ಸೋಮವಾರಪೇಟೆ, ಜ. ೨೮: ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ. ೧೧ರಂದು ಗೌಡಳ್ಳಿಯ ಬಿಜಿಸ್ ಮೈದಾನದಲ್ಲಿ ೮ ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಸಾಂಸ್ಕೃತಿಕ ಕಲಾ ತಂಡಗಳನ್ನು ತಮ್ಮ ಪ್ರದರ್ಶನ ನೀಡಲು ಆಹ್ವಾನಿಸಲಾಗಿದೆ. ಹೊಸ ಪ್ರತಿಭೆ ಮತ್ತು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಸಾಂಸ್ಕೃತಿಕ ತಂಡಗಳ ಆಯ್ಕೆ ಸಮಿತಿಯ ತೀರ್ಮಾನವೆ ಅಂತಿಮವಾಗಿರುತ್ತದೆ. ತಂಡಗಳು ತಮ್ಮ ವಿವರಗಳನ್ನು ಕಳುಹಿಸಲು ಫೆ.೪ ಅಂತಿಮ ದಿನವಾಗಿರುತ್ತದೆ. ತಂಡದಲ್ಲಿ ೬ ರಿಂದ ೮ ಮಂದಿ ಇರಬೇಕು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ಸಾಂಸ್ಕೃತಿಕ ಸಮಿತಿ (ಚಂದ್ರಕಲಾ ೯೪೮೦೭೩೦೪೬೪) ಅವರನ್ನು ಸಂಪರ್ಕಿಸಬಹುದು ಎಂದು ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ತಿಳಿಸಿದ್ದಾರೆ.