ಗೋಣಿಕೊಪ್ಪ ವರದಿ, ಜ. ೨೮: ಕುಟ್ಟಂದಿ ಕೆ.ಬಿ. ಪ್ರೌಢಶಾಲೆಯಲ್ಲಿ ಕ್ರೀಡೋತ್ಸವ ನಡೆಯಿತು. ಗ್ರಾಮಸ್ಥರು ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಭಾರದ ಗುಂಡು ಎಸೆತ, ಓಟ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ನೀಡಲಾಯಿತು.

ಕಾಫಿ ಬೆಳೆಗಾರ ಸುಳ್ಳಿಮಾಡ ಕಾವೇರಪ್ಪ ಶಾಲೆಗೆ ಮುಖ್ಯದ್ವಾರ, ಕಮಾನು ನಿರ್ಮಿಸಿಕೊಡುವ ಭರವಸೆ ನೀಡಿದರು. ಉದ್ಯಮಿ ನಾಮೇರ ನವೀನ್ ಶಾಲೆಯ ಅಭಿವೃದ್ಧಿಗೆ ರೂ. ೧ ಲಕ್ಷ ಹಣ ನೀಡುವುದಾಗಿ ಘೋಷಣೆ ಮಾಡಿದರು. ಸಮಿತಿ ನಿರ್ದೇಶಕರುಗಳು ಭಾಗವಹಿಸಿದ್ದರು. ಎ.ಎ. ಮುತ್ತಪ್ಪ ನಿರೂಪಿಸಿದರು. ಚಂದನ್ ವಂದಿಸಿದರು. ಶಾಲಾ ಭಿವೃದ್ಧಿ ಸಮಿತಿ ಅಧ್ಯಕ್ಷ ಕಂಜಿತAಡ ಕೆ. ಮಂದಣ್ಣ, ಉಪಾಧ್ಯಕ್ಷ ಕೊಲ್ಲೀರ ಯು. ಬೋಪಣ್ಣ, ಖಜಾಂಚಿ ಉಮೇಶ್ ಕೇಚಮಯ್ಯ, ಮುಖ್ಯ ಶಿಕ್ಷಕಿ ಕೆ.ಎ. ದ್ವೀಪ ಇದ್ದರು.