ದಿನೇಶ್ ಮಾಲಂಬಿ
ಶನಿವಾರಸAತೆ, ಜ. ೨೭: ಭಾರತೀಯ ಸೇನೆಯ ಪ್ರಥಮ ಮಹಾ ದಂಡನಾಯಕ ಫೀ.ಮಾ. ಕೆ.ಎಂ.ಕಾರ್ಯಪ್ಪ ಅವರು ವಿಶ್ವವ್ಯಾಪಿ ಹೆಸರುಗಳಿಸಿದ ವೀರ ಸೇನಾನಿ. ದೇಶದ ಭದ್ರತೆಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಇಂದು ಅವರ ೧೨೪ನೇ ಜನ್ಮದಿನ ಸಂಭ್ರಮ. ಆದರೆ, ಅವರ ಹುಟ್ಟೂರಿನಲ್ಲಿಯೇ ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆಗೆ ಇನ್ನೂ ಮನ್ನಣೆ ದೊರೆತಿಲ್ಲ.
ಕೆ.ಎಂ. ಕಾರ್ಯಪ್ಪ ಅವರ ತಂದೆ ೧೮೯೯ ರಲ್ಲಿ ಶನಿವಾರಸಂತೆಯಲ್ಲಿ ಬ್ರಿಟಿಷರ ಕಾಲದಲ್ಲಿ ಶಿರಸ್ತೇದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ರಸ್ತುತ ಸಾರ್ವಜನಿಕರ ಗ್ರಂಥಾಲಯವಾಗಿರುವ ಮನೆಯಲ್ಲಿ ಕಾರ್ಯಪ್ಪ ಅವರು ಜನಿಸಿದರು. ನಂತರ ಅವರು ೪ ವರ್ಷಗಳವರೆಗೆ ಇದೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ನಂತರ ಕಾರ್ಯಪ್ಪ ಅವರ ತಂದೆ ವರ್ಗಾವಣೆಗೊಂಡ ಹಿನ್ನೆಲೆ ಮಡಿಕೇರಿಗೆ ಸ್ಥಳಾಂತರಗೊAಡರು. ನಂತರದ ದಿನಗಳಲ್ಲಿ ಶನಿವಾರಸಂತೆಯ ಮನೆ ಬ್ರಿಟಿಷ್ ಅಧಿಕಾರಿಗಳ ಕಚೇರಿಯಾಗಿ ಪರಿವರ್ತನೆಗೊಂಡಿತು.
ಸ್ವಾತಂತ್ರö್ಯದ ನಂತರ ಕೊಡಗು ‘ಸಿ’ ರಾಜ್ಯವಾಗಿದ್ದಾಗ ಕಾರ್ಯಪ್ಪ ಅವರು ಹುಟ್ಟಿದ ಮನೆ ತಹಶೀಲ್ದಾರರ ಕಚೇರಿಯಾಗಿ, ಹೋಬಳಿ ಕಂದಾಯ ನಿರೀಕ್ಷಕರ ವಸತಿ ಗೃಹವಾಗಿ ಬಳಸಲಾಗುತ್ತಿತ್ತು. ಬಳಿಕ ೧೯೮೬ ರಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರು ತಾವು ಹುಟ್ಟಿದ ಊರು ಶನಿವಾರಸಂತೆಗೆ ಬಂದಿದ್ದ ಸಂದರ್ಭ ಅವರು ಜನಿಸಿದ ಮನೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಶನಿವಾರಸಂತೆ ಜನತೆ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಸಿ ಕಾರ್ಯಪ್ಪ ಅವರನ್ನು ಸನ್ಮಾನಿಸಿತ್ತು.
ಇಲ್ಲಿನ ನಾಗರಿಕರು ಕಾರ್ಯಪ್ಪ ಅವರು ಜನಿಸಿದ ಮನೆಯನ್ನು ಸ್ಮಾರಕ ಮಾಡಬೇಕೆಂಬ ಉದ್ದೇಶದಿಂದ ೧೯೯೭ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರನ್ನು ಗಮನ ಸೆಳೆದಿದ್ದರು. ಬಳಿಕ ಮನೆಯನ್ನು ಸಾರ್ವಜನಿಕ ಗ್ರಂಥಾಲಯವಾಗಿ ಲೋಕಾರ್ಪಣೆ ಮಾಡಲಾಯಿತು. ಇದರ ಉದ್ಘಾಟನೆಗೆ ಆಗಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಬಂದಿದ್ದರು.
ಸಾರ್ವಜನಿಕ ಗ್ರಂಥಾಲಯ ವಾಗಿರುವ ಫೀ.ಮಾ. ಕಾರ್ಯಪ್ಪ ಅವರು ಹುಟ್ಟಿದ ಮನೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ, ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಇಲ್ಲಿನ ಕಾರ್ಯಪ್ಪ ಅಭಿಮಾನಿಗಳು ಒತ್ತಾಯಿಸುತ್ತ ಬಂದಿದ್ದಾರೆ. ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಅದರಂತೆ ೨೦೧೦ರಲ್ಲಿ ಶನಿವಾರಸಂತೆಯಲ್ಲಿ ನಡೆದ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಪ್ಪ ಅವರು ಹುಟ್ಟಿದ ಮನೆಯನ್ನು ಅಭಿವೃದ್ಧಿ ಪಡಿಸುವುದು ಹಾಗೂ ಕಾರ್ಯಪ್ಪ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಸಮ್ಮೇಳನದಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಸ್ಮಾರಕ ಪ್ರಸ್ತಾವನೆ ಕೇವಲ ಆಶ್ವಾಸನೆಯಾಗಿಯೇ ಉಳಿದಿದೆ. ೨೦೧೨ರಲ್ಲಿ ಮತ್ತೆ ಶನಿವಾರಸಂತೆ ಯಲ್ಲಿ ಕೆ.ಎಂ.ಕಾರ್ಯಪ್ಪ ಅವರ ೧೧೩ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯ ಕ್ರಮದಲ್ಲಿ
(ಮೊದಲ ಪುಟದಿಂದ) ಜನಪ್ರತಿನಿಧಿಗಳು ಸ್ಮಾರಕ ನಿರ್ಮಿಸುವ ಭರವಸೆ ನೀಡಿದ್ದರು. ಕಳೆದ ಹಲವು ವರ್ಷಗಳಿಂದ ಸರಕಾರ, ಜನಪ್ರತಿನಿಧಿಗಳ ನಿರ್ಲಕ್ಷö್ಯದಿಂದ ಕಾರ್ಯಪ್ಪ ಹುಟ್ಟಿದ ಮನೆಯನ್ನು ಸ್ಮಾರಕ ಮಾಡುವ ಜನರ ಬೇಡಿಕೆ ಈಡೇರದ ಬಗ್ಗೆ ಇಂದಿಗೂ ಜನರಲ್ಲಿ ಅಸಮಾಧಾನವಿದೆ.