ಸೋಮವಾರಪೇಟೆ, ಜ. ೨೫: ಶನಿವಾರಸಂತೆ ಸಮೀಪದ ಚಂಗಡಹಳ್ಳಿಯಲ್ಲಿರುವ ಚಿತ್ರದುರ್ಗ ಬೃಹನ್ಮಠ ಅಧೀನದ ಚಂಗಡಹಳ್ಳಿ ಮಠವನ್ನು ಉಳಿಸಿಕೊಳ್ಳುವ ಸಲುವಾಗಿ ನೂತನವಾಗಿ ಹಿತರಕ್ಷಣಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಮಿತಿ ಸಂಚಾಲಕ ಎಂ.ಎA. ಹಾಲಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಮುರುಘಾ ಮಠದ ಅಧೀನದಲ್ಲಿರುವ ಚಂಗಡಹಳ್ಳಿ ಮಠವು ದಿವ್ಯ ನಿರ್ಲಕ್ಷö್ಯಕ್ಕೆ ಒಳಗಾಗಿದ್ದು, ಬಹುತೇಕ ಅವನತಿಯ ಹಾದಿಯನ್ನು ಹಿಡಿದಿದೆ. ಇದನ್ನು ಸಮಾಜದ ಹಿತದೃಷ್ಟಿಯಿಂದ ಉಳಿಸಿಕೊಳ್ಳುವ ಹಿನ್ನೆಲೆ ನೂತನವಾಗಿ ಸಮಿತಿಯನ್ನು ರಚಿಸಲಾಗಿದೆ ಎಂದರು.

ಚAಗಡಹಳ್ಳಿಯ ಮಠವನ್ನು ಸೋಮವಾರಪೇಟೆ ಬೇಳೂರು ಮಠದ ವ್ಯವಸ್ಥಾಪಕ ಶಶಿಕುಮಾರ್ ಅವರು ನೋಡಿಕೊಳ್ಳುತ್ತಿದ್ದರು. ಕಳೆದ ೨೦ ವರ್ಷಗಳಿಂದ ಈ ಮಠಕ್ಕೆ ಸ್ವಾಮೀಜಿಯನ್ನೂ ನೇಮಿಸಿಲ್ಲ. ಮಠದ ಆಸ್ತಿಪಾಸ್ತಿ, ಮರಮುಟ್ಟುಗಳು, ಜಾನುವಾರುಗಳನ್ನು ಮಾರಾಟ ಮಾಡಿದ್ದರೂ ಸೂಕ್ತ ಲೆಕ್ಕಪತ್ರವನ್ನು ಇಟ್ಟಿಲ್ಲ. ಸುಮಾರು ೮೦ ಏಕರೆ ಆಸ್ತಿ ಹೊಂದಿರುವ ಮಠದ ಜಾಗ ಈಗಾಗಲೇ ಒತ್ತುವರಿಯೂ ಆಗಿದೆ. ಈ ಹಿನ್ನೆಲೆ ಮೂಲ ಮಠವನ್ನು ಉಳಿಸಿಕೊಂಡು ಸಮುದಾಯಕ್ಕೆ ಸೇವೆ ಸಲ್ಲಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಚಿತ್ರದುರ್ಗ ಬೃಹನ್ಮಠಕ್ಕೆ ಸರ್ಕಾರವು ಪಿ.ಎಸ್. ವಸ್ತçದ್ ಅವರನ್ನು ಉಸ್ತುವಾರಿಯಾಗಿ ನೇಮಿಸಿದ್ದು, ವಸ್ತçದ್ ಅವರ ಸೂಚನೆಯ ಮೇರೆ ಅಂಜನಪ್ಪ, ಮಲ್ಲಿಕಾರ್ಜುನ್, ಷಣ್ಮುಖಪ್ಪ, ಚಂದ್ರಶೇಖರ್ ಅವರುಗಳು ಮಠಕ್ಕೆ ಆಗಮಿಸಿ, ಸುತ್ತಮುತ್ತಲ ಭಕ್ತಾದಿಗಳ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯಲ್ಲಿ ಚಂಗಡಹಳ್ಳಿ, ಮಾದ್ರೆ, ಕೊಡ್ಲಿಪೇಟೆ, ಯಸಳೂರು ಭಾಗದ ಪ್ರಮುಖರನ್ನು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಚಂಗಡಹಳ್ಳಿ ಮಠ ಹಿತರಕ್ಷಣಾ ಸಮಿತಿ ಕಾನೂನು ಸಲಹೆಗಾರ ಈಶ್ವರಚಂದ್ರ ಸಾಗರ್ ಮಾತನಾಡಿ, ಮಠದ ಆಸ್ತಿಯಿಂದ ಈವರೆಗೆ ಬಂದಿರುವ ಉತ್ಪತ್ತಿಯ ಬಗ್ಗೆ ವ್ಯವಸ್ಥಾಪಕರು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಮಠದ ಚಂದ್ರಶೇಖರ ಸ್ವಾಮೀಜಿ ನಿಧನನಂತರ ಕಳೆದ ೨೦ ವರ್ಷಗಳಿಂದ ನೂತನ ಸ್ವಾಮೀಜಿ ನೇಮಿಸಿಲ್ಲ. ಮಠದ ಉಸ್ತುವಾರಿಯಲ್ಲಿ ಎಡವಿರುವ ವ್ಯವಸ್ಥಾಪಕ ಶಶಿಕುಮಾರ್ ಅವರನ್ನು ಈಗಾಗಲೇ ಅಮಾನತು ಮಾಡಿದ್ದು, ಮಾರ್ಚ್ ಅಂತ್ಯದೊಳಗೆ ಮಠಕ್ಕೆ ಸ್ವಾಮೀಜಿ ನೇಮಿಸಲು ಕ್ರಮ ಕೈಗೊಳ್ಳುವುದಾಗಿ ವೀಕ್ಷಕರುಗಳು ಭರವಸೆ ನೀಡಿದ್ದಾರೆ ಎಂದರು.

ಮುAದಿನ ದಿನಗಳಲ್ಲಿ ಸೋಮವಾರಪೇಟೆ ವ್ಯಾಪ್ತಿಯಲ್ಲಿರುವ ಬೇಳೂರು ಮಠ, ಅಭಿಮಠ ಮತ್ತು ಮಾದಾಪುರ ಮಠಕ್ಕೆ ಉಸ್ತುವಾರಿಗಳ ತಂಡ ಭೇಟಿ ನೀಡಲಿದ್ದು, ಪರಿಶೀಲನೆ ನಡೆಸಲಿದ್ದಾರೆ ಎಂದ ಅವರು, ಮಠದ ಆಸ್ತಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಹೆಚ್.ಬಿ. ರೇಣುಕ ಅವರನ್ನು ನೇಮಿಸಲಾಗಿದೆ ಎಂದು ಮಾಹಿತಿಯಿತ್ತರು. ಗೋಷ್ಠಿಯಲ್ಲಿ ಹೆಚ್.ಎನ್. ಈಶ್ವರ್ ಉಪಸ್ಥಿತರಿದ್ದರು.