ಸುಂಟಿಕೊಪ್ಪ, ಜ. ೨೮: ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಪರಿಸರ ನೀರು ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮ ನಡೆಯಿತು.
ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಿಂದ ಹಸಿರು, ಹಳದಿ, ನೀಲಿ ಕೆಂಪು ಸಮವಸ್ತçದಲ್ಲಿ ಹೊರಟ ವಿದ್ಯಾರ್ಥಿಗಳು ಪರಿಸರ ಉಳಿಸಿ, ಮರ ಗಿಡಗಳನ್ನು ನೆಟ್ಟು ಬೆಳಸಿ, ನೀರನ್ನು ಮಿತವಾಗಿ ಬಳಸಿ ವ್ಯಯ ಮಾಡಬೇಡಿ, ಆಹಾರವನ್ನು ಎಷ್ಟು ಬೇಕೋ ಅಷ್ಟು ಸೇವಿಸಿ ವ್ಯಯ ಮಾಡಬೇಡಿ, ಮನೆಯ ಸುತ್ತ ಮುತ್ತಲಿನಲ್ಲಿ ಗಿಡ ಮರಗಳನ್ನು ಬೆಳಸುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸಿ ಎಂಬ ನಾಮಫಲಕವನ್ನು ಹಿಡಿದು ಬ್ಯಾಂಡ್ ವಾದ್ಯದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಜಾಥಾಕ್ಕೆ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ಅರುಳ್ ಸೆಲ್ವಕುಮಾರ್, ಶಾಲಾ ಮುಖ್ಯೋಪಾಧ್ಯಾಯರಾದ ಸೆಲ್ವರಾಜ್, ಚಾರ್ಲಿ ಅವರುಗಳು ಚಾಲನೆ ನೀಡಿದರು.
ಶಾಲೆಯ ಮಕ್ಕಳು ಹಾಗೂ ಸಹಶಿಕ್ಷಕರು ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದರು.