ವೀರಾಜಪೇಟೆ, ಜ. ೨೫: ವೀರಾಜಪೇಟೆ ತಾಲೂಕು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಮತ್ತು ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತಿಸಿರುವ ಕೆರೆಗಳ ಅಭಿವೃದ್ಧಿ ಗಾಗಿ ಕೇಂದ್ರ ಸರ್ಕಾರವು ಅಮೃತ್ ಸರೋವರ್ ಕಾರ್ಯಕ್ರಮ ದಡಿಯಲ್ಲಿ ಅನುದಾನವನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಬಿಡುಗಡೆ ಗೊಳಿಸಿತ್ತು. ಕೆರೆಯ ಸುತ್ತಲು ಯಾವುದೇ ಪ್ರಾಣಿಗಳು ಹಾಗೂ ವಾಹನಗಳು ಕೆರೆಯ ಭಾಗಕ್ಕೆ ಇಳಿಯಬಾರದು ಎಂದು ತಡೆಗೋಡೆ ನಿರ್ಮಾಣ ಮಾಡುವ ಬದಲು ಕಬ್ಬಿಣದ ಬ್ಯಾರಿಕೇಡ್ ಅಳವಡಿಕೆ ಮಾಡಿರುತ್ತಾರೆ. ಇದು ಅವೈಜ್ಞಾನಿಕವಾಗಿದೆ. ಸರ್ಕಾರ ಹಣವನ್ನು ಪೋಲು ಮಾಡುವ ಉದ್ದೇಶದಿಂದ ಒಂದು ದಿನದಲ್ಲಿ ತರಾತುರಿಯಲ್ಲಿ ಕೆಲಸ ಪೂರ್ಣ ಗೊಳಿಸಲಾಗಿದೆ ಎಂದು ಚೆನ್ನಯ್ಯನ ಕೋಟೆ ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಗ್ರಾಮದ ಇತಿಹಾಸ ಪ್ರಸಿದ್ಧ ಕೆರೆಯಾದ ಚೆನ್ನಯ್ಯನಕೆರೆ ಅಭಿವೃದ್ಧಿ ಗಾಗಿ ಜಿಲ್ಲಾ ಪಂಚಾಯಿತಿಯ ವತಿಯಿಂದ ಕೆರೆಯ ಸುತ್ತಲು ಅಳವಡಿಸಲು ಬ್ಯಾರಿಕೇಡ್‌ಗೆ ಸುಮಾರು ೫ ಲಕ್ಷ ರೂಗಳ ಅನುದಾನ ಬಂದಿದೆ. ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೆ ಕಾಮ ಗಾರಿ ನಡೆದಿದೆ. ಇಲ್ಲಿ ಅಳವಡಿಸ ಲಾಗಿರುವ ಬ್ಯಾರಿಕೇಡ್ ಗುಣಮಟ್ಟ ದಿಂದ ಕೂಡಿಲ್ಲ್ಲ ಅಲ್ಲದೆ, ಅವೈಜ್ಞಾನಿಕ ರೀತಿಯಲ್ಲಿ ಅಳವಡಿಕೆ ಮಾಡಲಾಗಿದೆ. ಕಾಮಗಾರಿಯನ್ನು ಗುತ್ತಿಗೆದಾರರು ಒಂದೇ ದಿನದಲ್ಲಿ ತರಾತುರಿಯಲ್ಲಿ ಪೂರ್ಣಗೊಳಿಸಿ ಹಿಂದಿರುಗಿದ್ದಾರೆ. ಇಲ್ಲಿ ಮಾಡಿರುವ ಕೆಲಸಗಳು ಕಳಪೆ ಯಾಗಿವೆ. ಸರ್ಕಾರಕ್ಕೆ ಮತ್ತು ಅನುದಾನ ಬಿಡುಗಡೆಗೊಳಿಸಿದ ಶಾಸಕರಿಗೂ ಕಳಂಕ ಬರುವ ರೀತಿಯಲ್ಲಿ ಕೆಲಸಗಳು ನಡೆದಿವೆ ಎಂದು ಚೆನ್ನಯ್ಯನಕೋಟೆ ಗ್ರಾ.ಪಂ. ಸದಸ್ಯ ಎಂ.ಎಲ್. ವಿಜು ಆರೋಪಿಸಿದರು.
ಕೆರೆ ಸುತ್ತಲೂ ಅಳವಡಿಕೆ ಯಾಗುತ್ತಿರುವ ಬ್ಯಾರಿಕೇಡ್ ನಿರ್ಮಾಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಪರಿಶೀಲನೆ ಮಾಡಲಾಗಿದೆ. ಅತಿ ಬೇಗ ದುಸ್ಥಿತಿಗೆ ತಲುಪುವ ಪರಿಸ್ಥಿತಿಯಲ್ಲಿದೆ. ಸರ್ಕಾರದ ಹಣ ಪೋಲಾಗುತ್ತಿದೆ. ಇದೀಗ ಗ್ರಾಮಸ್ಥರು ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ. ಪೂರ್ಣಗೊಳಿಸಿ ಹಿಂದಿರುಗಿದ್ದಾರೆ. ಇಲ್ಲಿ ಮಾಡಿರುವ ಕೆಲಸಗಳು ಕಳಪೆ ಯಾಗಿವೆ. ಸರ್ಕಾರಕ್ಕೆ ಮತ್ತು ಅನುದಾನ ಬಿಡುಗಡೆಗೊಳಿಸಿದ ಶಾಸಕರಿಗೂ ಕಳಂಕ ಬರುವ ರೀತಿಯಲ್ಲಿ ಕೆಲಸಗಳು ನಡೆದಿವೆ ಎಂದು ಚೆನ್ನಯ್ಯನಕೋಟೆ ಗ್ರಾ.ಪಂ. ಸದಸ್ಯ ಎಂ.ಎಲ್. ವಿಜು ಆರೋಪಿಸಿದರು.
ಕೆರೆ ಸುತ್ತಲೂ ಅಳವಡಿಕೆ ಯಾಗುತ್ತಿರುವ ಬ್ಯಾರಿಕೇಡ್ ನಿರ್ಮಾಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಪರಿಶೀಲನೆ ಮಾಡಲಾಗಿದೆ. ಅತಿ ಬೇಗ ದುಸ್ಥಿತಿಗೆ ತಲುಪುವ ಪರಿಸ್ಥಿತಿಯಲ್ಲಿದೆ. ಸರ್ಕಾರದ ಹಣ ಪೋಲಾಗುತ್ತಿದೆ. ಇದೀಗ ಗ್ರಾಮಸ್ಥರು ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ. ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರ ಪರವಾಗಿ ಹೆಚ್.ಎಂ. ಹುರೈಸ್ ಆರೋಪಿಸಿದರು.
ಕೇಂದ್ರ ಸರ್ಕಾರದ ಅಮೃತ್ ಸರೋವರ್ ಯೋಜನೆಯ ಅಡಿಯಲ್ಲಿ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯ ಬಾಡಗ ಕೆರೆಯು ಆಯ್ಕೆ ಯಾಗಿದೆ. ಕೆರೆ ಸನಿಹದಲ್ಲೆ ಗ್ರಾಮದ ರಸ್ತೆಯು ಹಾದುಹೋಗುತ್ತದೆ. ಕೆರೆಯ ಸುತ್ತಲು ಸುಮಾರು ೧೦೦ ಮೀಟರ್ ಗಳಷ್ಟು ಅಳವಡಿಕೆಯಾಗಿರುವ ಬ್ಯಾರಿಕೇಡ್ ಕಳಪೆ ಕಾಮಗಾರಿ ಯಾಗಿದೆ, ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿಗೊಳಿಸಲು ಸಾಕಷ್ಟು ಅನುದಾನಗಳು ಬಂದರೂ ಗುತ್ತಿಗೆ ಪಡೆದ ಗುತ್ತಿಗೆದಾರರು ಮನ ಬಂದAತೆ ಕಾರ್ಯ ನಿರ್ವಹಿಸಿ ಹಿಂದಿರುಗುತ್ತಾರೆ. ಇದರಿಂದ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು. ಕಾಮಗಾರಿಯಲ್ಲಿ ಮಿಶ್ರಣ ಮಾಡಿರುವ ಸಿಮೆಂಟ್ ಕಿತ್ತು ಬಂದಿದೆ. ದೀರ್ಘ ಕಾಲ ಬಾಳಿಕೆ ಬರುವುದಿಲ್ಲ. ಇದೆಲ್ಲಾ ಸರ್ಕಾರದ ಹಣ ಪೋಲು ಮಾಡುವ ಉದ್ದೇಶವಾಗಿದೆ ಎಂದು ಆರೋಪಿಸಿದರು. ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಟಿ.ಎಸ್. ಸಮೀರ್ ಆರೋಪಿಸಿದರು.
ಈ ಸಂದರ್ಭದಲ್ಲಿ ಚೆನ್ನಯ್ಯನಕೋಟೆ ಗ್ರಾಮಸ್ಥರಾದ ರವೀಂದ್ರ ಬಾವೆ, ಸತೀಶ್, ಸುರೇಶ್ ಕಾರ್ಯಪ್ಪ, ಅನಿಲ್, ಕ್ಲೇಮೆಂಟ್, ನವೀನ್ ಅಂತೋಣಿ, ವಿನ್ಸಿ, ಹರೀಶ್ ಕಾರ್ಯಪ್ಪ, ವಿನು ಕುಮಾರ್ ಎನ್.ಪಿ. ಮತ್ತು ಗ್ರಾಮಸ್ಥರು ಹಾಜರಿದ್ದರು.
- ಕಿಶೋರ್ ಕುಮಾರ್ ಶೆಟ್ಟಿ