ಮಡಿಕೇರಿ ಜ.೨೭ : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯ ಕೋಟೆ ಆವರಣ, ಯವಕಪಾಡಿಯ ನಾಲ್ ನಾಡ್ ಅರಮನೆ ಮತ್ತು ದೇವಟ್ ಪರಂಬುವಿನಲ್ಲಿ ‘ಅಂತರರಾಷ್ಟಿçÃಯ ಹತ್ಯಾಕಾಂಡದ ಸ್ಮರಣೆ ದಿನ’ ವನ್ನು ಆಚರಿಸಿತು.
ಮೂರು ಪ್ರದೇಶಗಳಿಗೆ ಭೇಟಿ ನೀಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಪ್ರಮುಖರು ಹತ್ಯೆಗೀಡಾದ ಕೊಡವರಿಗೆ ಪುಷ್ಪ ನಮನದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅರಸರ ಆಳ್ವಿಕೆಯ ಕಾಲದಲ್ಲಿ ರಾಜಕೀಯ ಷಡ್ಯಂತ್ರದಿAದ ಕೊಡವರ ನರಮೇಧವಾಗಿದೆ. ದೇವಟ್ ಪರಂಬುವಿನಲ್ಲಿ ಸಾವಿರಾರು ಕೊಡವರು ಬಲಿಯಾಗಿದ್ದಾರೆ. ಬುಡಕಟ್ಟುಜನಾಂಗ ಕೊಡವರ ಹತ್ಯೆ ಘೋರ ದುರಂತವಾಗಿದ್ದು, ಅಂತರರಾಷ್ಟಿçÃಯ ಮಟ್ಟದ ಸ್ಮಾರಕ ನಿರ್ಮಾಣ ಮಾಡುವ ಅಗತ್ಯವಿದೆ. ಆ ಮೂಲಕ ಮಡಿದವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯಬೇಕು ಎಂದು ನಾಚಪ್ಪ ಇದೇ ಸಂದರ್ಭ ಒತ್ತಾಯಿಸಿದರು.
ಸಿಎನ್‌ಸಿ ಪ್ರಮುಖರಾದ ಅರೆಯಡ ಗಿರೀಶ್, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ವಿಜು, ಆಲಮಂಡ ಜೈ, ಮಂದಪAಡ ಮನೋಜ್, ಪುಟ್ಟಿಚಂಡ ದೇವಯ್ಯ, ಕಳ್ಳೀರ ಸುರೇಶ್, ನಂದಿನೆರವAಡ ಸುರೇಶ್, ಕೋಡಿರ ರಥನ್ ಈ ಸಂದರ್ಭ ಹಾಜರಿದ್ದರು.