ಮಡಿಕೇರಿ, ಜ. ೨೪: ವೀರಾಜಪೇಟೆಯ ಶ್ರೀ ಕಾವೇರಿ ಆಶ್ರಮದ ಪೀಠಾಧ್ಯಕ್ಷರಾದ ವಿವೇಕಾನಂದ ಶರಣ ಸ್ವಾಮೀಜಿ ಅವರು ೧೦೧ನೇ ವರ್ಷಕ್ಕೆ ಕಾಲಿರಿಸಿದ್ದು, ಇವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ಜನ್ಮಶತಮಾನೋತ್ಸವವನ್ನು ಶ್ರೀ ಕಾವೇರಿ ಆಶ್ರಮದ ಆಡಳಿತಮಂಡಳಿಯವರು, ಸದಸ್ಯರು ಹಾಗೂ ಭಕ್ತವೃಂದವರು ಒಟ್ಟುಗೂಡಿ ಆಶ್ರಮದ ಸಭಾಂಗಣದಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು. ಅಂದು ಪ್ರಾತಃಕಾಲ ೫.೩೦ ಗಂಟೆಗೆ ಬೆಂಗಳೂರು ಓಂಕಾರ ಆಶ್ರಮದ ಭಕ್ತವೃಂದದವರಿAದ ರುದ್ರ ಘನ ಪಾರಾಯಣದೊಂದಿಗೆ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ಶ್ರೀ ಗುರುಗಳ ಆಯುರಾರೋಗ್ಯಕ್ಕಾಗಿ ಗಣಪತಿಹೋಮ, ಮೃತ್ಯುಂಜಯಹೋಮವನ್ನು ಮಾಡಲಾಯಿತು. ಇದನ್ನು ವಿರಾಜಪೇಟೆ ಶ್ರೀ ಗಣಪತಿ ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಅವರು ನಡೆಸಿಕೊಟ್ಟರು.

ನಂತರ ಸಭಾ ಕಾರ್ಯಕ್ರಮ ಪ್ರಾರಂಭವಾಗಿ ಎನ್.ಯು. ಅಯ್ಯಪ್ಪ ವಿವೇಕಾನಂದ ಶರಣ ಸ್ವಾಮಿಜಿ ಅವರ ಜೀವನ ದರ್ಶನವನ್ನು ಸಭೆಯ ಎದುರು ವಾಚಿಸಿದರು. ಈ ಸಭೆಯಲ್ಲಿ ಬೆಂಗಳೂರು ಓಂಕಾರ ಆಶ್ರಮದ ಶ್ರೀ ಮಧುಸೂಧನಾನಂದ ಪುರಿ ಸ್ವಾಮಿಗಳು, ಕೈಲಾಶ್ರಮದ ಶ್ರೀ ಬುದ್ಧಾನಂದ ಸ್ವಾಮಿಗಳು, ವೈ.ಎಸ್.ಎಸ್.ನ ಶ್ರೀ ವಿನಯಾನಂದ ಗಿರಿ ಸ್ವಾಮಿಗಳು, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಉಪಸ್ಥಿತರಿದ್ದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ವಿವೇಕಾನಂದ ಶರಣ ಸ್ವಾಮಿಜಿ ಅವರು ಸಭೆಯನ್ನು ಉದ್ದೇಶಿಸಿ ಸನಾತನ ಧರ್ಮದ ಕುರಿತಾಗಿ ಮಾತನಾಡಿದರು. ನಂತರ ಸಾಧು-ಸಂತರಿAದ ಹಾಗೂ ಭಕ್ತವೃಂದದವರಿAದ ಗುರುಗಳಿಗೆ ಪುಷ್ಪವೃಷ್ಟಿ ಮಾಡಿದರು. ಮಧ್ಯಾಹ್ನ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ, ಗೋಣಿಕೊಪ್ಪ ಇವರ ವತಿಯಿಂದ ಭಜನಾಕಾರ್ಯಕ್ರಮ ಹಾಗೂ ೫.೩೦ರಿಂದ ಮೈಸೂರಿನ ಹರಿಕಥಾ ವಿದುಷಿ ಶ್ರೀ ಡಾ. ಮಾಲಿನಿ ಅವರಿಂದ ಹರಿಕಥಾ ಕಾರ್ಯಕ್ರಮ ನಡೆಯಿತು.