ಕೂಡಿಗೆ, ಜ. ೨೯: ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯ ವತಿಯಿಂದ ಶ್ರೀ ವಿವೇಕಾನಂದ ಶರಣ ಸ್ವಾಮೀಜಿ ಯವರ ಜನ್ಮ ಶತಮಾನೋತ್ಸವ ಮತ್ತು ಶಾಲಾ ಸಮಾಜೋತ್ಸವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ಶಾಲಾ ಸಮಾಜೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದ್ಗುರು ಅಪ್ಪಯ್ಯ ಪ್ರೌಢಶಾಲೆಯ ವ್ಯವಸ್ಥಾಪಕ ಎಂ.ಬಿ. ಮೊಣ್ಣಪ್ಪ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ನೆರವೇರಿಸಿ ನಂತರ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಆರಂಭವಾಗಿರುವ ಈ ಪ್ರೌಢಶಾಲೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಧ್ಯಾ ದಾನವನ್ನು ಮಾಡಿರುತ್ತಾರೆ. ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪರಿಪೂರ್ಣ ವಾದ ಸಮಾಜವನ್ನು ಕಟ್ಟಲು ಎಲ್ಲಾ ರಂಗದಲ್ಲಿಯೂ ಮುಂದಿದ್ದಾರೆ.

ಅAತಹ ಶಿಕ್ಷಣವನ್ನು ಇಂದಿನ ವಿದ್ಯಾರ್ಥಿಗಳು ಪಡೆದು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಮಾತನಾಡಿ, ಶಿಕ್ಷಣ ಸಂಸ್ಥೆಗಳೊAದಿಗೆ ಪೋಷಕರು ಭಾವನಾತ್ಮಕ ಸಂಬAಧವನ್ನು ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಓದುವಿಕೆಗೆ ಪೂರಕವಾದ ವಾತಾವರಣವಾಗಿರುವುದರಿಂದ, ಅಲ್ಲದೆ ಸರಕಾರದ ವತಿಯಿಂದ ಎಲ್ಲಾ ಸೌಲಭ್ಯಗಳು ದೊರೆಯುತ್ತಿರುವ ಹಿನ್ನೆಲೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಲಿಂಗಮೂರ್ತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ತಮ್ಮಣ್ಣಗೌಡ, ಉದ್ಯಮಿ ಬಿ.ಡಿ. ಅಣ್ಣಯ್ಯ, ಶಾಲಾ ಆಡಳಿತ ಮಂಡಳಿಯ ಖಜಾಂಚಿ ಎಂ.ಬಿ. ಜಯಂತ, ಸದಸ್ಯರಾದ ಬಿ.ವಿ. ಅರುಣ್ ಕುಮಾರ್, ಮುಖ್ಯೋಪಾಧ್ಯಾಯ ಸಿ., ದುರ್ಗೇಶ್, ಪೋಷಕ ಪರಿಷತ್‌ನ ಅಧ್ಯಕ್ಷ ಎಸ್.ಕೆ. ದಿನೇಶ್, ಮಾಜಿ ಅಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ಮನು, ಸೇರಿದಂತೆ ಶಾಲಾ ಶಿಕ್ಷಕರ ವೃಂದ, ಸಮಿತಿಯ ನಿರ್ದೇಶಕರು ಹಾಜರಿದ್ದರು.

ಶಾಲಾ ಸಮಾಜೋತ್ಸವ ಅಂಗವಾಗಿ ಕ್ರೀಡಾಕೂಟಗಳು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು.