ಮಡಿಕೇರಿ, ಜ. ೨೫: ಕೊಡಗು ಜಿಲ್ಲೆಯಲ್ಲಿ ಕಳೆದ ೨೦೦೦ನೇ ಇಸವಿಯಿಂದ ಸ್ಥಾಪನೆಯಾಗಿರುವ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದಲ್ಲಿ ಸುಮಾರು ೨ ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಇವರಲ್ಲಿ ಕೆಲವರು ಮೃತಪಟ್ಟಿರುವುದು ಹಾಗೂ ಇನ್ನು ಹಲವರು ಬೇರೆಡೆ ನೆಲೆಸಿರುವ ಹಿನ್ನೆಲೆ ನಿಖರ ಮಾಹಿತಿಗಾಗಿ ಹಿಂದಿನ ಸದಸ್ಯರು ತಮ್ಮ ಸದಸ್ಯತ್ವದ ಮರು ನವೀಕರಣ ಮಾಡಿಕೊಳ್ಳಲು ಸಂಘದ ಪ್ರಮುಖರು ಕೋರಿದ್ದಾರೆ.

ಅಲ್ಲದೆ ಹೊಸದಾಗಿಯೂ ಸದಸ್ಯತ್ವ ಪಡೆಯಬಹುದಾಗಿದೆ. ಈ ಮೂಲಕ ಸಂಘದ ಚಟುವಟಿಕೆ ಹಾಗೂ ಸೇವೆಯನ್ನು ಇನ್ನಷ್ಟು ಉತ್ತಮಪಡಿಸಲು ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ.

ಮಾಜಿ ಸೈನಿಕರು ಈ ಬಗ್ಗೆ ಗಮನ ಹರಿಸುವಂತೆ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ (ಮೊ. ೯೮೪೫೩೩೧೪೩೧) ಅವರನ್ನು ಸಂಪರ್ಕಿಸಬಹುದು.