ಚೆಟ್ಟಳ್ಳಿ, ಜ. ೨೮: ರಾಫೆಲ್ಸ್ ಇಂಟರ್ನ್ಯಾಷನಲ್ ಪಿಯು ಕಾಲೇಜು ಹಾಗೂ ಶಾಲೆ ಇವರ ಆಶ್ರಯದಲ್ಲಿ ಕೊಂಡAಗೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ ೨೩ ರಿಂದ ೨೬ ವರೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಳೆದ ೧೩ ವರ್ಷಗಳಿಂದ ಕೊಂಡAಗೇರಿ ಗ್ರಾಮಸ್ಥರನ್ನು ಒಂದುಗೂಡಿಸುವ ಸಲುವಾಗಿ ಕೊಂಡAಗೇರಿಯಲ್ಲಿ ಗ್ರಾಮಸ್ಥರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಾ ಬರಲಾಗುತ್ತಿದೆ.
೧೪ನೇ ಬಾರಿಯ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ಯುವ ಸಾಧಕರಿಗೆ ಸನ್ಮಾನ, ಡ್ರಗ್ಸ್ ಮುಕ್ತ ಕೊಡಗು ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಕೊಂಡAಗೇರಿ ಪ್ರೀಮಿಯರ್ ಲೀಗ್ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದು ಆಯೋಜಕರಾದ ಆಶಿಫ್ (ಆಪು) ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ೮೪೩೧೩೬೫೫೨೮ ಹಾಗೂ ೯೪೮೨೯೪೫೯೫೨ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.