ಕುಶಾಲನಗರ, ಜ. ೨೮: ಕುಶಾಲನಗರ ನೆಹರು ಬಡಾವಣೆಯ ಶ್ರೀ ಬಲಮುರಿ ಸಿದ್ಧಿ ವಿನಾಯಕ ದೇವಾಲಯದ ೨೫ ನೇ ವಾರ್ಷಿಕೋತ್ಸವ ತಾ. ೩೧ ರಿಂದ ಎರಡು ದಿನಗಳ ಕಾಲ ನಡೆಯಲಿದೆ. ತಾ. ೩೧ ರಂದು ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ ೧ ರಂದು ಶ್ರೀ ಬಲಮುರಿ ಸಿದ್ಧಿ ವಿನಾಯಕ ಸ್ವಾಮಿಯ ಪೂಜಾ ಮಹೋತ್ಸವ ನಡೆಯಲಿದೆ. ಮಹಾಮಂಗಳಾರತಿ ನಂತರ ಮಧ್ಯಾಹ್ನ ಅನ್ನಪ್ರಸಾದ ವಿನಿಯೋಗ ಮತ್ತು ಸಂಜೆ ಉತ್ಸವಮೂರ್ತಿ ಮೆರವಣಿಗೆ ನಡೆಯಲಿದೆ.