ಮಡಿಕೇರಿ, ಜ. ೨೫: ಜೆ.ಡಿ.ಎಸ್. ಪಕ್ಷದಲ್ಲಿನ ಮನಸ್ತಾಪದ ಬೆಳವಣಿಗೆಗೆ ಸಂಬAಧಿಸಿದAತೆ ಪ್ರಶ್ನಿಸಿದಾಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ ಗಣೇಶ್ "ಶಕ್ತಿ"ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ತಾನು ಪಕ್ಷಕ್ಕೆ ಸಂಬAಧಿಸಿದ ಪ್ರಮುಖ ನಿರ್ಧಾರಗಳನ್ನು ಎಂದಿಗೂ

(ಮೊದಲ ಪುಟದಿಂದ) ವೈಯಕ್ತಿಕವಾಗಿ ತೆಗೆದುಕೊಳ್ಳುವು ದಿಲ್ಲ. ಪಕ್ಷದ ರಾಜ್ಯ ನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರ ಗಮನಕ್ಕೆ ತಂದು ಅವರ ನಿರ್ದೇಶನ ದಂತೆಯೇ ನಾಪಂಡ ಮುತ್ತಪ್ಪ ಅವರಿಗೆ ನೋಟೀಸ್ ಕಳುಹಿಸಲಾಗಿದೆ. ಅಲ್ಲದೆ, ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಜ್ವಲ್ ರೇವಣ್ಣ ಅವರಿಗೂ ಬಳಿಕ ಮಾಹಿತಿ ನೀಡಿದ್ದೇನೆ. ನಾನು ಪಕ್ಷದ ಹಿತದೃಷ್ಟಿಯಿಂದಷ್ಟೇ ಈ ಕ್ರಮ ಕೈಗೊಂಡಿರುವುದಾಗಿ ಗಣೇಶ್ ತಮ್ಮ ಕ್ರಮವನ್ನು ಸಮರ್ಥಿಸಿ ಕೊಂಡಿದ್ದಾರೆ.