ಸುಂಟಿಕೊಪ್ಪ, ಜ. ೨೬: ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್‌ಬೈಲು ಮಂಜಿಕೆರೆಯಲ್ಲಿ ೪ನೇ ವರ್ಷದ ಕೊರಗಜ್ಜ ದೈವದ ಗಗ್ಗರ ಸೇವೆ(ಕೋಲ) ಹಾಗೂ ಅಗೇಲು ಸೇವೆ ವಿಜೃಂಭಣೆಯಿAದ ರಾತ್ರಿ ನಡೆಯಿತು.

ದೇವಾಲಯದ ಆವರಣವನ್ನು ತಳಿರುತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನೆರೆದಿದ್ದ ಭಕ್ತರು ಕೊರಗಜ್ಜನ ಕೋಲವನ್ನು ನೋಡಿ ಪುನೀತರಾದರು. ಕೊರಗಜ್ಜನ ಕೋಲದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಹಾಸನ, ಮೈಸೂರು, ಬೆಂಗಳೂರು ಕಡೆಗಳಿಂದ ಭಕ್ತರು ಆಗಮಿಸಿ ಹರಕೆ ಒಪ್ಪಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೊರಗಜ್ಜ ದೈವದ ಬಳಿ ಪ್ರಾರ್ಥಿಸಿಕೊಂಡರು. ರಾತ್ರಿ ನಡೆದ ಅನ್ನದಾನದಲ್ಲಿ ನೂರಾರು ಭಕ್ತರು ಪಾಲ್ಗೊಂಡರು.