ನಾಪೋಕ್ಲು, ಜ. ೨೫: ಕೊಡಗಿನ ಆದಿ ಗ್ರಂಥ ಪಟ್ಟೋಳೆ ಪಳಮೆಯನ್ನು ಆಧರಿಸಿದ ಪೌರಾಣಿಕ ಕೊಡವ ಚಲನಚಿತ್ರ P&ಉ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಗೊಂಡಿರುವ ಕಲ್ಲಕೆರೆ ಮಾದೇವಿ ಸೋಮವಾರ ಕೋಕೇರಿಯ ಮಹಿಳಾ ಸಮಾಜದಲ್ಲಿ ಲೋಕಾರ್ಪ ಣೆಗೊಂಡಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನು ಮುತ್ತಪ್ಪ, ಉತ್ತಮ ಪೌರಾಣಿಕ ಕೊಡವ ಚಲನಚಿತ್ರವೊಂದು ಬಿಡುಗಡೆಗೊಂಡಿದೆ. ಕೊಡವ ಜನಾಂಗದವರು ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಚಿತ್ರದ ನಿರ್ಮಾಪಕಿ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ, ಕಲ್ಲಕೆರೆ ಮಾದೇವಿ ಚಲನಚಿತ್ರವನ್ನು ಹೊರ ತರಲು ಚಿತ್ರತಂಡ ತುಂಬಾ ಶ್ರಮವಹಿಸಿದೆ. ಕೊಡಗಿನ ಪ್ರಥಮ ಪೌರಾಣಿಕ ಕಥೆಯಾಗಿ ಚಿತ್ರ ಮೂಡಿ ಬಂದಿದ್ದು, ಕೊಡವ ಸಾಂಪ್ರದಾಯಿಕ ವಸ್ತುಗಳಾದ ದುಡಿ, ಪತ್ತಾಕ್ ಮತ್ತಿತರ ಪರಿಕರಗಳ ಪೌರಾಣಿಕ ಹಿನ್ನೆಲೆಯನ್ನು ವಿವರಿಸಲಾಗಿದೆ. ಚಿತ್ರದಲ್ಲಿ ಪಾಲ್ಗೊಂಡ ವರು ನುರಿತ ಕಲಾವಿದರಲ್ಲ. ಆದರೆ ಚಿತ್ರತಂಡ ಆಸಕ್ತಿಯಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ತಂಡದ ಎಲ್ಲಾ ಸದಸ್ಯರು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ ಎಂದ ರೀನಾ ಪ್ರಕಾಶ್, ವಿಶೇಷ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಸಾರ್ವಜನಿಕರು ಚಲನ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಕೋಕೇರಿ ಗ್ರಾಮದ ಹಿರಿಯರಾದ ಚೇನಂಡ ಗೌರಿ ಈರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಚೆಯ್ಯಂಡಾಣೆ ಕೊಡವ ಸಮಾಜದ ಅಧ್ಯಕ್ಷ ಮುಂಡ್ಯೋಳAಡ ಬಿದ್ದಪ್ಪ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶಿವಕುಮಾರ್ ನಾಣಯ್ಯ, ಮಹಿಳಾ ಸಮಾಜ ಅಧ್ಯಕ್ಷೆ ಪೆಮ್ಮಂಡ ಶಶಿ ಕಾವೇರಿಯಮ್ಮ, ಸಹ ನಿರ್ಮಾಪಕಿ ಕಾವ್ಯ ಸಂಜು, ಉದ್ಯಮಿ ಆರ್. ಉಮೇಶ್, ಮಡಿಕೇರಿ ಸಿಎಂಸಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಚಿತ್ರದ ತಂತ್ರಜ್ಞರು, ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ಕಲಾವಿದರ ಬಳಗ, ಸಾರ್ವಜನಿಕರು ಉಪಸ್ಥಿತರಿದ್ದರು.