ಕುಶಾಲನಗರ, ಜ. ೨೮: ಸಮಾಜದ ಏಳಿಗೆಗಾಗಿ ಸರಕಾರ ನೀಡುವ ಅನುದಾನವನ್ನು ಸದುಪ ಯೋಗಪಡಿಸಿಕೊಂಡು ಸಮು ದಾಯದ ಅಭಿವೃದ್ಧಿ ಮಾಡುವಂತೆ ಮಾಜಿ ಶಾಸಕರು ಹಾಗೂ ನೇಕಾರರ ಮುಖಂಡರಾದ ಎಂ.ಡಿ. ಲಕ್ಷಿö್ಮ ನಾರಾಯಣ ಕರೆ ನೀಡಿದ್ದಾರೆ.
ಅವರು, ಕುಶಾಲನಗರ ಶ್ರೀ ಚೌಡೇಶ್ವರಿ ದೇವಾಲಯದ ೩೫ನೇ ವಾರ್ಷಿಕೋತ್ಸವ ಮತ್ತು ದೇವಿಯ ಪ್ರತಿಮೆ ಅನಾವರಣ ಸಮಾರಂಭದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದಲ್ಲಿ ನೇಕಾರಿಕೆ ಪಂಗಡಗಳ ೨೯ ಸಮಾಜಗಳಲ್ಲಿ ದೇವಾಂಗ ಸಮಾಜ ಪ್ರಮುಖವಾಗಿದ್ದು, ರಾಜ್ಯದಲ್ಲಿ ಅಂದಾಜು ೬೦ ಲಕ್ಷ ಜನಸಂಖ್ಯೆ ಹೊಂದಿದೆ. ಸರ್ಕಾರ ಸಮುದಾಯದ ೧.೫೩ ಲಕ್ಷ ಕುಟುಂಬಗಳಿಗೆ ಸಹಾಯ ಹಸ್ತ ನೀಡುವುದರೊಂದಿಗೆ ೪೬೩ ದೇವಾಲಯಗಳಿಗೆ ಅನುದಾನ ಕಲ್ಪಿಸಿದೆ. ನೇಕಾರರ ಒಗ್ಗಟ್ಟು ಪ್ರದರ್ಶನ ಅಗತ್ಯವಾಗಿದ್ದು, ಸರ್ಕಾರದ ಸವಲತ್ತುಗಳನ್ನು ಪಡೆಯುವ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು. ಸಮುದಾಯ ಬಾಂಧವರು ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು. ಇದೇ ಸಂದರ್ಭ ಸಂಘದ ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಂಘದ ಅಭಿವೃದ್ದಿಗೆ ಸಹಕರಿಸಿದ ಮಹನೀಯರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭ ಕುಶಾಲನಗರ ದೇವಾಂಗ ಸಂಘದ ಅಧ್ಯಕ್ಷರಾದ ಡಿ.ಟಿ. ವಿಜಯೇಂದ್ರ, ಪುರಸಭೆ ಅಧ್ಯಕ್ಷ ಬಿ. ಜಯವರ್ಧನ್, ಉದ್ಯಮಿ ಡಿ.ಎಸ್. ಜಗದೀಶ್, ಡಿ.ಎಸ್. ಕೋದಂಡ ರಾಮ್, ಡಿ.ಸಿ. ಜಗದೀಶ್, ಸಂಘದ ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಮಹಿಳಾ ಅಧ್ಯಕ್ಷೆ ಸುಲೋಚನ ರಂಗಪ್ಪ, ಕರ್ನಾಟಕ ರಾಜ್ಯ ನೇಕಾರರ ಒಕ್ಕೂಟದ ನಿರ್ದೇಶಕ ಮತ್ತು ಪುರಸಭೆ ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಕೆ. ಪಾಂಡುರAಗ, ಮಡಿಕೇರಿ ದೇವಾಂಗ ಸಂಘದ ಅಧ್ಯಕ್ಷ ಗಜಾನನ, ಭಾರತಿ ರಮೇಶ್, ಕುಶಾಲನಗರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ. ರಾಜೇಶ್, ಉಪಾಧ್ಯಕ್ಷ ಡಿ.ಕೆ. ಮಹೇಶ್, ಸಹಕಾರ್ಯದರ್ಶಿ ಡಿ.ವಿ. ಚಂದ್ರು, ಖಜಾಂಚಿ ಡಿ.ಆರ್. ಕೃಷ್ಣ ಕುಮಾರ್, ಪ್ರಚಾರ ಸಮಿತಿ ಪ್ರಮುಖರಾದ ಕೆ.ಕೆ. ನಾಗರಾಜಶೆಟ್ಟಿ ಮತ್ತಿತರರು ಇದ್ದರು.
ದೇವಿಯ ಪ್ರತಿಮೆ ಅನಾವರಣ ಸಂಬAಧ ಬೆಳಿಗ್ಗೆ ಕಾವೇರಿ ನದಿಯಿಂದ ಮೆರವಣಿಗೆಯೊಂದಿಗೆ ಕಳಸದಲ್ಲಿ ಗಂಗಾ ಜಲ ತರಲಾಯಿತು. ನಂತರ ಕಳಸಾರಾಧನೆ ಮತ್ತು ದೇವಿಗೆ ಅಭಿಷೇಕ ಮೇಲಂತಸ್ಥಿನ ಗೋಪುರ ಉದ್ಘಾಟನೆ ನಂತರ ಮಹಾ ಮಂಗಳಾರತಿ ನಡೆಯಿತು. ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.