ಮಡಿಕೇರಿ: ಮಡಿಕೇರಿ ನಗರಸಭೆಯ ಕಾವೇರಿ ಪ್ರತಿಮೆ ಬಳಿ ಗಣರಾಜ್ಯೋತ್ಸವ ಪ್ರಯುಕ್ತ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಪೌರಾಯುಕ್ತ ವಿಜಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಇತರರು ಇದ್ದರು.ಮಡಿಕೇರಿ: ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ೭೪ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವಕಾಮತ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ವರ್ತಕರುಗಳಾದ ರೆಹಮಾನ್, ಅಶ್ರಫ್, ರಾಮಣ್ಣ ,ಲೀಲಾವತಿ, ಪತ್ರಿಕಾ ಭವನದ ಸಿಬ್ಬಂದಿಗಳಾದ ಯಮುನಾ ಕೆ.ಪಿ., ರಾಜೇಶ್ ಬಿ.ಪಿ. ಹಾಗೂ ಪುಟಾಣಿಗಳಾದ ತರುಣ್ ಬಿ.ಡಿ. ಇನ್ನಿತತರು ಭಾಗವಹಿಸಿದ್ದರು.ವೀರಾಜಪೇಟೆ: ಭಾರತದ ಗಣರಾಜ್ಯವು ಐಕ್ಯತೆಯ ಪ್ರತೀಕವಾಗಿದೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಐಸಾಕ್ ರತ್ನಕರ್ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಮೈದಾನದಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಭಾರತದ ಸಂವಿಧಾನವು ಸ್ವತಂತ್ರ, ಸಮಾನತೆ ಮತ್ತು ಬ್ರಾತೃತ್ವಗಳ ಪ್ರತೀಕವಾಗಿದ್ದು, ರಾಷ್ಟಿçÃಯ ಭಾವೈಕ್ಯತೆಯ ಮಂತ್ರವನ್ನು ಪಸರಿಸಿದೆ. ಈ ಅಖಂಡ ಭಾರತದಲ್ಲಿ ಐಕ್ಯತೆಯಿಂದ ಮಾತ್ರ ರಾಷ್ಟçದ ಪ್ರಗತಿ ಸಾಧ್ಯ ಎಂದರು. ಈ ಸಂದರ್ಭ ಸಂತ ಅನ್ನಮ್ಮ ದೇವಾಲಯದ ಗುರುಗಳಾದ ರೆ.ಫಾ. ದಯಾನಂದ ಪ್ರಭು, ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಯರುಗಳು, ಬೋಧಕ-ಬೋಧಕೇತಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭ ವಿದ್ಯಾಸಂಸ್ಥೆಗಳ ಎನ್.ಸಿ.ಸಿ., ಎನ್.ಎಸ್.ಎಸ್., ಸ್ಕೌಟ್-ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು.ಸುಂಟಿಕೊಪ್ಪ: ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೭೪ನೇ ಗಣರಾಜ್ಯೋತ್ಸವ ಅಂಗವಾಗಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಬಲ್ಕಿಸ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ.ಆರ್. ಸುನಿಲ್‌ಕುಮಾರ್, ಮಂಜುಳ (ರಾಸಥಿ), ಗೀತಾ, ಶಾಲಾ ಮುಖ್ಯ ಶಿಕ್ಷಕಿ ಹೇಮಾಕುಮಾರಿ, ಮಾಜಿ ಸದಸ್ಯರಾದ ಕೆ.ಇ. ಕರೀಂ ಅವರುಗಳು ಧ್ವಜಾರೋಹಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೇರವೇರಿಸಿದರು.

ಈ ಸಂದರ್ಭ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸದಸ್ಯರಾದ ಪಿ.ಎಫ್. ಸಬಾಸ್ಟೀನ್ ಪೋಷಕರು ಇದ್ದರು. ಈ ಸಂದರ್ಭದಲ್ಲಿ ಸಹ ಶಿಕ್ಷಕಿಯರಾದ ಶೈಲಾ ಜಾಯ್, ಮೀನಾಕುಮಾರಿ ಅನಿತಾ, ಉಷಾ ಕುಮಾರಿ ಮಕ್ಕಳಿಗೆ ಸಾಂಸ್ಕೃತಿಕ ನೃತ್ಯ ತರಬೇತಿ ನೀಡಿದರು.ಸುಂಟಿಕೊಪ್ಪ: ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೭೪ನೇ ಗಣರಾಜ್ಯೋತ್ಸವ ಅಂಗವಾಗಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಬಲ್ಕಿಸ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ.ಆರ್. ಸುನಿಲ್‌ಕುಮಾರ್, ಮಂಜುಳ (ರಾಸಥಿ), ಗೀತಾ, ಶಾಲಾ ಮುಖ್ಯ ಶಿಕ್ಷಕಿ ಹೇಮಾಕುಮಾರಿ, ಮಾಜಿ ಸದಸ್ಯರಾದ ಕೆ.ಇ. ಕರೀಂ ಅವರುಗಳು ಧ್ವಜಾರೋಹಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೇರವೇರಿಸಿದರು.

ಈ ಸಂದರ್ಭ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸದಸ್ಯರಾದ ಪಿ.ಎಫ್. ಸಬಾಸ್ಟೀನ್ ಪೋಷಕರು ಇದ್ದರು. ಈ ಸಂದರ್ಭದಲ್ಲಿ ಸಹ ಶಿಕ್ಷಕಿಯರಾದ ಶೈಲಾ ಜಾಯ್, ಮೀನಾಕುಮಾರಿ ಅನಿತಾ, ಉಷಾ ಕುಮಾರಿ ಮಕ್ಕಳಿಗೆ ಸಾಂಸ್ಕೃತಿಕ ನೃತ್ಯ ತರಬೇತಿ ನೀಡಿದರು.ಕೂಡಿಗೆ: ಕೂಡಿಗೆ ಡೈರಿ ಅಧಿಕಾರಿ ವರ್ಗದವರು, ಭದ್ರತಾ ಸಿಬ್ಬಂದಿ ವರ್ಗ, ಕಾರ್ಮಿಕ ವೃಂದದವರು ಸೇರಿ ೭೪ನೇ ಗಣರಾಜ್ಯೋತ್ಸವ ಆಚರಿಸಿದರು.

ಧ್ವಜಾರೋಹಣವನ್ನು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ನೆರವೇರಿಸಿ ದಿನದ ಮಹತ್ವದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಡೈರಿ ವ್ಯವಸ್ಥಾಪಕ ನಂದೀಶ್ ಗಣರಾಜ್ಯೋತ್ಸವ ಸಂದೇಶಗಳನ್ನು ತಿಳಿಸಿದರು. ಈ ಸಂದರ್ಭ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಹಾಲು ವಿತರಣೆ ಮಾಡಲಾಯಿತು.

ಮಡಿಕೇರಿ: ಮಡಿಕೇರಿ ತಾಲೂಕಿನ ನಾಪೋಕ್ಲು, ಕಾಂತೂರು-ಮೂರ್ನಾಡು, ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರ ದಂಡೆ ಮೇಲೆ ಮಾಜಿ ಸೈನಿಕರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಶ್ರಮದಾನ, ಗಿಡ ನೆಡುವ ಮೂಲಕ ಗಣರಾಜ್ಯೋತ್ಸವನ್ನು ಆಚರಿಸ ಲಾಯಿತು.

ಬಲ್ಲಮಾವಟಿ ಪೇರೂರು ಇಗ್ಗುತಪ್ಪ ಅಮೃತ ಸರೋವರ ದಂಡೆ ಮೇಲೆ ೭೪ನೇ ಗಣರಾಜೋತ್ಸವದ ಅಂಗವಾಗಿ ಮಾಜಿ ಸೈನಿಕ ಬೊಟ್ಟಳಂಡ ಕುಶಾಲಪ್ಪ ಧ್ವಜಾ ರೋಹಣ ಕಾರ್ಯಕ್ರಮ ನೆರವೇರಿಸಿ, ಜಲ ಸಂರಕ್ಷಣೆಯ ಮಹತ್ವ ಹಾಗೂ ಅಗತ್ಯತೆಯ ಕುರಿತು ಸಂದೇಶವನ್ನು ಸಾರಿದರು. ಈ ಸಂದರ್ಭ ಜಲ ಸಂರಕ್ಷಣೆಯ ಕುರಿತಾಗಿ ಚಿತ್ರ ಕಲೆ ಹಾಗೂ ಪ್ರಬಂಧ ಸ್ವರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ನಗದು ರೂಪದ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರು, ಗ್ರಾ.ಪಂ. ಉಪಾಧ್ಯಕ್ಷರು, ಗ್ರಾ.ಪಂ. ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಸಿಬ್ಬಂದಿ ವರ್ಗದವರು, ತಾಂತ್ರಿಕ ಸಹಾಯಕ ಅಭಿಯಂತರರು, ತಾಲೂಕು ಐ.ಇ.ಸಿ. ಸಂಯೋಜಕರು, ಗ್ರಾಮಸ್ಥರು, ಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸುಂಟಿಕೊಪ್ಪ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ಗಣರಾ ಜ್ಯೋತ್ಸವ ಆಚರಿಸಲಾಯಿತು. ಸಮಾ ರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಮೋಹನ್ ಮೌರ್ಯ ಗಣರಾ ಜ್ಯೋತ್ಸವ ಅರ್ಥವನ್ನು ಬಹಳಷ್ಟು ಜನರು ತಿಳಿದಿಲ್ಲ. ಗಣ ಎಂದರೆ ಜನರು. ರಾಜ್ಯ ಎಂದರೆ ಆಡಳಿತ ಕೇಂದ್ರ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿ ದೀರ್ಘಕಾಲ ಅಧ್ಯಯನ ನಡೆಸಿ ಸ್ವಾತಂತ್ರö್ಯ ಲಭಿಸಿ ೩ ವರ್ಷಗಳಲ್ಲಿ ೧೯೫೦ ಜನವರಿ ೨೬ ರಂದು ಸಂವಿಧಾನ ದೇಶಕ್ಕೆ ಅರ್ಪಿಸಲಾಯಿತು. ನಮ್ಮ ಸಂವಿಧಾನದಲ್ಲಿ ಜಾತಿ, ಧರ್ಮ ಬೇಧವಿಲ್ಲ. ಕಾನೂನಿನಲ್ಲಿ ಎಲ್ಲರಿಗೂ ಶಿಕ್ಷಣ ಸಾರ್ವತ್ರಿಕವಾಗಿದೆ ಎಂದರು.

ಪುಟಾಣಿ ವಿದ್ಯಾರ್ಥಿಗಳ ಭಾರತಾಂಬೆಗೆ ನಮನ ಸಲ್ಲಿಸುವ ನೃತ್ಯ ಜನಮನ ರಂಜಿಸಿತು. ದಿನದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಮಾತನಾಡಿದರು. ಅಧ್ಯಕ್ಷೆಯನ್ನು ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ವಹಿಸಿದ್ದರು. ಪೊಲೀಸ್ ಇಲಾಖೆ ಯಿಂದ ರಾಷ್ಟç ಧ್ವಜಕ್ಕೆ ಗೌರವ ರಕ್ಷೆ ಅರ್ಪಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಧ್ವಜಾರೋಹಣ ನೇರವೇರಿಸಿದರು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಗ್ರಾ.ಪಂ. ಅರ್ಪಿಸಲಾಯಿತು. ನಮ್ಮ ಸಂವಿಧಾನದಲ್ಲಿ ಜಾತಿ, ಧರ್ಮ ಬೇಧವಿಲ್ಲ. ಕಾನೂನಿನಲ್ಲಿ ಎಲ್ಲರಿಗೂ ಶಿಕ್ಷಣ ಸಾರ್ವತ್ರಿಕವಾಗಿದೆ ಎಂದರು.

ಪುಟಾಣಿ ವಿದ್ಯಾರ್ಥಿಗಳ ಭಾರತಾಂಬೆಗೆ ನಮನ ಸಲ್ಲಿಸುವ ನೃತ್ಯ ಜನಮನ ರಂಜಿಸಿತು. ದಿನದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಮಾತನಾಡಿದರು. ಅಧ್ಯಕ್ಷೆಯನ್ನು ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ವಹಿಸಿದ್ದರು. ಪೊಲೀಸ್ ಇಲಾಖೆ ಯಿಂದ ರಾಷ್ಟç ಧ್ವಜಕ್ಕೆ ಗೌರವ ರಕ್ಷೆ ಅರ್ಪಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಧ್ವಜಾರೋಹಣ ನೇರವೇರಿಸಿದರು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಗ್ರಾ.ಪಂ. ಸದಸ್ಯರುಗಳಾದ ಪಿ.ಆರ್. ಸುನಿಲ್ ಕುಮಾರ್, ಆಲಿಕುಟ್ಟಿ, ರಫೀಕ್ ಖಾನ್, ಸೆಬಾಸ್ಟೀನ್, ಶಬೀರ್, ಮಂಜುಳ, ಹಸೀನಾ, ವಸಂತಿ, ಶಾಂತಿ, ನಾಗರತ್ನ, ಸೋಮನಾಥ್, ಮಂಜುನಾಥ, ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯ ಕಾರ್ಯದರ್ಶಿ ರಹೆನಾ ಫೈರೋಜ್, ಕನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ, ಲಯನ್ಸ್ ಕಾರ್ಯದರ್ಶಿ ಶಶಾಂಕ್ ಭಟ್, ವಿವಿಧ ಶಾಲೆಯ ಮುಖ್ಯೋಪಾ ಧ್ಯಾಯರುಗಳಾದ ಸೇಲ್ವರಾಜ್, ವೀರಾ ಡಿಸೋಜ, ಗೀತಾ, ಬಾಲಕೃಷ್ಣ ಹಾಗೂ ಪಂಚಾಯಿತಿ ಲೆಕ್ಕ ಪರಿಶೋಧಕಿ ಚಂದ್ರಕಲಾ, ಸ್ತಿçÃಶಕ್ತಿ ಸಂಘ, ವಾಹನ ಚಾಲಕರ, ಆಟೋ ಚಾಲಕರ ಸಂಘದ ಸದಸ್ಯರು ಮತ್ತಿತರರು ಇದ್ದರು.ಮಡಿಕೇರಿ: ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ನವೀನ್ ಅಂಬೆಕಲ್, ಸಂಘದ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ ಧ್ವಜಾರೋಹಣ ನೇರವೇರಿಸಿದರು. ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಸ್ವಾಗತಿಸಿದರು. ನಂತರ ಶಾಲಾ ಮಕ್ಕಳು, ಶಿಕ್ಷಕ ವೃಂದ, ಪೋಷಕರು ಸೇರಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭ ಶಾಲಾ ವಾರ್ಷಿಕೋತ್ಸವ ಆಚರಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಕುಶಾಲನಗರ: ಗಣರಾಜ್ಯೋತ್ಸವ ಅಂಗವಾಗಿ ಕುಶಾಲನಗರದ ವಾತ್ಸಲ್ಯ ಶಿಶು ವಿಹಾರ ಕೇಂದ್ರದಲ್ಲಿ ಪುಟ್ಟ ಮಕ್ಕಳು ಛದ್ಮವೇಷ ಧರಿಸಿ ಪ್ರದರ್ಶನ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸ್ತಿç ಶಕ್ತಿ ಸಂಘದ ಜಿಲ್ಲಾಧ್ಯಕ್ಷೆ ರೆಹನಾ ಸುಲ್ತಾನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನೀತಾ, ಪ್ರಜಾ ಪರಿವರ್ತನೆ ವೇದಿಕೆಯ ಫೈರೋಜ್ ಖಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಜಯಂತಿ, ಸ್ತಿç ಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷೆ ಸುಮತಿ, ಕಾರ್ಯದರ್ಶಿ ಹೆಚ್.ಎಂ. ಹೇಮ, ಶಿಶು ಕಲ್ಯಾಣ ಅಧಿಕಾರಿ ಅಣ್ಣಯ್ಯ ಮತ್ತಿತರರು ಇದ್ದರು.ಈ ಸಂದರ್ಭ ಕೇಂದ್ರದಲ್ಲಿ ನಡೆದ ಬಹುಮಾನ ವಿತರಣೆ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪುರಸಭೆ ಸದಸ್ಯ ಅಮೃತ್‌ರಾಜ್, ಒಕ್ಕೂಟದ ಪ್ರಮುಖರಾದ ತಾರಾಮಣಿ, ಶಿಕ್ಷಕಿ ರಂಜಿತ ಮತ್ತು ಪೋಷಕರು ಇದ್ದರು.ಆಲೂರು-ಸಿದ್ದಾಪುರ: ವಿಶ್ವದಲ್ಲೆ ಹಿರಿದಾದ ಭಾರತದ ಸಂವಿಧಾನವನ್ನು ರಚಿಸಿ ನಮ್ಮೆಲ್ಲ್ಲರಿಗೂ ಸಮಾನತೆ ತಂದುಕೊಟ್ಟ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಎಲ್ಲಾರೂ ಪ್ರತಿದಿನ ನೆನಪಿಸಿ ಕೊಳ್ಳಬೇಕಿದೆ ಎಂದು ಗೋಣಿ ಮರೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆಶಾ ಅಭಿಪ್ರಾಯಪಟ್ಟರು.

ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಹಾಲಿ ಹಾಗೂ ನಿವೃತ್ತ ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಸಂವಿಧಾನಕ್ಕೆ ತಳಹದಿ ಹಾಕಿದ ಡಾ. ಅಂಬೇಡ್ಕರ್ ಅವರು ವಿಶ್ವ ಮಟ್ಟದ ನಾಯಕರಾಗಿದ್ದಾರೆ ಇಂದು ನಾವೆಲ್ಲಾರೂ ಸಮಾಜದಲ್ಲಿ ಸಮಾನತೆಯಿಂದ ಬದುಕು ನಡೆಸುತ್ತಿದ್ದೇವೆ ಆದರೆ ಇಂದು ಸಮಾಜದ ಸ್ವಾಸ್ಥö್ಯ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾವಂತರ ಮನಸು ಪರಿಶುದ್ಧವಾಗಬೇಕು. ಇದರಿಂದ ಸಮಾಜ ಪರಿಶುದ್ದವಾಗಿ ಬದಲಾಗುತ್ತದೆ ಎಂದರು.

ಕೂಡಿಗೆಯ ನಿವೃತ್ತ ಸೈನಿಕ ಹಾಗೂ ಪ್ರಸ್ತುತ ಪಿಡಿಓ ಆಗಿ ಸೇವೆ ಸಲ್ಲಿಸುತ್ತಿರುವ ಗಣೇಶ್ ಮಾತನಾಡಿ, ಹಿರಿಯ ನಾಯಕರು ನಮ್ಮ ದೇಶಕ್ಕೆ ಸ್ವಾತಂತ್ರö್ಯ ತಂದುಕೊಡಲು ಮತ್ತು ಸಂವಿಧಾನ ರಚಿಸಲು ತುಂಬಾ ಕಷ್ಟ ಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವ ಸಮೂಹ ದೇಶ ಮತ್ತು ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಮುಂದಾಗುವAತೆ ಸಲಹೆ ನೀಡಿದರು.

ನಿವೃತ್ತ ಸೈನಿಕ ಚಂದ್ರು ಮಾತನಾಡಿ, ಪ್ರತಿಯೊಬ್ಬರು ರಾಷ್ಟçಭಕ್ತಿ ಮೈಗೂಡಿಸಿಕೊಳ್ಳಬೇಕು, ವಿಶ್ವದ ಇತರೆ ಕೆಲವು ದೇಶದ ದುಸ್ಥಿತಿಯನ್ನು ಗಮನಿಸಿದರೆ ನಮ್ಮ ರಾಷ್ಟç ಪ್ರತಿಯೊಂದರಲ್ಲೂ ಸಂಪತ್‌ಭರಿತ ವಾಗಿದೆ ಈ ದಿಸೆಯಲ್ಲಿ ಎಲ್ಲಾರೂ ದೇಶದ ಉನ್ನತಿಗಾಗಿ ಶ್ರಮಿಸಬೇಕಿದೆ ಎಂದರು.

ಹಾಲಿ ಸೈನಿಕ ರೂಪೇಶ್, ನಿವೃತ್ತ ಸೈನಿಕ ರವಿ, ನಿವೃತ್ತ ಸೈನಿಕ ಕಿಶೋರ್ ಕುಮಾರ್, ಆಲೂರು-ಸಿದ್ದಾಪುರ ಪಿಡಿಓ ಹರೀಶ್ ಮಾತನಾಡಿದರು.

ಮೊರಾರ್ಜಿ ಶಾಲೆಯ ಪ್ರಾಂಶುಪಾಲೆ ಕೆ.ಎನ್. ಭಾರತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗಣರಾಜ್ಯೋತ್ಸವ ಪ್ರಯುಕ್ತ ಹಾಲಿ ಸೈನಿಕ ರೂಪೇಶ್, ನಿವೃತ್ತ ಸೈನಿಕರಾದ ಚಂದ್ರು, ಗಣೇಶ್, ಕಿಶೋರ್‌ಕುಮಾರ್, ಸೋಮಣ್ಣ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ವಸತಿ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡು ಗೆಯನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ರಂಗೋಲಿ ಸುತ್ತಾ ಹಣತೆ ಹಚ್ಚುವ ಮೂಲಕ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗಣರಾಜ್ಯೋತ್ಸವ ಅಂಗವಾಗಿ ಬೆಳಿಗ್ಗೆ ೯ ಗಂಟೆಗೆ ನಿವೃತ್ತ ಸೈನಿಕ ಸೋಮಣ್ಣ ಧ್ವಜರೋಹಣ ನೆರವೇರಿಸಿದರು. ನಂತರ ಶಾಲೆಯ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ, ಪಥಸಂಚಲನ, ಲೇಜಿಮ್ಸ್, ಡÀಬಲ್ಸ್, ಹೊಪ್ಸ್, ಪಿರಮಿಡ್, ಯೋಗಾಸನ, ಏರೋಬಿಕ್ಸ್, ದೈಹಿಕ ವ್ಯಾಯಾಮ, ಕರಾಟೆ, ಸಿಟ್ಟಿಂಗ್ ಸಿರೀಸ್ ಮುಂತಾದ ಕ್ರೀಡಾ ಪ್ರದರ್ಶನ ನಡೆಯಿತು.ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ ಧ್ವಜಾರೋಹಣ ನೇರವೇರಿಸಿದರು. ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಸ್ವಾಗತಿಸಿದರು. ನಂತರ ಶಾಲಾ ಮಕ್ಕಳು, ಶಿಕ್ಷಕ ವೃಂದ, ಪೋಷಕರು ಸೇರಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭ ಶಾಲಾ ವಾರ್ಷಿಕೋತ್ಸವ ಆಚರಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ೭೪ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಕಾರ್ಯಪ್ಪ ಕೆ.ಬಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಧ್ವಜಾರೋಹಣ ನೆರೆವೇರಿಸಿ ಮಾತನಾಡಿ, ದೇಶಕ್ಕಾಗಿ ಮಡಿದ ವೀರರನ್ನು ಸ್ಮರಿಸಿ ವೈದ್ಯಕೀಯ ವೃತ್ತಿಯಲ್ಲಿರುವ ನಾವೆಲ್ಲರೂ ಸಮಾಜಕ್ಕೆ ಸೇವೆಯನ್ನು ನೀಡು ವಂತಾಗಬೇಕು. ಶೈಕ್ಷಣಿಕವಾಗಿ ವರ್ಷದಿಂದ ವರ್ಷಕೆ ಹೊಸ ಹೊಸ ಕೊರ್ಸ್ಗಳನ್ನು ಸಂಸ್ಥೆಯಲ್ಲಿ ಪ್ರಾರಂಭಿಸಲಾಗುತ್ತಿದ್ದು, ಅದರಂತೆ ಈ ಬಾರಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ ಪ್ರಾರಂಭಿಸಲಾಗಿದ್ದು ಅಲ್ಲದೆ ಸರ್ಕಾರದಿಂದ ರೂ. ೩೬.೯೭ ಕೋಟಿ ವೆಚ್ಚದಲ್ಲಿ ಕ್ರೀಟಿಕಲ್ ಕೇರ್ ಘಟಕ ಆಸ್ಪತ್ರೆ ನಿರ್ಮಾಣ ಮಾಡಲು ಆಡಳಿತಾತ್ಮಾಕ ಅನುಮೋದನೆ ದೊರೆತಿರುವ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿಗಳಾದ ಸ್ವಾಮಿ ಎಸ್.ಎಲ್. ಮಾತನಾಡಿದರು. ಸಮಾ ರಂಭದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ವೈದ್ಯರುಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಎಂಬಿಬಿಎಸ್, ಬಿ.ಎಸ್ಸಿ ನರ್ಸಿಂಗ್, ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಚೆಯ್ಯAಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೭೪ನೇ ಗಣರಾಜ್ಯೋತ್ಸವ ಆಚರಿಸ ಲಾಯಿತು. ಧ್ವಜಾರೋಹಣವನ್ನು ಮುಖ್ಯ ಅತಿಥಿ ನಿವೃತ್ತ ಬ್ರಿಗೇಡಿಯರ್ ಜಗದೀಶ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ರತ್ನಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶೀಸಿ ಮಾತನಾಡಿದ ನಿವೃತ್ತ ಬ್ರಿಗೇಡಿಯರ್ ಜಗದೀಶ್, ನಾವು ದೇಶದ ಉತ್ತಮ ಪ್ರಜೆಯಾಗಬೇಕು. ಅಂರ‍್ರಾಷ್ಟಿçÃಯ ಮಟ್ಟದಲ್ಲೇ ಭಾರತ ಹೆಸರು ವಾಸಿಯಾಗಿದೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ ಅನಿರುದ್ ಮಾತನಾಡಿ, ಭಾರತದ ಹೆಗ್ಗಳಿಕೆಗೆ ಸಾಕ್ಷಿಯಾದ ಭಾರತದ ಪ್ರಥಮ ಪ್ರಜೆ ದ್ರೌಪತಿ ಮುರ್ಮ, ಮೋದಿ ಹಾಗೂ ಅಬ್ದುಲ್ ಕಲಾಂ ಅವರನ್ನು ವರ್ಣಿಸಿ ಅವರು ದೇಶಕ್ಕೆ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದರು. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಕರ್ನಲ್ ಆಗಿ ನಿವೃತ್ತಿ ಹೊಂದಿದ ಕರ್ನಲ್ ಶ್ಯಾನ್‌ಬೋಗರ ನಾರಾಯಣ ಮೂರ್ತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಹಿಂದಿನ ದಿನಗಳನ್ನು ನೆನೆದರು. ಅಲ್ಲದೆ ಜೀವನದಲ್ಲಿ ಹಣ ಮುಖ್ಯವಲ್ಲ. ಪುಸ್ತಕ ಓದುವುದರಿಂದ ಜ್ಞಾನ ಶಕ್ತಿ ಹೆಚ್ಚುತ್ತದೆ. ಪ್ರಶಸ್ತಿ ದೊರೆಯದ ವಿದ್ಯಾರ್ಥಿಗಳನ್ನು ಪೋಷಕರು ಹೀಯಾಳಿಸಬೇಡಿ. ಅವರು ಕೂಡ ಉತ್ತಮ ಪ್ರಜೆಯಾಗಲು ಸಾಧ್ಯವಿದೆ ಎಂದರು. ವೇದಿಕೆಯಲ್ಲೇ ಗ್ರಂಥಾಲಯಕ್ಕೆ ೧೦ ಸಾವಿರ ಮೊತ್ತದ ಪುಸ್ತಕಗಳನ್ನು ನೀಡುವುದಾಗಿ ಘೋಷಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮಾ ಪ್ರಭು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಚೇನಂಡ ಬೋಪಯ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ವಿದ್ಯಾರ್ಥಿ ಗಳಿಗೆ ದತ್ತಿನಿಧಿ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ವತಿಯಿಂದ ಅತಿಥಿಗಳನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷೆ ಪುಷ್ಪ, ಶಿಕ್ಷಕಿ ಆರ್ಶಿಯ, ಗ್ರಾಮ ಪಂಚಾಯಿತಿ ಸದಸ್ಯರು, ಪೋಷಕರು ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಸ್ವಾಗತವನ್ನು ಮುಖ್ಯ ಶಿಕ್ಷಕಿ ಮೀನಾ ನಡೆಸಿದರೆ, ನಿರೂಪಣೆಯನ್ನು ಶಿಕ್ಷಕಿ ಜಯ ಪ್ರದಾ ಹಾಗೂ ವಂದನೆಯನ್ನು ದಮಯಂತಿ ನೆರವೇರಿಸಿದರು.ಆಲೂರು-ಸಿದ್ದಾಪುರ: ವಿಶ್ವದಲ್ಲೆ ಹಿರಿದಾದ ಭಾರತದ ಸಂವಿಧಾನವನ್ನು ರಚಿಸಿ ನಮ್ಮೆಲ್ಲ್ಲರಿಗೂ ಸಮಾನತೆ ತಂದುಕೊಟ್ಟ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಎಲ್ಲಾರೂ ಪ್ರತಿದಿನ ನೆನಪಿಸಿ ಕೊಳ್ಳಬೇಕಿದೆ ಎಂದು ಗೋಣಿ ಮರೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆಶಾ ಅಭಿಪ್ರಾಯಪಟ್ಟರು.

ಆಲೂರು-ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ೭೪ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಹಾಲಿ ಹಾಗೂ ನಿವೃತ್ತ ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಸಂವಿಧಾನಕ್ಕೆ ತಳಹದಿ ಹಾಕಿದ ಡಾ. ಅಂಬೇಡ್ಕರ್ ಅವರು ವಿಶ್ವ ಮಟ್ಟದ ನಾಯಕರಾಗಿದ್ದಾರೆ ಇಂದು ನಾವೆಲ್ಲಾರೂ ಸಮಾಜದಲ್ಲಿ ಸಮಾನತೆಯಿಂದ ಬದುಕು ನಡೆಸುತ್ತಿದ್�