ಕುಶಾಲನಗರ, ಜ.೨೪: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಟ್ಟದ ಕ್ರೀಡಾಕೂಟ ಫೆ.೨೫ ರಂದು ಕುಶಾಲನಗರದಲ್ಲಿ ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಘಟಕದ ಹೆಚ್.ವಿ ಶಿವಪ್ಪ ತಿಳಿಸಿದ್ದಾರೆ.

ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿ ವರ್ಷದಂತೆ ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ೨೦೨೧-೨೨ ನೇ ಸಾಲಿನಲ್ಲಿ ಶೇ. ೮೦ ಮತ್ತು ಹೆಚ್ಚು ಅಂಕ ಪಡೆದ ಸಮಾಜ ಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು, ಈ ಬಗ್ಗೆ ದಾಖಲೆಗಳೊಂದಿಗೆ ಅರ್ಜಿಗಳನ್ನು ಮಹಾ ಸಭಾದ ಪ್ರಮುಖರಿಗೆ ಸಲ್ಲಿಸುವಂತೆ ಕೋರಿದರು.

ಅರ್ಜಿ ಜೊತೆ ವಿದ್ಯಾರ್ಥಿಗಳ ೨ ಭಾವಚಿತ್ರಗಳು, ಅಂಕಪಟ್ಟಿ ಮತ್ತು ಆಧಾರ್ ಪ್ರತಿಗಳನ್ನು ಫೆಬ್ರವರಿ ೧೦ರ ಒಳಗೆ ಶಾಂಭಶಿವಮೂರ್ತಿ - ೯೪೪೮೩೩೬೭೮೧, ಜಿ.ಎಂ ಕಾಂತರಾಜು- ೭೪೮೩೪೧೧೬೦೧, ಸುರೇಶ್ ವೀರಾಜಪೇಟೆ- ೯೪೪೮೧೦೮೦೯೧, ಆದರ್ಶ್ ಸೋಮವಾರಪೇಟೆ- ೬೩೬೨೦೫೯೧೯೮ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಒದಗಿಸುವಂತೆ ಕೋರಿದರು. ಮಹಾಸಭಾದ ವೇದಿಕೆ ಕಾರ್ಯಕ್ರಮವನ್ನು ಮಾರ್ಚ್ ೧೧ ರಂದು ಏರ್ಪಡಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್ ಶಾಂಭಶಿವಮೂರ್ತಿ, ಕೋಶಾಧ್ಯಕ್ಷ ಹೆಚ್.ಪಿ ಶಿವಕುಮಾರ್ ಇದ್ದರು.