ ಜವಾಬ್ದಾರಿ ಎಂದರೆ ಕನ್ನಡದ ಅಸ್ತಿತ್ವವು ಸಮ್ಮೇಳನಗಳಿಗೆ ಮೀಸಲಾಗುತ್ತವೆ. ವ್ಯಕ್ತಿಗಳ ಬದುಕು, ಗ್ರಾಮ, ಊರುಗಳ ಬದುಕು, ಪಟ್ಟಣ-ನಗರಗಳ ಬದುಕು ಕ್ರಿಯಾಶೀಲವಾಗಬೇಕಾದರೆ ಕನ್ನಡ ನಮ್ಮ ಬದುಕಿನ ಭಾಗವಾಗಬೇಕಾದರೆ ಕನ್ನಡವನ್ನು ಸಮೃದ್ಧಗೊಳಿಸುವ ಪ್ರಯತ್ನ
(ಮೊದಲ ಪುಟದಿಂದ) ನಮ್ಮೆಲ್ಲರಿಂದಲೂ ಆಗಬೇಕಿದೆ. ಅದು ಕೇವಲ ಜವಾಬ್ದಾರಿಯಲ್ಲ, ನಮ್ಮೆಲ್ಲರ ಕರ್ತವ್ಯವೆಂದು ಹೇಳಿದರು.
ಕನ್ನಡ ಶಾಲೆಗಳನ್ನು ಅಭಿವೃದ್ಧಿಗೊಳಿಸುವದು ಸರಕಾರದ ಜವಾಬ್ದಾರಿ ಮಾತ್ರವಲ್ಲ, ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು, ಕನ್ನಡ ಪ್ರೇಮಿಗಳು, ಎನ್ಜಿಒಗಳು, ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಂಡರೆ ಸರಕಾರದ ಸಹಕಾರ ಕೂಡಲೇ ಶಾಲೆಗಳಿಗೆ ತಲಪಲಿದೆ. ಶಾಲೆಗಳಲ್ಲಿ ಕನ್ನಡದಲ್ಲಿ ಪರಿಣಿತಿ ಹೊಂದಿರುವ ಶಿಕ್ಷಕರನ್ನು ನೇಮಕಗೊಳಿಸಬೆಕು. ಮನೆಯಲ್ಲಿಯೂ ಮಕ್ಕಳಿಗೆ ಕನ್ನಡ ಕಲಿಸಬೇಕೆಂದು ಸಲಹೆ ಮಾಡಿದರು.
ಕೊಡಗಿನಲ್ಲಿ ಕೊಡವ ಹಾಗೂ ಅರೆಭಾಷೆ ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪನೆ ಮಾಡಿ ಬಾಷೆಯ ಬೆಳವಣಿ ಗೆಗೆ ಪೂರಕವಾಗಿ ಕೆಲಸವಾಗುತ್ತಿದೆ. ಇದರೊಂದಿಗೆ ಕೊಡಗಿನ ಮಣ್ಣಿನಲ್ಲಿರುವ ಕೆಲವೊಂದು ಉಪೇಕ್ಷಿತ ಎರವ, ಕುಡಿಯ, ಕುರುಬಗಳಂತಹ ವಿಶಿಷ್ಟ ಭಾಷೆಗಳನ್ನಾಡುವ ಬುಡಕಟ್ಟು ಜನರ ಆಡುಭಾಷೆಗಳನ್ನು ಕೂಡ ಬೆಳೆಸಬೇಕಾಗಿದೆ. ಸಣ್ಣ ಸಣ್ಣ ಭಾಷೆಗಳ ರಕ್ಷಣೆ ಆಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಪ್ಪಯ್ಯ ಗೌಡರ ನೆನಪು
ಸ್ವಾತಂತ್ರö್ಯ ಹೋರಾಟದ ಅಮರ ಸುಳ್ಯ ಧಂಗೆಯಲ್ಲಿ ಪ್ರಮುಖ ಹೋರಾಟಗಾರರಲ್ಲಿ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಒಬ್ಬರು. ತನ್ನ ಅಮರ ಸುಳ್ಯ ಸಂಗ್ರಾಮ-೧೮೩೭ ಎಂಬ ಕೃತಿಯಲ್ಲಿ ಅವರ ಬಗ್ಗೆ ಉಲ್ಲೇಖಿಸಿದ್ದೇನೆ. ಅಂತಹ ಹೋರಾಟಗಾರರನ್ನು ಇಂದಿನ ಸಮ್ಮೇಳನದಲ್ಲಿ ನೆನೆಸಿ ಕೊಂಡಿರುವದು ದೊಡ್ಡ ವಿಚಾರ ವಾಗಿದೆ.
ಅವರ ನೆನಪಿನಲ್ಲಿ ದ್ವಾರ ನಿರ್ಮಾಣ ಮಾಡಿರುವದು ಶ್ಲಾಘನೀಯವೆಂದು ಅಪ್ಪಯ್ಯ ಗೌಡರನ್ನು ಇದೇ ಸಂದರ್ಭದಲ್ಲಿ ಪೂಣಚ್ಚ ನೆನಪು ಮಾಡಿಕೊಂಡರು.