ಆ್ಯಮಜಾನ್ - ೧೮,೦೦೦, ಗೂಗಲ್ ಮಾತೃ ಸಂಸ್ಥೆ ಆಲ್ಫಬೆಟ್ - ೧೨,೦೦೦, ಫೇಸ್‌ಬುಕ್ ಮಾತೃ ಸಂಸ್ಥೆ ಮೀಟಾ - ೧೧,೦೦೦, ಮೈಕ್ರೊ ಸಾಫ್ಟ್ - ೧೦,೦೦೦, ಸಾಮಾಜಿಕ ಜಾಲತಾಣದ ದಿಗ್ಗಜ ಟ್ವಿಟರ್ - ೩,೭೦೦. ಈ ಅಂಕಿ-ಅAಶಗಳು ಸದರಿ ಸಂಸ್ಥೆಗಳ ಲಾಭಾಂಶವಲ್ಲ. ಬದಲಿಗೆ ಆಯಾಯ ಸಂಸ್ಥೆಗಳು ಕಳೆದ ನವೆಂಬರ್ ೨೦೨೨ ರಿಂದೀಚೆಗೆ ವಜಾ ಮಾಡಿರುವ ತಮ್ಮಲ್ಲಿನ ಉದ್ಯೋಗಸ್ಥರ ಸಂಖ್ಯೆ. ಬೃಹತ್ ಸಂಸ್ಥೆಗಳಾಗಿರುವ ಇವುಗಳು ಸಾವಿರ ಕೋಟಿ ಮಟ್ಟದಲ್ಲಿಯೇ ತಮ್ಮ ತ್ರೆöÊಮಾಸಿಕ ಲಾಭಾಂಶದ ಲೆಕ್ಕಾಚಾರ ನಡೆಸುತ್ತವೆ. ತಮ್ಮ ಬಹುತೇಕ ಉದ್ಯೋಗಸ್ಥರಿಗೆ ಮಾಸಿಕ ಲಕ್ಷದಷ್ಟು ಸಂಬಳವನ್ನು ಹಾಗೂ ಅನುಭವಸ್ಥ ಕೌಶಲ್ಯಭರಿತರಿಗೆ ವಾರ್ಷಿಕ ರೂ. ೧೦ ಕೋಟಿವರೆಗೂ ಸಂಬಳ ನೀಡುತ್ತವೆ. ಆದರೆ ಇದೀಗ ಇಂತಹ ಬಹುಬೇಡಿಕೆ ಇದ್ದ ಉದ್ಯೋಗ ಸ್ಥರನ್ನು ಪೋಷಿಸಿ ಬೆಳೆಸಿದ ಅಥವಾ ಅವರುಗಳ ಮೂಲಕ ಹೆಮ್ಮರವಾಗಿ ಬೆಳೆದು ನಿಂತ ಸಂಸ್ಥೆಗಳಿಗೆ ಇವರುಗಳು ಬೇಡವಾಗಿದ್ದಾರೆ.
“೧೭.೫ ವರ್ಷಗಳ ಬಳಿಕ ಎಂದಿನAತೆ ಕೆಲವು ಪ್ರಮುಖ ಕೆಲಸಗಳನ್ನು ಮುಗಿಸುವ ಆಲೋಚನೆಯಿಂದ ಇಂದು ಮುಂಜಾನೆ ೪ ಗಂಟೆಗೆ ಕಚೇರಿಗೆ ತೆರಳಿದೆ. ಕಚೇರಿ ಪ್ರವೇಶಕ್ಕೆ ಉದ್ಯೋಗಿಗಳಿಗೆ ನೀಡಿರುವ ಬ್ಯಾಡ್ಜ್ ಅನ್ನು ಬಳಸಿದಾಗ ಅದು ಚಾಲ್ತಿಯಲ್ಲಿರಲಿಲ್ಲ - ಕೆಲಸದಿಂದ ತೆಗೆದುಹಾಕಿರುವ ಬಗ್ಗೆ ಕನಿಷ್ಟ ಮೇಲ್ ಆದರೂ ಮಾಡಬಹುದಿತ್ತಲ್ವಾ..” ಎಂಬುದಾಗಿ ಗೂಗಲ್ ಉದ್ಯೋಗಿ ಯೊಬ್ಬರು (ಇದೀಗ ಮಾಜಿ) ಸಾಮಾಜಿಕ ಜಾಲತಾಣಗಳಲ್ಲಿ ನೊಂದು ಬರೆದಿದ್ದಾರೆ. ಕೆಲವರನ್ನು ಈ ರೀತಿ ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ವಜಾಗೊಳಿ ಸಿದ್ದರೆ ಮತ್ತೆ ಹಲವರಿಗೆ ಗರಿಷ್ಠ ೨,೩ ತಿಂಗಳೊಳಗೆ ಸಂಸ್ಥೆಗೆ ರಾಜೀನಾಮೆ ನೀಡಬೇಕಾಗಿ ಈ-ಮೇಲ್ ಕಳುಹಿಸಲಾಗಿದೆ.
ಹೂಡಿಕೆದಾರರಿಗೆ ಶುಭ ಸುದ್ದಿ, ಭಾರೀ ಲಾಭಾಂಶ
ಮುAಬರುವ ದಿನಗಳಲ್ಲಿ ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಕುಗ್ಗಬಹುದೆಂಬ ಕಾರಣವನ್ನು ಮುಂದಿಟ್ಟುಕೊAಡು, ಇಂತಹ ಸಂದರ್ಭದಲ್ಲಿ ಸಂಸ್ಥೆಗಳು ಅನುಭವಿಸಬೇಕಾದ ನಷ್ಟಗಳನ್ನು ತಪ್ಪಿಸಲು ಉದ್ಯೋಗಸ್ಥರನ್ನು ವಜಾ ಮಾಡುವ ಕಾರ್ಯಕ್ಕೆ ಸಂಸ್ಥೆಗಳು ಇಳಿದಿವೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯ ಮೌಲ್ಯ ಷೇರುಪೇಟೆಯಲ್ಲಿ ಏರಿಕೆ ಕಾಣಲಿದೆ. ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಶ್ರೀಮಂತ ಹೂಡಿಕೆದಾರರ ಆಸ್ತಿ ಇನ್ನಷ್ಟು ಹೆಚ್ಚಲಿದೆ. ಉದಾಹರಣೆಗೆ ಗೂಗಲ್ ಮಾತೃ ಸಂಸ್ಥೆ ಆಲ್ಫಬೆಟ್ ೧೨,೦೦೦ ಉದ್ಯೋಗಿಗಳನ್ನು ವಜಾ ಮಾಡಿದ ಬಳಿಕ ಸಂಸ್ಥೆಯ ‘ಸ್ಟಾಕ್’ ಮೌಲ್ಯ ಶೇ.೫.೭ ರಷ್ಟು ಏರಿಕೆ ಕಂಡಿತು. ಈ ತೆಗೆದುಹಾಕಿರುವ ಬಗ್ಗೆ ಕನಿಷ್ಟ ಮೇಲ್ ಆದರೂ ಮಾಡಬಹುದಿತ್ತಲ್ವಾ..” ಎಂಬುದಾಗಿ ಗೂಗಲ್ ಉದ್ಯೋಗಿ ಯೊಬ್ಬರು (ಇದೀಗ ಮಾಜಿ) ಸಾಮಾಜಿಕ ಜಾಲತಾಣಗಳಲ್ಲಿ ನೊಂದು ಬರೆದಿದ್ದಾರೆ. ಕೆಲವರನ್ನು ಈ ರೀತಿ ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ವಜಾಗೊಳಿ ಸಿದ್ದರೆ ಮತ್ತೆ ಹಲವರಿಗೆ ಗರಿಷ್ಠ ೨,೩ ತಿಂಗಳೊಳಗೆ ಸಂಸ್ಥೆಗೆ ರಾಜೀನಾಮೆ ನೀಡಬೇಕಾಗಿ ಈ-ಮೇಲ್ ಕಳುಹಿಸಲಾಗಿದೆ.
ಹೂಡಿಕೆದಾರರಿಗೆ ಶುಭ ಸುದ್ದಿ, ಭಾರೀ ಲಾಭಾಂಶ
ಮುAಬರುವ ದಿನಗಳಲ್ಲಿ ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಕುಗ್ಗಬಹುದೆಂಬ ಕಾರಣವನ್ನು ಮುಂದಿಟ್ಟುಕೊAಡು, ಇಂತಹ ಸಂದರ್ಭದಲ್ಲಿ ಸಂಸ್ಥೆಗಳು ಅನುಭವಿಸಬೇಕಾದ ನಷ್ಟಗಳನ್ನು ತಪ್ಪಿಸಲು ಉದ್ಯೋಗಸ್ಥರನ್ನು ವಜಾ ಮಾಡುವ ಕಾರ್ಯಕ್ಕೆ ಸಂಸ್ಥೆಗಳು ಇಳಿದಿವೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯ ಮೌಲ್ಯ ಷೇರುಪೇಟೆಯಲ್ಲಿ ಏರಿಕೆ ಕಾಣಲಿದೆ. ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಶ್ರೀಮಂತ ಹೂಡಿಕೆದಾರರ ಆಸ್ತಿ ಇನ್ನಷ್ಟು ಹೆಚ್ಚಲಿದೆ. ಉದಾಹರಣೆಗೆ ಗೂಗಲ್ ಮಾತೃ ಸಂಸ್ಥೆ ಆಲ್ಫಬೆಟ್ ೧೨,೦೦೦ ಉದ್ಯೋಗಿಗಳನ್ನು ವಜಾ ಮಾಡಿದ ಬಳಿಕ ಸಂಸ್ಥೆಯ ‘ಸ್ಟಾಕ್’ ಮೌಲ್ಯ ಶೇ.೫.೭ ರಷ್ಟು ಏರಿಕೆ ಕಂಡಿತು. ಈ ಹೊಂದಿಕೊಳ್ಳುವ ಅನಿವಾರ್ಯತೆ ಇದೆ. ಹೊಸದಾಗಿ ಉದ್ಯೋಗ ಸೇರುವವರು ನೂತನ ತಂತ್ರಜ್ಞಾನಗಳ ಬಗ್ಗೆ ತಮ್ಮ ಶಿಕ್ಷಣದಲ್ಲಿಯೇ ಓದಿ ಅಭ್ಯಸಿಸುವ ಕಾರಣ ನೂತನ ಕೆಲಸಕ್ಕೆ ಹೊಂದಿಕೊಳ್ಳುತ್ತಾರೆ. ಅನುಭವೀ ಉದ್ಯೋಗಿಗಳು ಹೊಸ ಕೆಲಸದ ವಾತಾವರಣಕ್ಕೆ, ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಲ್ಲಿ ವಿಫಲರಾದರೆ ಅಂತಹವರಿಗೆ ಯಾವುದೇ ಕನಿಕರ ತೋರದೆ ‘ಗೇಟ್‌ಪಾಸ್’ ಖಚಿತ! ಈ ರೀತಿ ವಜಾಗೊಂಡ ಅನುಭವಸ್ಥರು ‘ವರ್ಷಾನುಭವ‘ ಪಡೆದಿರುತ್ತಾರೆ ಹೊರತು ‘ಕೌಶಲ್ಯಾನುಭವ’ ಪಡೆದು ಕೊಳ್ಳದಿದ್ದರೆ ವ್ಯರ್ಥ ಎಂಬುದು ಸಂಸ್ಥೆಗಳ ಸಮಜಾಯಿಷಿಕೆ. ನವ ಉದ್ಯೋಗಿಗಳೂ ಕೌಶಲ್ಯಹೀನತೆ ಪ್ರದರ್ಶಿಸಿದರೆ ಅವರಿಗೂ ಕೂಡ ಇದೇ ಗತಿ. ಕೆಲಸ ಕಳೆದುಕೊಂಡವರ ಪೈಕಿ ಬಹುತೇಕ ಇಂತಹವರುಗಳೇ ಇರುವುದು ಇದಕ್ಕೆ ಸಾಕ್ಷಿ.
ಕೃತಕ ಬುದ್ಧಿವಂತಿಕೆ
ಇದೀಗ ಐ.ಟಿ ವಲಯದಲ್ಲಿ ಎಲ್ಲಾ ಸಂಸ್ಥೆಗಳು ಹೆಚ್ಚಾಗಿ ಗಮನಹರಿಸುತ್ತಿರುವ ಕ್ಷೇತ್ರವೆಂದರೆ ಅದು ಕೃತಕ ಬುದ್ಧಿವಂತಿಕೆ. ಕಾಲೇಜು ಮಟ್ಟದಲ್ಲಿಯೇ ಇದರ ಬಗ್ಗೆ ವಿದ್ಯಾರ್ಥಿಗಳಿಗೂ ಅರಿವು ಮೂಡಿಸಲಾಗುತ್ತಿದೆ. ಕೇವಲ ೪,೫ ವರ್ಷಗಳ ಹಿಂದೆ ‘ಕಂಪ್ಯೂಟರ್ ಸೈನ್ಸ್ ಇಂಜಿನಿಯರಿAಗ್’ ಪದವಿ ಮಾಡುತ್ತಿದ್ದವರಿಗೆ ಈ ಕೃತಕ ಬುದ್ಧಿವಂತಿಕೆ (ಆರ್ಟಿಫಿಷಲ್ ಇಂಟಲಿಜೆನ್ಸ್) ಎಂಬ ವಿಷಯ ೪ ವರ್ಷಗಳ ಪದವಿಯ ಕೊನೆಯ ಸೆಮಿಸ್ಟರ್‌ನಲ್ಲಿ ಕೇವಲ ಆಯ್ಕಾ ವಿಷಯವಾಗಿತ್ತು.
ಆದರೆ ಇದೀಗ ‘ಕೃತಕ ಬುದ್ಧಿವಂತಿಕೆ’ ಎಂಬ ನೂತನ ಇಂಜಿನಿಯರಿAಗ್ ಬ್ರಾಂಚ್‌ನಡಿಯಲ್ಲಿ ೪ ವರ್ಷಗಳ ಅಧ್ಯಯನ ನಡೆಸಿ ಇಂಜಿನಿಯರಿAಗ್ ಪದವಿಯನ್ನೇ ಪಡೆಯಬಹುದಾಗಿದೆ.
ಅಷ್ಟರ ಮಟ್ಟಿಗೆ ಬೆಳೆದಿರುವ ಈ ಕ್ಷೇತ್ರವು ಇದೀಗ ಅದನ್ನು ಬೆಳೆಸಿ ಪೋಷಿಸಿದವರ ಕೆಲಸವನ್ನೇ ತೆಗೆಯುವಷ್ಟು ಪ್ರಭಾವಿಯಾಗಿದೆ. ಇದೀಗ ಉದ್ಯೋಗಿಗಳನ್ನು ವಜಾಗೊಳಿಸಿರುವ ಬಹುತೇಕ ಸಂಸ್ಥೆಗಳು ಕೃತಕ ಬುದ್ಧಿವಂತಿಕೆಯ ಬಳಕೆಯನ್ನು ಹೆಚ್ಚಿಸಿವೆ. ಇದರಿಂದಾಗಿ ಮಾನವ ಸಂಪನ್ಮೂಲಗಳನ್ನು ಕಡಿಮೆ ಮಾಡಿವೆ. ಈ ಕಾರಣದಿಂದಾಗಿಯೂ ಕೆಲಸ ಕಡಿತ ಸೃಷ್ಟಿಯಾಗಿರ ಬಹು ದೆಂಬುದು ಹಲವರ ಅಭಿಪ್ರಾಯ. ಒಟ್ಟಿನಲ್ಲಿ ಜಾಗತಿಕ ಆರ್ಥಿಕ ಹಿನ್ನಡೆ, ಕೌಶಲ್ಯಹೀನತೆ, ಕೃತಕ ಬುದ್ಧಿವಂತಿಕೆ - ಇವು ಮೂರರಲ್ಲಿ ಪ್ರತ್ಯೇಕವಾಗಿ ಯಾವುದನ್ನೂ ಇಂದಿನ ಪರಿಸ್ಥಿತಿಗೆ ನೇರ ಹೊಣೆ ಮಾಡಲು ಅಸಾಧ್ಯವಾದರೂ. ಇವುಗಳು ಒಟ್ಟಾಗಿ ಸೇರಿ ಉದ್ಯೋಗ ಕಡಿತ ಅಥವಾ ‘ಲೇ-ಆಫ್’ಗೆ ಕಾರಣ ಎನ್ನಬಹುದಾಗಿದೆ.
ಮುಂದೇನು..?
“೬ ತಿಂಗಳೊಳಗೆ ಹೊಸ ಕೆಲಸಕ್ಕೆ ಸೇರಿಕೊಳ್ಳಿ, ಇಲ್ಲದಿದ್ದರೆ ಗಂಟುಮೂಟೆ ಕಟ್ಟಿ ಸ್ವದೇಶಕ್ಕೆ ತೆರಳಿ”, ಇದು ಅಮೇರಿಕಾದಲ್ಲಿ ಅಲ್ಲಿನ ಸಂಸ್ಥೆಗಳಲ್ಲಿ ಉದ್ಯೋಗ ದಲ್ಲಿದ್ದು ಇದೀಗ ವಜಾಗೊಂಡಿ ರುವವರಿಗೆ ಸರಕಾರ ನೀಡಿರುವ ಸೂಚನೆ. ಇಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದು, ತೊಂದರೆಗೆ ಸಿಲುಕಿಕೊಂಡಿದ್ದಾರೆ. ‘ವರ್ಕ್ ವೀಸಾ’ದಲ್ಲಿ ಅಮೇರಿಕಾ ದಲ್ಲಿ ನೆಲೆಸಲು ಅರ್ಹತೆ ಪಡೆದು ಕೊಂಡಿರುವವರಿಗೆ ‘ವರ್ಕ್’ಇಲ್ಲದೇ ಇದ್ದರೆ ಅಲ್ಲಿರುವುದಾದರೂ ಹೇಗೆ..? ಎಂಬ ಪ್ರಶ್ನೆ ಸೃಷ್ಟಿಸಿದೆ.
ಆದ್ದರಿಂದ ಹೊಸ ಕೆಲಸವನ್ನು ಅಲ್ಲೇ ಪಡೆಯಲು ವಿದೇಶಿಯರು ಹೈರಾಣಾಗಿದ್ದಾರೆ. ಪಡೆಯದೇ ಹೋದಲ್ಲಿ ಸ್ವದೇಶಕ್ಕೆ ಆಗಮಿಸಿ ಉದ್ಯೋಗ ಪಡೆಯಲು ಶ್ರಮಿಸ ಬೇಕಿದೆ. ಜಾಗತಿಕ ಬೃಹತ್ ಸಂಸ್ಥೆ ಗಳಲ್ಲಿ ದುಡಿದು ಅನುಭವ ಪಡೆದು ಕೊಂಡಿರುವ ಇಂತಹವರು ಸ್ವದೇಶಕ್ಕೆ ಆಗಮಿಸಿ ಅಷ್ಟೊಂದು ಪ್ರಮುಖ ವಲ್ಲದ ಸಂಸ್ಥೆಗಳಲ್ಲಿ ಕಡಿಮೆ ವೇತನಕ್ಕೆ ದುಡಿ ಯಲು ದೊಡ್ಡ ಮನಸ್ಸು ಮಾಡ ಬೇಕಿದೆ.
- ಪ್ರಜ್ವಲ್ ಜಿ.ಆರ್.