ಮಡಿಕೇರಿ, ಜ. ೨೮: ಜಾತಿ-ಮತ ಭೇದವಿಲ್ಲದೆ ಪೂರ್ವಜರು ನಡೆದುಕೊಂಡು ಬಂದ ದಾರಿಯಲ್ಲಿ ಯುವ ಜನತೆ ಸಾಗಬೇಕೆಂದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಪುತ್ರ, ನಿವೃತ್ತ ಏರ್ ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪ ಅವರು ಕರೆ ನೀಡಿದರು. ದೇಶದ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ೧೨೪ನೆಯ ಹುಟ್ಟುಹಬ್ಬದ ಪ್ರಯುಕ್ತ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವತಿಯಿಂದ ನಗರದ ರೋಷನಾರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಸಮಾಧಿ ಬಳಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

(ಮೊದಲ ಪುಟದಿಂದ) ಜಾತಿ, ಮತ ಅಥವಾ ಮಹಿಳೆಯರು-ಪುರುಷರು ಎಂಬ ಭೇದವನ್ನು ಮರೆತು ವಿನಮ್ರತಾಭಾವ ದಿಂದ ಯುವಜನತೆ ಪೂರ್ವಜರ ದಾರಿದೀಪ ಅನುಸರಿಸಿ ದೇಶದ ಏಳಿಗೆಗೆ ಕಾರಣಕರ್ತರಾಗ ಬೇಕೆಂದರು. ಬಳಿಕ ಯುವಜನರನ್ನು ಪ್ರೋತ್ಸಾಹಿಸು ವಂತಹ ಅತ್ಯುತ್ತಮ ಸಂದೇಶ ವೊಂದನ್ನು ಅವರು ನೀಡಿದರು.

ಇದಕ್ಕೂ ಮೊದಲು ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ವಿದ್ಯಾಸಂಸ್ಥೆಯ ಶಿಕ್ಷಕಿ ಚಿತ್ರ ನಂಜಪ್ಪ ಅವರು ನೇತೃತ್ವ ವಹಿಸಿದ್ದ ಈ ಭಜನಾ ತಂಡದ ಭಜನೆ ನೆರೆದಿದ್ದವರ ಮನಸೂರೆಗೊಂಡಿತು. ತಮ್ಮ ಸೇನೆಯಲ್ಲಿನ ಅನುಭವಗಳ ಕುರಿತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹಿತನುಡಿಗಳನ್ನು ಕೊಡಗು ವಿದ್ಯಾಲಯದ ೯ನೇ ತರಗತಿಯ ವಿದ್ಯಾರ್ಥಿಗಳು ಪನರಾವರ್ತಿಸಿದರು. ವಿದ್ಯಾರ್ಥಿನಿ ಕೃತಿ ಅಯ್ಯಪ್ಪ ಕಾರ್ಯಪ್ಪ ಅವರ ಪರಿಚಯವನ್ನು ಓದಿದರು. ನೆರೆದಿದ್ದ ಗಣ್ಯರೆಲ್ಲರೂ ಕಾರ್ಯಪ್ಪ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿದರು. ರಾಷ್ಟçಗೀತೆಯೊಂದಿಗೆ (ಮೊದಲ ಪುಟದಿಂದ) ಜಾತಿ, ಮತ ಅಥವಾ ಮಹಿಳೆಯರು-ಪುರುಷರು ಎಂಬ ಭೇದವನ್ನು ಮರೆತು ವಿನಮ್ರತಾಭಾವ ದಿಂದ ಯುವಜನತೆ ಪೂರ್ವಜರ ದಾರಿದೀಪ ಅನುಸರಿಸಿ ದೇಶದ ಏಳಿಗೆಗೆ ಕಾರಣಕರ್ತರಾಗ ಬೇಕೆಂದರು. ಬಳಿಕ ಯುವಜನರನ್ನು ಪ್ರೋತ್ಸಾಹಿಸು ವಂತಹ ಅತ್ಯುತ್ತಮ ಸಂದೇಶ ವೊಂದನ್ನು ಅವರು ನೀಡಿದರು.

ಇದಕ್ಕೂ ಮೊದಲು ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ವಿದ್ಯಾಸಂಸ್ಥೆಯ ಶಿಕ್ಷಕಿ ಚಿತ್ರ ನಂಜಪ್ಪ ಅವರು ನೇತೃತ್ವ ವಹಿಸಿದ್ದ ಈ ಭಜನಾ ತಂಡದ ಭಜನೆ ನೆರೆದಿದ್ದವರ ಮನಸೂರೆಗೊಂಡಿತು. ತಮ್ಮ ಸೇನೆಯಲ್ಲಿನ ಅನುಭವಗಳ ಕುರಿತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹಿತನುಡಿಗಳನ್ನು ಕೊಡಗು ವಿದ್ಯಾಲಯದ ೯ನೇ ತರಗತಿಯ ವಿದ್ಯಾರ್ಥಿಗಳು ಪನರಾವರ್ತಿಸಿದರು. ವಿದ್ಯಾರ್ಥಿನಿ ಕೃತಿ ಅಯ್ಯಪ್ಪ ಕಾರ್ಯಪ್ಪ ಅವರ ಪರಿಚಯವನ್ನು ಓದಿದರು. ನೆರೆದಿದ್ದ ಗಣ್ಯರೆಲ್ಲರೂ ಕಾರ್ಯಪ್ಪ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿದರು. ರಾಷ್ಟçಗೀತೆಯೊಂದಿಗೆ ದ್ವಿತೀಯ ಬಹುಮಾನ ಪಡೆದುಕೊಂಡರು. ಕೊಡಗು ವಿದ್ಯಾಲಯದ ಕೃತಿ ಅಯ್ಯಪ್ಪ ತೃತೀಯ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಪುತ್ರಿ ನಳಿನಿ ಕಾರ್ಯಪ್ಪ, ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಕಣ್ಣನ್, ೧೯-ಕರ್ನಾಟಕ ಬೆಟಾಲಿಯನ್ ಮುಖ್ಯಸ್ಥ ಝೆಡ್.ಜಿ ರ‍್ಹಾನ, ಕೊಡಗು ವಿದ್ಯಾಲಯ ಎನ್.ಸಿ.ಸಿ ವಿಭಾಗದ ಮುಖ್ಯಸ್ಥ ದಾಮೋದರ್,ಕೊಡಗು ವಿದ್ಯಾಲಯದ ವ್ಯವಸ್ಥಾಪಕ ರವಿ, ವಿದ್ಯಾಸಂಸ್ಥೆಯ ಸಮಿತಿಯ ಪ್ರಮುಖರಾದ ಉತ್ತಪ್ಪ, ನಿಯತಾ ದೇವಯ್ಯ, ಶಿಕ್ಷಕಿ ಇಂದಿರಾ ಕೆ.ಪಿ ಹಾಗೂ ಇತರರು ಹಾಜರಿದ್ದರು.