ಕಿAಗ್ಸ್ ಇಲೆವೆನ್ ರನ್ನರ್ಸ್
ಚೆಟ್ಟಳ್ಳಿ, ಜ. ೨೮: ಕುಶಾಲನಗರದ ಗುಂಡೂರಾವ್ ಬಡಾವಣೆಯ ಮೈದಾನದಲ್ಲಿ ಸಹರಾ ಕ್ರಿಕೆಟ್ ಕ್ಲಬ್ ಕುಶಾಲನಗರ ಹಮ್ಮಿಕೊಂಡಿದ್ದ ಐಪಿಎಲ್ ಮಾದರಿಯ ಎರಡನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ ಐದು ಓವರ್‌ನಲ್ಲಿ ಆರು ವಿಕೆಟ್ ನಷ್ಟಕ್ಕೆ ೩೯ ರನ್ ಕಲೆ ಹಾಕಿತು. ೪೦ ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ ಫರ್ಹಾನ್ ಹಾಗೂ ಸಾಬುದ್ದೀನ್ ಅವರ ಅಮೋಘ ಜೊತೆಯಾಟದ ನೆರವಿನಿಂದ ೩.೫ ಓವರ್‌ನಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ, ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಒಂದು ಲಕ್ಷ ರೂ. ನಗದು ಬಹುಮಾನ ಹಾಗೂ ಒಂದು ಲಕ್ಷಕ್ಕೂ ಅಧಿಕ ಬೆಲೆಬಾಳುವ ಐಪಿಎಲ್ ಟ್ರೋಫಿ ರಾಜಸ್ಥಾನ್ ತಂಡದ ಪಾಲಾಯಿತು. ಸತತ ಎರಡನೇ ಬಾರಿಯ ಪ್ರಶಸ್ತಿಯನ್ನು ಗೆಲ್ಲುವ ಕನಸಿನಲ್ಲಿದ್ದ ಪಂಜಾಬ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಪಂದ್ಯಾವಳಿಯ ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ ಪಂಜಾಬ್ ತಂಡದ ಹರೀಶ್, ಬೆಸ್ಟ್ ಬ್ಯಾಟ್ಸ್ಮನ್ ಹರೀಶ್ ಪಂಜಾಬ್, ಬೆಸ್ಟ್ ಬೌಲರ್ ರಾಜಸ್ಥಾನ್ ರಾಯಲ್ಸ್ ತಂಡದ ಶಿಯಾಬ್, ಬೆಸ್ಟ್ ವಿಕೇಟ್ ಕೀಪರ್ ಗುಜರಾತ್ ತಂಡದ ರಿಯಾಸ್ (ಇಯ್ಯಾ) ಬೆಸ್ಟ್ ಕ್ಯಾಪ್ಟನ್ ಲಕ್ನೋ ತಂಡದ ಫÀರ್ಹಾನ್ ಹಾಗೂ ಶಿಸ್ತುಬದ್ಧ ತಂಡದ ಪ್ರಶಸ್ತಿ ಗುಜರಾತ್ ತಂಡದ ಪಾಲಾಯಿತು.