ಮಡಿಕೇರಿ, ಜ. ೨೬: ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇದರ ನೂತನ ೧೯ನೇ ಶಾಖೆ ಸೋಮವಾರಪೇಟೆಯಲ್ಲಿ ತಾ. ೨೭ರಂದು (ಇಂದು) ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷರಾದ ಪಿ.ಸಿ. ಜಯರಾಮ ಅವರು ತಿಳಿಸಿದ್ದಾರೆ.

ಸೋಮವಾರಪೇಟೆಯ ನಿಶಾಂತ್ ಟರ‍್ಸ್ ಒಂದನೇ ಮಹಡಿಯಲ್ಲಿ ಪೂರ್ವಾಹ್ನ ೧೧ ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕರಾದ ಅಪ್ಪಚ್ಚು ರಂಜನ್ ಶಾಖೆಯ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಡಾ. ಮಂಥರ್ ಗೌಡ, ಗಣಕೀಕರಣವನ್ನು ಎಂ.ಎ. ಮೋಹನ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಉದ್ಘಾಟಿಸಲಿದ್ದಾರೆ. ಪ್ರಥಮ ಪಾಲು ಪತ್ರ ವಿತರಣೆಯನ್ನು ಪಿ.ಕೆ. ಚಂದ್ರು- ಅಧ್ಯಕ್ಷರು, ಪಟ್ಟಣ ಪಂಚಾಯಿತಿ ಸೋಮವಾರಪೇಟೆ, ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು - ರೋಹಿತ್ ಹೆಚ್., ಯೋಜನಾಧಿಕಾರಿ ಧರ್ಮಸ್ಥಳ ಗ್ರಾಮ ಯೋಜನೆ, ಪ್ರಥಮ ಠೇವಣಿ ಪತ್ರ - ಸುವಿನಾ ಕೃಪಾಲ್ - ಕಾಫಿ ಬೆಳೆಗಾರರು ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲೀಕರಾದ ಜಿ.ಎಸ್. ಮೋಹನ್ ಭಾಗವಹಿಸಲಿದ್ದಾರೆ.