ಕೂಡಿಗೆ, ಜ. ೨೮: ಹಾರಂಗಿ ಅಣೆಕಟ್ಟೆಯ ಹಿಂಭಾಗದ ಜಲಾನಯನ ಪ್ರದೇಶದಲ್ಲಿ ೧೩೦ ಕೋಟಿ ವೆಚ್ಚದ ಹೂಳು ಎತ್ತುವ ಕಾಮಗಾರಿಗೆ ಸರಕಾರದಿಂದ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆದು ಟೆಂಡರ್ ಪಡೆದ ಕಂಪನಿ ಮುಂದಿನ ದಿನಗಳಲ್ಲಿ ಕಾಮಗಾರಿ ಆರಂಭ ಮಾಡುವ ಕಾರ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಅಣೆಕಟ್ಟೆಯ ಹಿಂಭಾಗದ ನದಿ ನೀರಿನ ಸಂಗ್ರಹದ ಕೊನೆಯ ಭಾಗದವರೆಗೆ ಸರ್ವೆ ಕಾರ್ಯ ನಡೆಸುತ್ತಿದೆ.

ಜಿಲ್ಲೆಯಲ್ಲಿ ಕಳೆದ ೨೦೧೮-೧೯ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ, ಹಾರಂಗಿ ಅಣೆಕಟ್ಟೆಯ ನೀರು ಸಂಗ್ರಹವಾಗುವ ಉಪ ನದಿಗಳ ವ್ಯಾಪ್ತಿಯಲ್ಲಿ ಭೂ ಕುಸಿತದಿಂದಾಗಿ ಭಾರೀ ಪ್ರಮಾಣದ ಮಣ್ಣು ಅಣೆಕಟ್ಟೆಯ ನೀರಿನಲ್ಲಿ ಸಂಗ್ರಹವಾಗಿದೆ. ಅಲ್ಲದೆ ಕಿರಗಂದೂರು, ಮಾದಾಪುರ, ಹಟ್ಟಿಹೊಳೆ ಭಾಗಗಳÀಲ್ಲಿ ಹಾರಂಗಿ ನದಿಗೆ ನೀರು ಸೇರುವ ೫ ಪ್ರದೇಶದ ಭಾಗಗಳಲ್ಲಿ ಭೂಕುಸಿತದಿಂದಾಗಿ ಕಿರು ಸೇತುವೆ ಸೇರಿದಂತೆ ಅನೇಕ ಕಡೆಗಳಲ್ಲಿ ಅಣೆಕಟ್ಟೆಯ ನೀರು ಸಂಗ್ರಹಕ್ಕೆ ಅಳವಡಿಸಿದ ಬೃಹತ್ ಗಾತ್ರದ ತಡೆಗೊಡೆಗಳು ಸಹ ಕುಸಿದ ಪರಿಣಾಮ ಅಧಿಕ ಪ್ರಮಾಣದ ಮಣ್ಣು ನೀರಿಗೆ ಸೇರಿ ಅಣೆಕಟ್ಟೆಯ ನೀರಿನ ಸಂಗ್ರಹÀಕ್ಕೆ ತೊಡಕುಂಟಾಗಿದೆ. ಇದರಿಂದಾಗಿ ಸಾರ್ವಜನಿಕರ ಒತ್ತಾಯದ ಮೇರೆಗೆ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಪ್ರಯತ್ನದಿಂದಾಗಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಅಧಿವೇಶನದಲ್ಲಿ ಚರ್ಚಿಸಿ, ಈ ಬಾರಿ ಕಾವೇರಿ ನೀರಾವರಿ ನಿಗಮದ ಕಾರ್ಯಸೂಚಿಯ ಅನುಸಾರವಾಗಿ ಕ್ರಿಯಾ ಯೋಜನೆ ಕೈಗೊಂಡು ಅದರ ಮೂಲಕ ಸರಕಾರಕ್ಕೆ

(ಮೊದಲ ಪುಟದಿಂದ) ಪ್ರಸ್ತಾವನೆ ನೀಡಿ, ಅದರ ಅನುಗುಣವಾಗಿ ಈ ಸಾಲಿನಲ್ಲಿ ೧೩೦ ಕೋಟಿ ಹಣ ಬಿಡುಗಡೆಗೊಂಡಿದ್ದು, ಅದರ ಮುಖೇನ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯೂ ನಡೆದಿತ್ತು. ಮಹಾರಾಷ್ಟçದ ಕಂಪನಿ ಮುಂದಿನ ದಿನಗಳಲ್ಲಿ ಕಾಮಗಾರಿಗಳನ್ನು ಆರಂಭ ಮಾಡುವ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ.

೧೩೦ ಕೋಟಿ ವೆಚ್ಚದ ಕಾಮಗಾರಿಗಳಲ್ಲಿ ಅಣೆಕಟ್ಟೆಯ ಹಿಂಭಾಗದ ಕೊನೆಯ ಭಾಗದ ಕಿರಗಂದೂರು ವ್ಯಾಪ್ತಿಯ ಹಿನ್ನೀರಿನ ಪ್ರದೇಶದ ೫ ಕಿಲೋಮೀಟರ್ ದೂರದವರೆಗೆ ಅಣೆಕಟ್ಟೆಯ ಹೂಳು ಎತ್ತುವಿಕೆ, ಅದಕ್ಕೆ ಸಂಬAಧಿಸಿದAತೆ ಕಿರು ಸೇತುವೆ ನಿರ್ಮಾಣ, ಬರೆಕುಸಿತ ಜಾಗದಲ್ಲಿ ಬೃಹತ್ ತಡೆಗೋಡೆ ನಿರ್ಮಾಣ, ಪಾದಚಾರಿ ಸೇತುವೆ, ಅಣೆಕಟ್ಟೆಯ ನೀರು ಸಂಗ್ರಹದ ಮುಖ್ಯ ನದಿಗಳು ಸೇರುವ ಜಾಗದಲ್ಲಿ ತಡೆಗೋಡೆ ಸೇರಿದಂತೆ, ಮುಖ್ಯ ಸೇತುವೆ ನಿರ್ಮಾಣಗಳ ಕಾಮಗಾರಿಳು ಸೇರಿದಂತೆ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ನಡೆದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ನೇತ್ರತ್ವದಲ್ಲಿ ಭೂಮಿ ಪೂಜೆ ನಡೆದು ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ.