ಗೋಣಿಕೊಪ್ಪಲು. ಜ. ೨೪: ರೈತ ಸಂಘದ ಚಳುವಳಿ ಮೂಲಕ ಕೊಡಗಿನಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ, ದ. ಕೊಡಗಿನ ಕಾನೂರು ಗ್ರಾಮದ ಕಾಡ್ಯಮಾಡ ಮನು ಸೋಮಯ್ಯ ಸರ್ವೋದಯ ಕರ್ನಾಟಕ ಪಕ್ಷದ ವತಿಯಿಂದ ಮುಂದೆ ನಡೆಯಲಿರುವ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ರೈತ ಸಂಘದ ರಾಜ್ಯ ಮುಖಂಡರು ಮನುಸೋಮಯ್ಯನವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಇದೀಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದ ಅಧೀನದಲ್ಲಿ ಬರುವ ಸರ್ವೋದಯ ಕರ್ನಾಟಕ ಪಕ್ಷದ ವತಿಯಿಂದ ಮನುಸೋಮಯ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.