ಮಡಿಕೇರಿ, ಜ. ೨೬: ಅಖಿಲ ಭಾರತೀಯ ಸಾಹಿತ್ಯ ಪರಿಷತ್-ಕರ್ನಾಟಕ ಹಾಸನ ಜಿಲ್ಲಾ ಘಟಕ ಮತ್ತು ಅಕ್ಷರ ಬುಕ್ ಹೌಸ್ ಸಹಯೋಗದಲ್ಲಿ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಮಹಿಳಾ ಕವಿಗೋಷ್ಠಿಯಲ್ಲಿ ನಡೆಸಲಾಗಿದ್ದ ಕವನ ರಚನಾ ಸ್ಪರ್ಧೆಯಲ್ಲಿ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ಉಪನ್ಯಾಸಕಿ ಕೆ. ಜಯಲಕ್ಷಿö್ಮ ದ್ವಿತೀಯ ಬಹುಮಾನ ಗಳಿಸಿದ್ದಾರೆ.

ಆಯೋಜಕರು ನೀಡಿದ ವಿಷಯಗಳನ್ನು ಆಧರಿಸಿ ಕವನಗಳನ್ನು ರಚಿಸಿ ವಾಚಿಸಬೇಕಾಗಿದ್ದ ಈ ಸ್ಪರ್ಧೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಕವಯತ್ರಿಯರು ಒಟ್ಟು ೯೬ ಕವನಗಳನ್ನು ರಚಿಸಿದ್ದು, ಅವುಗಳಲ್ಲಿ ಜಯಲಕ್ಷಿö್ಮಯವರು ರಚಿಸಿದ ‘ಗೆಳತಿ ನೀ ಕೇಳಾ’ ಹಾಗೂ ‘ಭವಿಷ್ಯದಲ್ಲಿ ನನ್ನ ಮಗು’ ಈ ಕವನಗಳು ದ್ವಿತೀಯ ಸ್ಥಾನಕ್ಕೆ ಪಾತ್ರವಾಗಿವೆ.