ಶ್ರೀಮಂಗಲ, ಜ. ೨೮: ಪೊನ್ನಂಪೇಟೆ ತಾಲೂಕು ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬದಿAದ ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಏಪ್ರಿಲ್ ೧ ರಿಂದ ೯ ರ ವರೆಗೆ ಆಯೋಜಿಸಿರುವ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಅನಾವರಣಗೊಳಿಸಲಾಯಿತು.

ಬಾಚೀರ ಕುಟುಂಬದ ಅಧ್ಯಕ್ಷ ಸುಜಾ ಉತ್ತಯ್ಯ ಮತ್ತು ಪಂದ್ಯಾವಳಿಯ ಅಧ್ಯಕ್ಷ ಕಾರ್ಯಪ್ಪ ಅವರ ನೇತೃತ್ವದಲ್ಲಿ ಟಿ. ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಲಾಂಛನ ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತನಾಡಿದ ಅವರು ಪ್ರವೇಶಾತಿಗೆ ಹಾಗೂ ಹೆಚ್ಚಿನ ವಿವರಕ್ಕೆ ಕುಶಾಲಪ್ಪ ಮೊ. ೯೯೭೨೩೫೫೨೨೨, ರಾಜ ಉತ್ತಪ್ಪ ಮೊ. ೯೮೮೦೧೬೧೮೮೭ ಮೂಲಕ ಸಂಪರ್ಕಿಸಲು ಕೋರಿದರು. ಈ ಸಂದರ್ಭ ಕ್ರೀಡಾಕೂಟ ಕಾರ್ಯನಿರ್ವಹಣಾಧಿಕಾರಿ ರಾಜ ಉತ್ತಪ್ಪ, ಕಾರ್ಯದರ್ಶಿ ವಾಸು ದೇವಯ್ಯ, ಕುಟುಂಬದ ಸುರಕ್ಷಾ, ಸಂಪತ್, ಅಶ್ವಿನಿ ಸಂಪತ್, ನಿರನ್ ನಾಣಯ್ಯ, ಜಸ್ಮಿ, ಸ್ವಾಗತ್, ಅಮನ್ ಸುಬ್ಬಯ್ಯ ಹಾಜರಿದ್ದರು.